ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ತಾಲೂಕು ಎರಡು ರಾಜ್ಯಗಳ ಗಡಿಭಾಗವಾಗಿದ್ದು, ತಾಲೂಕಿನ ಕನ್ನಡ ಪರ ಸಂಘಟನೆಗಳನ್ನು ಕನ್ನಡ ಸಂಘದ ಅಧ್ಯಕ್ಷರು ಒಟ್ಟುಗೂಡಿಸಿಕೊಂಡು ತಾಲೂಕಿನಲ್ಲಿ ಕನ್ನಡ ರಾಜ್ಯತ್ಸೋವದ ಕಾರ್‍ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.ಕೆಜಿಎಫ್ ತಾಲೂಕು ಆಡಳಿತ ಹಾಗೂ ಕನ್ನಡ ಸಂಘದಿಂದ ೬೯ನೇ ವರ್ಷದ ಕನ್ನಡ ರಾಜ್ಯತ್ಸೋವ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ನ.೧ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ರಾಜ್ಯ ಏಕೀಕರಣವಾಗಿದ್ದು ನ.೧,೧೯೭೩ ರಂದು, ಕರ್ನಾಟಕ ರಾಜ್ಯವೆಂದು ಮರು ನಾಮಕರಣಗೊಂಡು ೫೦ ವರ್ಷ ಪೂರ್ಣಗೊಂಡಿರುವ ಸುದಿನದಂದು ನ.೧, ೪೯ ವರ್ಷಗಳಿಂದ ಸತತ ಕನ್ನಡದ ಕಾರ್‍ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿಯೂ ನಮ್ಮ ಕನ್ನಡದ ಉತ್ಸವ ಅರ್ಥಪೂರ್ಣವಾಗಿ ಗಡಿನಾಡು ಭಾಗದ ಕೆಜಿಎಫ್ ತಾಲೂಕಿನಲ್ಲಿ ಆಚರಿಸುವುದರ ಮೂಲಕ ಕನ್ನಡದ ಕಂಪನ್ನು ಎಲ್ಲಡೆ ಪಸರಿಸಲು ತಾಲೂಕಿನ ಜನತೆಗೆ ಮನವಿ ಮಾಡಿದರು.
ಕನ್ನಡ ಭವನ ಕಟ್ಟಲು ಅನುದಾನನ.೧ ದಿನಕ್ಕೆ ಮಾತ್ರ ಕನ್ನಡ ಕಾರ್‍ಯಕ್ರಮ ಸೀಮಿತವಾಗವಾರದು, ವರ್ಷ ಪೂರ್ತಿ ಕನ್ನಡ ಸಂಘದಲ್ಲಿ ಕಾರ್‍ಯಕ್ರಮಗಳು ನಡೆಯುವಂತಾಗಬೇಕು, ಕನ್ನಡ ಸಂಘದ ಕಟ್ಟಡಕ್ಕೆ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ೨೫ ಲಕ್ಷ ರೂ.ಗಳನ್ನು ನೀಡಿದ್ದು, ಕಟ್ಟಡ ಪ್ರಾರಂಭಸಿದ ನಂತರ ಕನ್ನಡ ಸಂಘಕ್ಕೆ ಅಗತ್ಯವಿರುವ ಅನುದಾನ ನೀಡಲಾಗುವುದೆಂದು ತಿಳಿಸಿದರು.ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ