ಮುಖ್ಯಮಂತ್ರಿಗಳೇ ಒಡಕು ಧ್ವನಿ ಹಾಡುವುದು ಸರಿಯಲ್ಲ: ಎನ್.ಮಹೇಶ್‌

KannadaprabhaNewsNetwork |  
Published : May 02, 2025, 12:11 AM IST
ರಾಜ್ಯದ ಮುಖ್ಯಮಂತ್ರಿಗಳೇ ಒಡಕು ಧ್ವನಿ ಹಾಡುವುದು ಸರಿಯಲ್ಲ : ಎನ್.ಮಹೇಶ್‌ | Kannada Prabha

ಸಾರಾಂಶ

ಚಾಮರಾಜನಗರ ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೇಶದ ಸುರಕ್ಷಿತೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಡಕು ಧ್ವನಿ ಹಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಟೀಕಿಸಿದರು. ನಗರದ ರಾಮಸಮುದ್ರ ಕುಲುಮೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ. ಮಾತನಾಡಿದರು. ದೇಶ ರಕ್ಷಣೆಗಾಗಿ ಪ್ರತಿಯೊಬ್ಬರ ಭಾರತೀಯರು ಒಗ್ಗಟ್ಟಾಗಿ ನಿಲ್ಲಬೇಕು. ಒಂದು ಸಣ್ಣ ದೇಶವಾದ ಪಾಕಿಸ್ತಾನ ಕೆಲವು ಭಯೋತ್ಪಾದಕರನ್ನು ಸೃಷ್ಟಿ ಮಾಡಿಕೊಂಡು 140 ಕೋಟಿ ಜನಸಂಖ್ಯೆ ಇರುವ ಬೃಹತ್ ಭಾರತದೇಶವನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದು ದೊಡ್ಡ ದುರಂತ. ಇಷ್ಟಲ್ಲ ನಡೆಯುತ್ತಿದ್ದರೂ ಸಹ ಇಡೀ ದೇಶದ ಪ್ರಜೆಗಳು ಒಂದು ಮನಸ್ಸಿನಿಂದ ಒಕ್ಕೂರಲಿನಿಂದ ನಮ್ಮ ಶತ್ರು ರಾಷ್ಟ್ರಗಳನ್ನು ದಿಟ್ಟವಾಗಿ ಹೆದುರಿಸಲು ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿ ಕೊಟ್ಟು ಬಾಯಿ ಮುಚ್ಚಿಕೊಂಡು ಇರಬೇಕಿತ್ತು. ಅದನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಕು ನುಡಿಯುವುದು ಸರಿಯಲ್ಲ ಎಂದು ಪ್ರಶ್ನಿಸಿದರು.ಇದು ನಮ್ಮ ದೇಶ ಸುರಕ್ಷಿತಯೇ ಪ್ರಶ್ನೆಯಾಗಿದೆ. ಅಸುರಕ್ಷತೆ ಒಳಗಡೆ ದೇಶದ ಸಾರ್ವಭೌಮತ್ಯೆ ಇದೆ. ಒಂದು ಧ್ವನಿಯಾಗಿ ನಿಲ್ಲಬೇಕಿದೆ. ರಾಜ್ಯದ ಮುಖ್ಯಮಂತ್ರಿಗಳೇ ಒಡಕು ಧ್ವನಿ ಹಾಡುತ್ತಿದ್ದಾರೆ. ಬಸವೇಶ್ವರರ ಆಶಯದಂತೆ ಮನುಷ್ಯ ಜಾತಿಗಳೆಲ್ಲ ಒಂದೇ ಕಲ್ಪನೆ ಮೇಲೆ ರಾಷ್ಟ್ರ ಕಟ್ಟುವ ಕೆಲಸಕ್ಕೆ ಅಡಿಪಾಯ ಹಾಕಿದರು. ನಾವು 21 ನೇ ಶತಮಾನದಲ್ಲಿದ್ದೇವೆ, ವಿಜ್ಞಾನ, ತಂತ್ರಜ್ಞಾನ ಆಕಾಶದೆತ್ತರಕ್ಕೆ ಬೆಳೆದಿದ್ದರೂ ನಮ್ಮೊಳಗಿನ ಭಿನ್ನಾಭಿಪ್ರಾಯ ಹೋಗಿಲ್ಲ. ಅನ್ನುವುದಕ್ಕೆ ಕಾರಣ ಎಂದರೆ ಜಾತಿಯ ಮನಸ್ಥಿತಿ. ಏನು ಅನ್ನಿಸುತದೆ ಅದನ್ನೆಲ್ಲ ಮಾತನಾಡುವುದು ಅಪಾಯಕಾರಿ ಬೆಳವಣಿಗೆ ಎಂದರು. ಕೇಂದ್ರ ಸರ್ಕಾರ ಕ್ಷಣಕ್ಷಣಕ್ಕೂ ಜಾಗೃತರಾಗಿ ನಮ್ಮ ಶತ್ರುಗಳನ್ನು ಹಿಮ್ಮೆಟ್ಟಿಸಿ ಕಳ್ಳಾಟದಲ್ಲಿ ಬಂದು ದೇಶದಲ್ಲಿ ದಾಳಿಕೋರರನ್ನು ಸೆದೆಬಡಿದು 140 ಕೋಟಿ ಜನರ ರಕ್ಷಣೆ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರಕ್ಕಿದೆ. ಇದಕ್ಕಾಗಿ ನಾವೆಲ್ಲರೂ ಕೇಂದ್ರ ಸರ್ಕಾರ ಬೆಂಬಲ ಕೊಡಲು ಸಂಕಲ್ಪ ಮಾಡೋಣ ಎಂದರು. ಮಹಿಳೆ ಮತ್ತು ಪುರುಷರು ಎಂಬ ಭೇದ ಭಾವ ಬದಿಗೊತ್ತಿ ಪ್ರತಿಯೊಬ್ಬರು ಕಾಯಕ ಮಾಡಿ, ಜೀವನ ನಡೆಸಬೇಕು ಎನ್ನುವ ಬಸವಣ್ಣನ ಕಾಯಕ ದಾಸೋಹದ ಪರಿಕಲ್ಪನೆ ಜಗತ್ತಿಗೆ ಮಾದರಿ ಎಂದು ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ಬಣ್ಣಿಸಿದರು.ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್‌, ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಜಿಲ್ಲಾ ಪ್ರಕೋಷ್ಠ ಸಂಚಾಲಕ ಕಿಲಗೆರೆ ಬಸವರಾಜ್, ಚಾಮುಲ್ ಮಾಜಿ ಅಧ್ಯಕ್ಷ ವೈಸಿ ನಾಗೇಂದ್ರ, ಡಾ.ಬಾಬು, ಜಿಪಂ ಮಾಜಿ ಸದಸ್ಯ ಸಿಎನ್ ಬಾಲರಾಜ್, ಉಪಾಧ್ಯಕ್ಷ ಶಿವುವಿರಾಟ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸುಂದ್ರಪ್ಪ, ಜಿಲ್ಲಾ ಮಾಧ್ಯಮ ಪ್ರಮುಖ್ ರಾಮಸಮುದ್ರ ಶಿವಣ್ಣ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಮಾಧ್ಯಮ ಪ್ರಮುಖ ವೀರೇಂದ್ರ, ವೇಣುಗೋಪಾಲ್, ಪರಶಿವಯ್ಯ,ಎಸ್ ಟಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬುಲೆಟ್ ಚಂದ್ರು, ಕಾರ್ಯಾಲಯ ಕಾರ್ಯದರ್ಶಿ ಪಿ.ರಂಗಸ್ವಾಮಿ ಇತರರು ಹಾಜರಿದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್