ಲಕ್ಷ್ಮೇಶ್ವರ: ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹಾಗೂ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ತರ ಪಾತ್ರವಹಿಸಿದ ಸಮರ ಸೇನಾನಿಗಳನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದು ತಹಸೀಲ್ದಾರ್ ಧನಂಜಯ ಎಂ. ಹೇಳಿದರು.
ತಾಲೂಕಿನಲ್ಲಿ ಸ್ವತಂತ್ರ ಹೋರಾಟಗಾರರ ಹೆಜ್ಜೆ ಗುರುತುಗಳನ್ನು ಹೊಂದಿವೆ, ದೇಶ ಕಟ್ಟುವಲ್ಲಿ ಯುವಕರು ಮುಂದೆ ಬರಬೇಕು ಎಂದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಣೆ ಮಾಡಿಕೊಳ್ಳುವುದು ಹಾಗೂ ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರ ಹಾಗೂ ದೇಶಕ್ಕೆ ಅನ್ನ ನೀಡುವ ರೈತರನ್ನು ಮರೆಯಬಾರದು. ಲಕ್ಷ್ಮೇಶ್ವರ ತಾಲೂಕಿನಲ್ಲಿ ನೂರಾರು ಸ್ವಾತಂತ್ರ್ಯ ಯೋಧರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಧ್ವಜಾರೋಹಣದ ಬಳಿಕ ಮೈದಾನದಲ್ಲಿ ಪೊಲೀಸ್, ಎನ್‌ಸಿಸಿ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಪಥಸಂಚಲನದ ನೇತೃತ್ವವನ್ನು ಪಿಎಸ್‌ಐ ನಾಗರಾಜ ಗಡಾದ ವಹಿಸಿ ನೆರವೇರಿಸಿದರು. ಸ್ವಾತಂತ್ರ್ಯೋತ್ಸವ ಹಿನ್ನೆಲೆ ವಿವಿಧ ಶಾಲಾ ಮಕ್ಕಳಿಂದ ಹಾಗೂ ಬಿ.ಡಿ. ತಟ್ಟಿ ಹಾಗೂ ಅರಳು ವಿಶೇಷ ಚೇತನ ಮಕ್ಕಳಿಂದ ನಡೆದ ವೇಷಭೂಷಣ, ದೇಶಭಕ್ತಿ ಗೀತೆಗಳ ನೃತ್ಯ ಎಲ್ಲರ ಗಮನ ಸೆಳೆದವು. ಸ್ಕೂಲ್ ಚಂದನ ಶಾಲೆಯ ಮಕ್ಕಳ ವಿಶೇಷ ಬ್ಯಾಂಡ್ ಪ್ರದರ್ಶನ ಸ್ವಾತಂತ್ರೋತ್ಸವಕ್ಕೆ ಕಳೆ ನೀಡಿತು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಸದಸ್ಯ ಮಹೇಶ ಹೊಗೆಸೊಪ್ಪಿನ, ಪಂಚ ಗ್ಯಾರಂಟಿ ಸಮಿತ ಸದಸ್ಯ ರಾಮಣ್ಣ ಲಮಾಣಿ,(ಶಿಗ್ಲಿ) ಶಿವರಾಜಗೌಡ ಪಾಟೀಲ, ಗ್ರೇಡ್ ೨ ತಹಸೀಲ್ದಾರ ಮಂಜುನಾಥ ಅಮಾಸಿ, ತಾಪಂ ಇಓ ಕೃಷ್ಣಪ್ಪ ಧರ್ಮರ, ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ, ಉಪನೋಂದಣಾಧಿಕಾರಿ ಎಸ್.ಕೆ. ಜಲರಡ್ಡಿ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ನೌಕರ ಸಂಘದ ಅಧ್ಯಕ್ಷ ಗುರುರಾಜ ಹವಳದ ಸೇರಿದಂತೆ ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಂದಾಯ ನಿರೀಕ್ಷಕ ಎನ್.ಎ ನದಾಫ್ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಈಶ್ವರ ಮೆಡ್ಲೇರಿ, ಸತೀಶ ಬೋಮಲೆ, ಉಮೇಶ ನೇಕಾರ, ಎನ್.ಎ. ಮುಲ್ಲಾ ನಿರ್ವಹಿಸಿದರು. ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ ರಸ ಪ್ರಶ್ನೆ, ವೇಷಭೂಷಣ ವಿವಿಧ ಸ್ಫರ್ಧೆಗಳ ವಿಜೇತರಿಗೆ ಪಾರಿತೋಷಕ, ಪ್ರಮಾಣ ಪತ್ರ ನೀಡಲಾಯಿತು. ಪಂಥಸoಚಲನ ಸ್ಪರ್ಧೆಯಲ್ಲಿ ದಿ.ಯೂನಿಕ್ ಶಾಲೆ-ಪ್ರಥಮ, ಲಿಟಲ್ ಹಾಟ್ಸ್ ಸ್ಕೂಲ್-ದ್ವಿತೀಯ, ದೂದಪೀರಾಂ ಉರ್ದು ಶಾಲೆ-ತೃತೀಯ ಸ್ಥಾನ ಪಡೆದವು, ನೃತ್ಯ ಸ್ಫರ್ಧೆಯಲ್ಲಿ ಎಸ್‌ಟಿಪಿಎಂಬಿ-ಪ್ರಥಮ, ಪಿಎಸ್‌ಬಿಡಿ-ದ್ವಿತೀಯ, ಬಿಸಿಎನ್-ತೃತೀಯ ಸ್ಥಾನ ಪಡೆದರು.