ರಾಜಕಾರಣಿ ಅಧಿಕಾರಿ ಆಗೋದು ಅಸಾಧ್ಯ: ಶಾಸಕ ವಜ್ಜಲ್

KannadaprabhaNewsNetwork |  
Published : Mar 26, 2025, 01:38 AM IST
25ಕೆಪಿಎಲ್ಎನ್ಜಿ01  | Kannada Prabha

ಸಾರಾಂಶ

ಲಿಂಗಸುಗೂರು ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜರುಗಿದ ಸರ್ಕಾರಿ ನೌಖರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರುರಾಜಕಾರಣಿಗಳ ಅಧಿಕಾರಿ ಕೇವಲ ಐದು ವರ್ಷ ಇರುತ್ತದೆ ಆದರೆ ಉತ್ತಮ ವ್ಯಾಸಾಂಗ ಮಾಡಿ ಸರ್ಕಾರಿ ಅಧಿಕಾರಿ ಹುದ್ದೆ ಪಡೆದರೆ ಜೀವನದ 60 ವರ್ಷವೂ ಅಧಿಕಾರಿ ಇರುತ್ತದೆ. ಅಧಿಕಾರಿ ರಾಜಕಾರಣಿ ಆಗಬಹುದು ಆದರೆ ರಾಜಕಾರಣಿ ಅಧಿಕಾರಿ ಆಗಲು ಅಸಾಧ್ಯ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು. ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ತಾಲೂಕ ಮಟ್ಟದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸರ್ಕಾರಿ ನೌಕರರಿಗೆ ಉತ್ತಮವಾದ ವ್ಯವಸ್ಥೆಗಳು ಇವೆ. ಸರ್ಕಾರಿ ಹುದ್ದೆಗಳು ಪಡೆದರೆ ಜೀವನ ಉತ್ತಮವಾಗಿ ಸಾಗುತ್ತದೆ ಲಿಂಗಸುಗೂರಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಕಲ್ಯಾಣ ಕರ್ನಾಟಕದ ನಿಧಿಯಡಿ 25 ಲಕ್ಷ ರೂಪಾಯಿಗಳ ಅನುದಾನ ಒದಗಿಸಿ ಸುಸಜ್ಜಿತ ಭವನದ ನಿರ್ಮಾಣ ಮಾಡಲಾಗುವುದೆಂದು ಭರವಸೆ ನೀಡಿದರು.ರಾಜ್ಯ ಸರ್ಕಾರ ತರಾಟೆಗೆ : ನಾರಾಯಣಪುರ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವಂತೆ ರೈತರು ಆಗ್ರಹಿಸಿದರು ರಾಜ್ಯ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಆದರೆ ತೆಲಂಗಾಣಕ್ಕೆ ನೀರು ಹರಿಸುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ದುರ್ದೈವದ ಸಂಗತಿಯಾಗಿದೆ ಎಂದರು.ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ವೇತನ ಹೆಚ್ಚಳಕ್ಕೆ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ. ರಾಜ್ಯದ ನೌಕರರಿಗೂ ಕೇಂದ್ರ ನೌಕರರ ಸಮಾನ ವೇತನ ಸಿಗಬೇಕು ಎಂಬ ಮಹದಾಸೆ ಇದೆ. ಸರ್ಕಾರ ನೌಕರರ ಬೇಡಿಕೆಗೆ ಸ್ಪಂಧಿಸದಿದ್ದರೆ ರಾಜ್ಯ ಸರ್ಕಾರ ವಿರುದ್ದ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಡಾ. ಭೀಮಣ್ಣ ನಾಯಕ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಎಪಿಎಂಸಿ ಕಾರ್ಯದರ್ಶಿ ರಂಗನಾಥ ದೇಸಾಯಿ, ತಹಸೀಲ್ದಾರ ಬಸವರಾಜ ಜಳಕಿಮಠ, ಮಲ್ಲಿಕಾರ್ಜುನ ಬಳ್ಳಾರಿ, ಎನ್ಪಿಎಸ್ ಅಧ್ಯಕ್ಷ ಸಣ್ಣಮಾಬುಸಾಬ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವೀಂದ್ರ ಉಪ್ಪಾರ, ಬಿಸಿಎಂ ಇಲಾಖೆ ಅಧಿಕಾರಿ ರಮೇಶ ರಾಠೋಡ, ಅಬಕಾರಿ ಇಲಾಖೆ ಲಕ್ಷ್ಮೀ ದೇವಿ, ನೌಕರರ ಸಂಘದ ತಾಲೂಕ ಅಧ್ಯಕ್ಷ ಹಾಜುಬಾಬು, ಲಿಯಾಖತ್‌ ಅಲಿ, ಮಾನಪ್ಪ ಬಡಿಗೇರ, ಸಂಗಮೇಶ ವಸ್ತçದ ಸೇರಿದಂತೆ ಇದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’