ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬೆಳೆಸುವುದು ಅವಶ್ಯಕ

KannadaprabhaNewsNetwork |  
Published : Mar 04, 2026, 02:30 AM IST
3ಕೆಪಿಎಲ್2:ಕೊಪ್ಪಳ ನಗರದ ಸರದಾರಗಲ್ಲಿ ಶಾಲೆಯಲ್ಲಿ ಐದು ದಿನ ಜರುಗಿದ ಕಾರ್ಯಗಾರ ಜರುಗಿತು. | Kannada Prabha

ಸಾರಾಂಶ

ಮಕ್ಕಳಲ್ಲಿ ಮೌಲ್ಯ ಶಿಕ್ಷಣ ಬೆಳೆಸುವುದರ ಜತೆಗೆ ಸಮಯ ಪಾಲನೆ ಮಾಡುವುದು, ತರಬೇತಿಯಲ್ಲಿ ಪಡೆದುಕೊಂಡ ಜ್ಞಾನವನ್ನು ತರಗತಿ ಕೋಣೆಯಲ್ಲಿ ಅಳವಡಿಸಿಕೊಂಡು ಬೋಧನ ಕೌಶಲ್ಯ ಉತ್ತಮಗೊಳಿಸಬೇಕು

ಕೊಪ್ಪಳ: ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬೆಳೆಸುವ ಅವಶ್ಯಕತೆ ಇದೆ ಎಂದು ಡಯಟ್ ಹಿರಿಯ ಉಪನ್ಯಾಸಕ, ಕಾರ್ಯಕ್ರಮದ ನೋಡಲ್ ಅಧಿಕಾರಿ ಗವಿಸಿದ್ದೇಶ್ವರಸ್ವಾಮಿ ಬೆನಕಲ್ಮಠ ಹೇಳಿದರು.

ನಗರದ ಸರದಾರಗಲ್ಲಿ ಶಾಲೆಯಲ್ಲಿ ಐದು ದಿನ ಜರುಗಿದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಮೌಲ್ಯ ಶಿಕ್ಷಣ ಬೆಳೆಸುವುದರ ಜತೆಗೆ ಸಮಯ ಪಾಲನೆ ಮಾಡುವುದು, ತರಬೇತಿಯಲ್ಲಿ ಪಡೆದುಕೊಂಡ ಜ್ಞಾನವನ್ನು ತರಗತಿ ಕೋಣೆಯಲ್ಲಿ ಅಳವಡಿಸಿಕೊಂಡು ಬೋಧನ ಕೌಶಲ್ಯ ಉತ್ತಮಗೊಳಿಸಬೇಕು. ಜ್ಞಾನ ಸೇತು, ಮರುಸಿಂಚನ, ಪೋಕ್ಸೋ ಹಾಗೂ ನಿವೃತ್ತಿ ಅಂಚಿನಲ್ಲೂ ತರಬೇತಿ ಅವಶ್ಯವೆಂದು ತಿಳಿಸಿದರು.

ಜಿಲ್ಲಾ ಸ.ಪ್ರಾ.ಶಾ.ಶಿ. ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬೂಮಕ್ಕನವರು ಹಾಗೂ ಜಿಪಿಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಠೀಕೋನ ಪ್ರತಿಯೊಬ್ಬರ ಚಿಂತನೆ ಆಗಬೇಕು ಎಂದರು.

ಬಿಆರ್ ಪಿ ಜ್ಞಾನಸೇತು ತಾಲೂಕು ನೋಡಲ್ ಅಧಿಕಾರಿ ಮಂಜುನಾಥ ಕೊಪ್ಪಳ, ಎಪಿಎಫ್ ಶೋಭನಾ, ಸುಮಂಗಲಾ, ಬಿಆರ್ ಪಿ ಹನುಮರೆಡ್ಡಿ, ಸಂಪನ್ಮೂಲ ವ್ಯಕ್ತಿ ವೀರೇಶ ಮೇಟಿ, ಜಿಪಿಟಿ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ನೇತ್ರಾವತಿ ಹಳ್ಳಿ, ತಾಲೂಕು ಪದಾಧಿಕಾರಿ ಗವಿಸಿದ್ದಪ್ಪ, ಸಂಪನ್ಮೂಲ ವ್ಯಕ್ತಿ ಮರ್ದಾನಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣ ತಾಲೂಕಿನಲ್ಲಿ 36 ಶುದ್ಧ ನೀರಿನ ಘಟಕಗಳೇ ಬಂದ್!
ರೋಗಿಗಳಿಗೆ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಿ: ಡಾ. ಕೃಷ್ಣ