ಬೇಸಿಗೆಯಲ್ಲಿ ನೀರಿನ ಅಂಶ ಹೆಚ್ಚಿರುವ ಆಹಾರ ಸೇವನೆ ಅಗತ್ಯ: ಡಾ.ಅಂಜನಾ ಆಚಾರ್ಯ

KannadaprabhaNewsNetwork |  
Published : Apr 20, 2026, 02:00 AM IST
ಬೇಸಿಗೆ ಕಾಲದ ಮನುಷ್ಯನ ದಿನಚರಿ ಬಗ್ಗೆ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಬೇಸಿಗೆಯಲ್ಲಿ ನೀರಿನ ಅಂಶ ಹೆಚ್ಚಿರುವಂತಹ ಆಹಾರ ಸೇವನೆ ಅಗತ್ಯ ಎಂದು ಡಾ.ಅಂಜನಾ ಆಚಾರ್ಯ ಹೇಳಿದ್ದಾರೆ. ಪಟ್ಟಣದ ಮಮತ ಮಹಿಳಾ ಸಮಾಜದಿಂ ಸಮಾಜದಲ್ಲಿ ಬೇಸಿಗೆ ಕಾಲದ ಮನುಷ್ಯನ ದಿನಚರಿ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬೆಳಗ್ಗೆ ಎದ್ದಾಗಿನಿಂದ ಬೇಸಿಗೆಯಲ್ಲಿ ನೀರಿನ ಅಂಶ ಹೆಚ್ಚಿರುವಂತಹ ಆಹಾರ ಸೇವನೆ, ಜ್ಯೂಸ್, ಮಜ್ಜಿಗೆ, ನೀರು ಸಾಕಷ್ಟು ತೆಗೆದುಕೊಳ್ಳಬೇಕು, ಬಿಸಿಲಿನಿಂದ ಬಂದ ತಕ್ಷಣ ಫ್ರಿಜ್ ವಾಟರ್ ಕುಡಿಯಬೇಡಿ ರಕ್ತನಾಳಗಳು ಸಂಕುಚಿತವಾಗುತ್ತವೆ. ಗಂಟೆಗೊಂದು ಸಲ ನೀರು ಕುಡಿಯಿರಿ ಎಂದು ತಿಳಿಸಿದ ಅವರು ಬೇಸಿಗೆಯಲ್ಲಿ ಬರುವಂತಹ ಕಾಯಿಲೆಗಳು ಸ್ಕಿನ್ ಅಲರ್ಜಿಗಳ ಬಗ್ಗೆ ಮಾತನಾಡಿದರು.

ಬೇಸಿಗೆ ಕಾಲದ ಮನುಷ್ಯನ ದಿನಚರಿ ಬಗ್ಗೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಬೇಸಿಗೆಯಲ್ಲಿ ನೀರಿನ ಅಂಶ ಹೆಚ್ಚಿರುವಂತಹ ಆಹಾರ ಸೇವನೆ ಅಗತ್ಯ ಎಂದು ಡಾ.ಅಂಜನಾ ಆಚಾರ್ಯ ಹೇಳಿದ್ದಾರೆ. ಪಟ್ಟಣದ ಮಮತ ಮಹಿಳಾ ಸಮಾಜದಿಂ ಸಮಾಜದಲ್ಲಿ ಬೇಸಿಗೆ ಕಾಲದ ಮನುಷ್ಯನ ದಿನಚರಿ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬೆಳಗ್ಗೆ ಎದ್ದಾಗಿನಿಂದ ಬೇಸಿಗೆಯಲ್ಲಿ ನೀರಿನ ಅಂಶ ಹೆಚ್ಚಿರುವಂತಹ ಆಹಾರ ಸೇವನೆ, ಜ್ಯೂಸ್, ಮಜ್ಜಿಗೆ, ನೀರು ಸಾಕಷ್ಟು ತೆಗೆದುಕೊಳ್ಳಬೇಕು, ಬಿಸಿಲಿನಿಂದ ಬಂದ ತಕ್ಷಣ ಫ್ರಿಜ್ ವಾಟರ್ ಕುಡಿಯಬೇಡಿ ರಕ್ತನಾಳಗಳು ಸಂಕುಚಿತವಾಗುತ್ತವೆ. ಗಂಟೆಗೊಂದು ಸಲ ನೀರು ಕುಡಿಯಿರಿ ಎಂದು ತಿಳಿಸಿದ ಅವರು ಬೇಸಿಗೆಯಲ್ಲಿ ಬರುವಂತಹ ಕಾಯಿಲೆಗಳು ಸ್ಕಿನ್ ಅಲರ್ಜಿಗಳ ಬಗ್ಗೆ ಮಾತನಾಡಿದರು.

ಮಮತ ಮಹಿಳಾ ಸಮಾಜ ಅಧ್ಯಕ್ಷೆ ಸಹನ ರಾಘವೇಂದ್ರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬೇಸಿಗೆ ಕಾಲದ ದಿನಚರಿ ಬಗ್ಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲನೆ ಬಹುಮಾನ ಲತಾ ಹರೀಶ್ ಹಾಗೂ ಎರಡನೆ ಬಹುಮಾನ ಹೇಮಾ ರಾಮಲಿಂಗಪ್ಪ ಅವರಿಗೆ ದೊರೆಯಿತು. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಹುಟ್ಟುಹಬ್ಬ ಆಚರಿಸಲಾಯಿತು. ಮರೆಯಾದ ಗಾನ ಧ್ರುವತಾರೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಆಶಾ ಭೋಸ್ಲೆ ಅವರಿಗೆ ಮೌನಚರಣೆ ಹಾಗೂ ಅವರ ಗೀತೆ ಹಾಡುವ ಮೂಲಕ ನಮನ ಸಲ್ಲಿಸಲಾಯಿತು. ಜ್ಯೋತಿ ನಾಗರಾಜ್, ವಿಜಯ ಪ್ರಕಾಶ್, ರೋಹಿಣಿ ನರಸಿಂಹಮೂರ್ತಿ ಆಶಾ ಭೋಸ್ಲೆ ಗೀತೆಗಳನ್ನು ಹಾಡಿದರು. ಭಾಷಣ ಸ್ಪರ್ಧೆಯಲ್ಲಿ ಗೆದ್ದವರಿಗೆ ಅಭಿನಂದಿಸಿ ಬಹುಮಾನ ವಿತರಿಸಲಾಯಿತು.

ಕಾರ್ಯದರ್ಶಿ ರೇಣು ನವೀನ್, ರೂಪ ಕೃಷ್ಣಮೂರ್ತಿ, ಅನಿತಾ ಕಿಶೋರ್, ಲಕ್ಷ್ಮಿ ಮಧುಕರ್ ಸಮಾಜದ ಸದಸ್ಯೆಯರು ಭಾಗವಹಿಸಿದ್ದರು.-

18ಕೆಟಿಆರ್.ಕೆ.2ಃ ತರೀಕೆರೆಯಲ್ಲಿ ಮಮತ ಮಹಿಳಾ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಮಮತ ಮಹಿಳಾ ಸಮಾಜ ಅಧ್ಯಕ್ಷೆ ಸಹನ ರಾಘನೇಂದ್ರ ಉದ್ಘಾಟಿಸಿದರು. ಡಾ.ಅಂಜನಾ ಆಟಾರ್ಯ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ: ಜೆಡಿಎಸ್‌ ಪ್ರತಿಭಟನೆ
ವಿಶ್ವಕರ್ಮ ಸಮಾಜ ಸಂಘಟಿತರಾಗಲಿ: ಕೆ.ಪಿ. ನಂಜುಂಡಿ