ನಮ್ಮೊಳಗಿನ ಸಾಧಕರು ಪುರಸ್ಕಾರ ಕಾರ್ಯಕ್ರಮ

KannadaprabhaNewsNetwork | Published : May 2, 2025 12:11 AM

ಸಾರಾಂಶ

ಪದ್ಮಶ್ರೀ ಪುರಸ್ಕೃತ ತುಳಸಿ ಗೌಡರವರ ಸ್ಮರಣಾರ್ಥದಲ್ಲಿ ನಮ್ಮೊಳಗಿನ ಸಾಧಕರು ಹೆಸರಿನಲ್ಲಿ ಮೇ ೨೫ರಂದು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯ ಸಾಧಕರಿಗೆ ಗೌರವ ಪುರಸ್ಕಾರ ಸನ್ಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ಸರ್ಕಾರಿ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಕ್ಷರ ಶ್ರೀ ಫೌಂಡೇಶನ್ ಜಿಲ್ಲಾಧ್ಯಕ್ಷ ವೆಂಕಟೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಅಕ್ಷರ ಶ್ರೀ ಫೌಂಡೇಶನ್ ಮತ್ತು ಪರಿವರ್ತನಾ ಕಲಾ ಸೇವಾಸಂಸ್ಥೆಯ ಹತ್ತನೇ ವರ್ಷದ ವಾರ್ಷಿಕೋತ್ಸವ ನೆನಪಿನ ಪ್ರಯುಕ್ತ ನಾಡಿನ ಹೆಮ್ಮೆಯ ಸಾಧಕಿ ಪದ್ಮಶ್ರೀ ಪುರಸ್ಕೃತ ಶ್ರೀಮತಿ ತುಳಸಿ ಗೌಡರವರ ಸ್ಮರಣಾರ್ಥ ಹೆಸರಿನಲ್ಲಿ ೨೦೨೫ ಮೇ ೨೫ರಂದು ಹಾಸನದ ಕಲಾಭವನದಲ್ಲಿ ನಡೆಯುವ "ನಮ್ಮೊಳಗಿನ ಸಾಧಕರು " ಎಂಬ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಭಾಗವಹಿಸಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯ ಸಾಧಕರಿಗೆ ಗೌರವ ಪುರಸ್ಕಾರ ಸನ್ಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ೫ ವರ್ಷಕ್ಕೆ ಸರ್ಕಾರಿ ಶಾಲೆ ದತ್ತು ಸ್ವೀಕಾರ ಉನ್ನತ ಸ್ವೀಕಾರ ಹಾಗೂ ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡಲಾಗುವುದು ಎಂದರು.

ಜಿಲ್ಲೆಯ ಎಲ್ಲರೂ ಸಹಕಾರ ನೀಡಬೇಕು. ಆಸಕ್ತರು ತಮ್ಮ ಸ್ವ ವಿವರಗಳೊಂದಿಗೆ ದಿನಾಂಕ ೧೫.೦೪.೨೦೨೪ರ ಒಳಗೆ ತಮ್ಮ ಹೆಸರನ್ನು ೮೭೬೨೧೧೫೪೬೩ ಕರೆ ಮಾಡಿ ನೊಂದಾಯಿಸಿಕೊಳ್ಳುವುದು ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನಮ್ಮ ಅಕ್ಷರ ಶ್ರೀ ಫೌಂಡೇಶನ್‌ಗೆ ಸದಸ್ಯರಾಗುವವರಿಗೆ ಸಂಸ್ಥೆಯ ಸದಸ್ಯತ್ವ ಶುಲ್ಕ ೧೦೦೦ ಆಗಿರುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಅವಿನಾಶ್ ಫರ್ನಾಂಡಿಸ್, ಕೆ. ರಾಜಯ್ಯ, ಎಚ್.ಆರ್‌. ಅಣ್ಣಪ್ಪ ಇತರರು ಉಪಸ್ಥಿತರಿದ್ದರು.

Share this article