ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಕಲಾಜ್ಯೋತಿ ಕಲಾ ಕೇಂದ್ರ ಸಭಾಂಗಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಜಾನಪದ ಗಾಯನ ಮತ್ತು ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಶ್ರೀಮಂತ ಜಾನಪದ ಕಲೆಗಳು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕಲು, ಸಾಮರಸ್ಯದಿಂದ ಹಬ್ಬ ಆಚರಿಸಲು ನಮ್ಮ ನಾಡಿನ ಜಾನಪದ, ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳು ಸರ್ವ ಜನರನ್ನು ತನ್ನ ಕಡೆ ಸೆಳೆದು ಸ್ನೇಹ- ಸಹೋದರತ್ವ, ನೆಮ್ಮದಿಯ ಜೀವನ ನಡೆಸಲು ಜಾನಪದ ಪ್ರೇರಕ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಸತೀಶ್ ಮಾತನಾಡಿ, ಜಾನಪದ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಜಾನಪದ ಒಂದು ಅಲಿಖಿತ ಸಂವಿಧಾನ, ಜಾನಪದ ಮತ್ತು ಕಲಾವಿದರ ಕಲ್ಯಾಣಕ್ಕಾಗಿ ಇಲಾಖೆ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮಾತೃಶ್ರೀ ಸಂಸ್ಥೆ ಸರ್ಕಾರದಿಂದ ಯಾವುದೇ ಧನ ಸಹಾಯ ಪಡೆಯದೆ ನಿರಂತರವಾಗಿ ಹಲವಾರು ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಿ ನಿಸ್ವಾರ್ಥವಾಗಿ ಕಲಾಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ. ಬಿ.ಆರ್.ಶಿವಕುಮಾರ್‌ಗೆ ಜಾನಪದ ಕಲಾ ಗೌರವ ನೀಡಿ ಸನ್ಮಾನಿಸಲಾಯಿತು.
ಅಂತಾರಾಷ್ಟ್ರೀಯ ಮಟ್ಟದ ಕಲಾವಿದ ಎಚ್.ಎಸ್. ಸರ್ವೋತ್ತಮ್, ವಿಶ್ವ ಬೆಳಕು ಮಹೇಶ್, ಚಂದ್ರಶೇಖರ್, ಎಚ್. ಎಸ್ ಲೋಕೇಶ, ಎಂ. ನಾಗೇಶ, ಸಿ. ಚಂದ್ರಾಜು, ಅಂಕಿತ, ನಾಗಶ್ರೀ ತಂಡದಿಂದ ಜಾನಪದ ಗಾಯನ ಹಾಗೂ ನಂದಿನಿ, ದೀಪು, ಬಿಂದುಶ್ರೀ, ಮಹಾಲಕ್ಷ್ಮೀ, ಚಂದನ್, ದಯಾನಂದ್, ಮೇಘನಾ, ವರ್ಷಿಣಿ, ದಿವ್ಯ, ಸಂಗಡಿಗರಿಂದ ಜಾನಪದ ನೃತ್ಯ ನಡೆಸಿಕೊಟ್ಟರು.