ಕನ್ನಡಪ್ರಭ ವಾರ್ತೆ ಸಿರಿಗೆರೆ
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಇಂದಿರಾ ನಗರದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯಿಂದ ನ್ಯುಮೋನಿಯಾ ಕುರಿತು ಆಯೋಜಿಸಿದ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.ಸ್ವಚ್ಛತೆಗೆ ಆದ್ಯತೆ ನೀಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಸಕಾಲಕ್ಕೆ ಪಡೆದು ಮಗುವಿಗೆ ಸೋಂಕು ತಗುಲದಂತೆ ಜಾಗ್ರತೆ ವಹಿಸಬೇಕು. ತಾಯಿ ಮತ್ತು ಶಿಶು ಮರಣಕ್ಕೆ ಕಡಿವಾಣ ಹಾಕಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ನ್ಯುಮೋನಿಯಾ ಇದು ಒಂದು ಸ್ವಾಶಕೋಶದ ಸೋಂಕು. ಕಳೆದ ನವಂಬರ್ 12 ರಿಂದ ಮುಂಬರುವ ಫೆಬ್ರವರಿ 28 ರವರೆಗೆ ನ್ಯುಮೋನಿಯಾ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಮಗುವಿಗೆ ಜ್ವರ, ಹಸಿವು ಇಲ್ಲದಿರುವುದು, ಕೆಮ್ಮು ಮತ್ತು ಹಳದಿ ರಕ್ತದ ಕಫೆ ರೋಗಲಕ್ಷಣಗಳು. ರೋಗ ತಡೆಗೆ ಮಕ್ಕಳಿಗೆ ಸಾಕಷ್ಟು ಪೌಷ್ಟಿಕಾಂಶ ಒದಗಿಸಿ, ಸರಿಯಾದ ಸಮಯಕ್ಕೆ ಚುಚ್ಚುಮದ್ದು ಹಾಕಿಸಬೇಕು. ಮನೆಯೊಳಗೆ ಮಾಲಿನ್ಯ ನಿಯಂತ್ರಿಸಿ, ಮೊದಲ ಆರು ತಿಂಗಳು ತಾಯಿಯ ಎದೆ ಹಾಲನ್ನು ಮಾತ್ರ ನೀಡುವ ಮುಖಾಂತರ ಸೋಂಕು ಬಾರದಂತೆ ತಡೆಯಬಹುದು ಎಂದರು.ಮಹಿಳೆಯರಲ್ಲಿ ಕಿಬ್ಬೊಟ್ಟೆ ನೋವು ಅಸಹಜ ರಕ್ತಸ್ರಾವ ಜನನಾಂಗ ಮಾರ್ಗದ ಸೋಂಕುಗಳು ಕುರಿತು ಮಾಹಿತಿ ನೀಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ , 30 ವರ್ಷ ಮೇಲ್ಪಟ್ಟವರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದು ಉತ್ತಮ ಆರೋಗ್ಯ ಹೊಂದಬೇಕು ಎಂದರು.