ವಚನಗಳ ಸಾರದಂತೆ ನಡೆಯುವುದು ಮುಖ್ಯ

KannadaprabhaNewsNetwork |  
Published : May 01, 2025, 12:46 AM IST
 ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ | Kannada Prabha

ಸಾರಾಂಶ

ವಚನ ನುಡಿದಂತೆ ನಡೆಯುವುದು ಬಹು ಮುಖ್ಯ ಎಂದು ತಹಸೀಲ್ದಾರ್ ರಶ್ಮಿ ಹೇಳಿದರು

ಕನ್ನಡಪ್ರಭ ವಾರ್ತೆ ಕುಣಿಗಲ್ ವಚನ ನುಡಿದಂತೆ ನಡೆಯುವುದು ಬಹು ಮುಖ್ಯ ಎಂದು ತಹಸೀಲ್ದಾರ್ ರಶ್ಮಿ ಹೇಳಿದರು. ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಜಾತಿ ಧರ್ಮಗಳಲ್ಲೂ ಒಂದೊಂದು ಗುರುಗಳ ಜಯಂತಿಯನ್ನು ನಾವು ಆಚರಿಸುತ್ತಾ ಬಂದಿದ್ದೇವೆ ಆದರೆ ಹಲವಾರು ಮಹಾಪುರುಷರು ಹೇಳುವ ಸಿದ್ಧಾಂತಗಳು ಒಂದೇ ಆಗಿದೆ. ಮನುಷ್ಯ ಕುಲದ ಒಳತಿಗಾಗಿ ಹಾಗೂ ಸಮಾಜದ ಜಾಗೃತಿಗಾಗಿ ಮಹಿಳಾ ಸಮಾನತೆಗಾಗಿ ಹಲವಾರು ಗುರುಗಳು ಹೋರಾಟ ಮಾಡಿ ತಮ್ಮದೇ ಆದ ವಚನಗಳ ಮುಖಾಂತರ ಮಾಡಿದ್ದಾರೆ ಆದರೆ ಅದನ್ನು ನಾವು ಕೇಳಿ ಹೋಗುವುದಕ್ಕಿಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ ಬಸವಣ್ಣ ತನ್ನ ಜೀವನದಲ್ಲಿ ಉತ್ತಮವಾದ ಕಾರ್ಯ ಸಾಧನೆ ಮಾಡಿದ್ದಾರೆ ಮದುವೆ ಆಗಿ ತನ್ನ ಕುಟುಂಬದ ನಿರ್ವಹಣೆಯ ಮಾಡುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ ವಿಶ್ವಗುರು ಆಗಿದ್ದಾರೆ ಎಂದರು.

ಹುಲಿಯೂರ್ ದುರ್ಗಾ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಬಸವಣ್ಣ ಕೇವಲ ಸಾಂಸಾರಿಕವಾಗಿ ಮಾತ್ರ ಉಳಿಯಲಿಲ್ಲ ಎರಡು ಮದುವೆ ಆದರು ಕೂಡ ಧರ್ಮ ಜಾಗೃತಿ ಮಾಡುತ್ತಾ ಸಮಾಜದ ಅಭಿವೃದ್ಧಿ ಮಹಿಳೆಯರ ಸಮಾನತೆ ಅಸ್ಪೃಶ್ಯತೆ ನಿವಾರಣೆ ಹೀಗೆ ಹಲವಾರು ವಿವಿಧ ಸಮಸ್ಯೆಗಳ ಬಗ್ಗೆ ಹೋರಾಡಿ ತನ್ನದೇ ಆದ ಜೀವನವನ್ನು ಸಾರ್ಥಕ ಪಡಿಸಿಕೊಂಡರು ಎಂದರು.ಅಟವಿ ಸ್ವಾಮಿ ದೇವಾಲಯದಲ್ಲಿ ಮಜ್ಜಿಗೆ ಪಾನಕ ವಿತರಣೆ

ಕುಣಿಗಲ್ ಪಟ್ಟಣದ ತುಮಕೂರು ರಸ್ತೆಯಲ್ಲಿ ಅಟವೀಶ್ವರ ಸ್ವಾಮಿ ದೇವಾಲಯದಲ್ಲಿ ಕುಣಿಗಲ್ ಟೌನ್ ವೀರಶೈವ ಸಮಾಜ ಹಾಗೂ ಕುಣಿಗಲ್ ತಾಲೂಕು ವೀರಶೈವ ಸಮಾಜದ ವತಿಯಿಂದ ಬಸವೇಶ್ವರನ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು ದೇವಾಲಯಕ್ಕೆ ಬಸವ ಜಯಂತಿ ಹಿನ್ನೆಲೆಯಲ್ಲಿ ಬಾಳೆ ಹಾಗೂ ಮಾವಿನ ಸೊಪ್ಪುಗಳಿಂದ ಶೃಂಗರಿಸಲಾಗಿತ್ತು. ಹುಲಿಯೂರ್ ದುರ್ಗದ ಸಿದ್ಧಲಿಂಗ ಸ್ವಾಮೀಜಿ ವಸಂತಕುಮಾರ್, ಬಸವರಾಜು, ವಕೀಲ ಕುಮಾರ್, ಪ್ರಸಾದ್, ಗಂಗಾಧರ ಸ್ವಾಮಿ ಇತರರಿದ್ದರು. ಪೋಲಿಸ್ ಠಾಣೆಯಲ್ಲಿ ಬಸವ ಜಯಂತಿ

ವಿವಾದದಿಂದಾಗಿ ಕುಣಿಗಲ್‌ ಪೊಲೀಸ್‌ ಠಾಣೆ ಸುಪರ್ದಿಯಲ್ಲಿರುವ ಬಸವೇಶ್ವರ್‌ ವಿಗ್ರಹಕ್ಕೆ ಪೊಲೀಸ್‌ ಅಧಿಕಾರಿಗಳು ಪೂಜೆ ಸಲ್ಲಿಸಿದರು. ಈ ವೇಳೆ ಬಂದಿದ್ದ ಭಕ್ತರಿಗೆ ಮಜ್ಜಿಗೆ ಪಾನಕ ವಿತರಿಸಿದರು.

ಹುಲಿಯೂರುದುರ್ಗದಲ್ಲಿ : ತಾಲೂಕಿನ ಹುಲಿಯೂರ್ ದುರ್ಗದ ವೀರಶೈವ ಮಂಡಳಿ ವತಿಯಿಂದ ವಿಶೇಷವಾಗಿ ಬಸವ ಜಯಂತಿಯನ್ನು ಆಚರಿಸಲಾಯಿತು. ಊರ ಬೀದಿಯ ಕಂಬಗಳಿಗೆ ಬಾಳೆ ಕಂದು ಮಾವಿನ ಸೊಪ್ಪು ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ಕೇಸರಿ ಧ್ವಜಗಳನ್ನು ಕಟ್ಟಿ ಯುವಕರು ಶೃಂಗರಿಸಿದ್ದರು. ಮಧ್ಯಾಹ್ನ ಬಸವೇಶ್ವರನ ಭಾವಚಿತ್ರಕ್ಕೆ ವಿಶೇಷವಾದ ಪೂಜೆ ಮಾಡಿ ನಂತರ ಬಂದಿದ್ದ ಭಕ್ತರಿಗೆ ಅನ್ನದಾನ ಮಾಡಿದರು. ಬಸವೇಶ್ವರನ ಪುತ್ಥಳಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಹುಲಿಯೂರ್ ದುರ್ಗದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವರು ವೀರಶೈವ ಮುಖಂಡರು ಹಾಗೂ ಇತರ ಸಮಾಜದ ಬಂಧುಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ