ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಅಗತ್ಯ: ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ

KannadaprabhaNewsNetwork |  
Published : Dec 18, 2025, 02:30 AM IST
ಪೊಟೋ-ಲಕ್ಷ್ಮೇಶ್ವರ ಶಂಕರಭಾರತಿ ಸಭಾಭವನದಲ್ಲಿ ತಾಲೂಕ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ಉದ್ಘಾಟಿಸಿದರು. ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದರು. ರಾಮರಾವ್ ವೇರ್ಣೆಕರ ಇದ್ದರು. | Kannada Prabha

ಸಾರಾಂಶ

ಭಕ್ತಿಯಿಂದ ಭಗವಂತನ ಆರಾಧನೆ, ಸ್ಮರಣೆ, ಧ್ಯಾನ ಮಾಡಿದರೆ ಸಾಕು ಭಗವಂತ ಎಲ್ಲರಿಗೂ ಒಲಿಯುತ್ತಾನೆ. ಇನ್ನೊಬ್ಬರನ್ನು ವಂಚಿಸಿ, ತಂದ ಹಣದಿಂದ ದೇವರಿಗೆ ಅರ್ಪಿಸಿದರೆ ದೇವರು ಒಲಿಯುವುದಿಲ್ಲ.

ಲಕ್ಷ್ಮೇಶ್ವರ: ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಆಸ್ತಿ, ಅಂತಸ್ತು, ಹಣ ದ್ವಿಗುಣಗೊಂಡಿದೆ. ಆದರೆ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯಗಳು ಮರೆಯಾಗುತ್ತಿವೆ ಎಂದು ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು ತಿಳಿಸಿದರು.

ಪಟ್ಟಣದ ಶಂಕರಭಾರತಿ ಸಮುದಾಯ ಭವನದಲ್ಲಿ ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದಿನ ದಿನಗಳಲ್ಲಿ ಮನೆಗಳಲ್ಲಿ ಬಡತನ, ಕಷ್ಟಗಳ ಮಧ್ಯೆ ನಮ್ಮ ಸಂಸ್ಕೃತಿ, ಆಚಾರ ವಿಚಾರ ಎಲ್ಲವನ್ನು ಸಮರ್ಪಕವಾಗಿ ಆಚರಿಸುತ್ತಿದ್ದರಿಂದ ಮನೆ, ಮನಗಳಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸಿರುತ್ತಿತ್ತು. ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಜೀವಂತವಾಗಿದ್ದರೆ ನಾವು ಬದಲಾಗಬೇಕಿಲ್ಲ. ಇಲ್ಲದಿದ್ದರೆ ನಾವು ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ದೈವಜ್ಞ ದರ್ಶನ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿದ್ದು, ದೈವಜ್ಞ ಸಮಾಜದವರು ಶ್ರೀಮಠದ ಉತ್ತರಾಧಿಕಾರಿ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳ ಪರಿಚಯ ಮಾಡುವುದರ ಜತೆ ಸಮಾಜ ಸಂಘಟನೆ ಇದರ ಉದ್ದೇಶವಾಗಿದೆ ಎಂದರು.ಕಿರಿಯ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಭಕ್ತಿಯಿಂದ ಭಗವಂತನ ಆರಾಧನೆ, ಸ್ಮರಣೆ, ಧ್ಯಾನ ಮಾಡಿದರೆ ಸಾಕು ಭಗವಂತ ಎಲ್ಲರಿಗೂ ಒಲಿಯುತ್ತಾನೆ. ಇನ್ನೊಬ್ಬರನ್ನು ವಂಚಿಸಿ, ತಂದ ಹಣದಿಂದ ದೇವರಿಗೆ ಅರ್ಪಿಸಿದರೆ ದೇವರು ಒಲಿಯುವುದಿಲ್ಲ. ಸಮಾಜದ ಪ್ರತಿ ಕುಟುಂಬದ ಮಕ್ಕಳು ಸಂಸ್ಕಾರವಂತರಾಗಬೇಕು. ಮೂಲ ಆಚಾರ, ವಿಚಾರ, ಸಂಸ್ಕಾರದಿಂದ ದೂರವಾಗುತ್ತಿದ್ದೇವೆ. ಹೆಸರಿಂದ ಮಾತ್ರ ಶ್ರೇಷ್ಠನಾದರೆ ಸಾಲದು. ನಮ್ಮ ಕರ್ತವ್ಯದಲ್ಲಿ, ನಮ್ಮ ವಿಚಾರದಲ್ಲಿ, ನಮ್ಮ ಮನಸ್ಥಿತಿಯಲ್ಲಿ ಕೂಡ ಶ್ರೇಷ್ಠರಾಗಬೇಕು. ಲಕ್ಷ್ಮೇಶ್ವರ ಭಾಗದಲ್ಲಿ ದೈವಜ್ಞ ಸಮಾಜದವರು ಇಂತಹ ಧಾರ್ಮಿಕ ಕಾರ್ಯಗಳಿಗೆ ಒಗ್ಗಟ್ಟಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ವೇರ್ಣೆಕರ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹನುಮಂತ ಪುತಳೀಕರ, ಮಂಗಳೂರಿನ ಗಜೇಂದ್ರ ಶೇಠ, ಮಾರುತಿ ವೇರ್ಣೆಕರ, ವೆಂಕಟೇಶ ರಾಯಕರ, ರವಿರಾಜ ವೇರ್ಣೆಕರ, ಕೆ. ಸುಧಾಕರ ಶೇಟ್, ರಾಜ್ಯ ಆಯುಷ್ ಇಲಾಖೆ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ರಾಜು ಶೇಟ್, ಅರುಣ ವೇರ್ಣೆಕರ, ಗಣೇಶ ಕುರಡೇಕರ, ಮೋಹನ ವೇರ್ಣೆಕರ, ಸುರೇಶ ವೇರ್ಣೆಕರ, ಚಂದ್ರಕಾಂತ ಶೇಟ್, ಈಶ್ವರ ಪುಥಳಿಕರ, ನಾರಾಯಣ, ರಾಘವೇಂದ್ರ ಶೇಟ್, ವಾದಿರಾಜ ಶೇಟ್, ಮೋಹನ್ ಕುರುಡೇಕರ, ಸುರೇಶ ಕುರುಡೇಕರ, ಸುರೇಶ ವೇರ್ಣೆಕರ, ವೆಂಕಟೇಶ ವೇರ್ಣೆಕರ, ಪ್ರಶಾಂತ ಕುಡಾಳಕರ, ಸುಜಾತಾ ಶೇಟ್, ವೆಂಕಟೇಶ ದೈವಜ್ಞ, ಪ್ರಕಾಶ ರೇವಣಕರ, ವಿಷ್ಣು ಕುರುಡೇಕರ ಸೇರಿದಂತೆ ಅನೇಕರಿದ್ದರು. ಪ್ರೇಮ ಶೇಟ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ