- ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ಗಣಪತಿ ಮಂಟಪಕ್ಕೆ ಭೇಟಿ, ಸಭೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಚನ್ನಗಿರಿಗೆ ಬಂದರೆ ಪೊರಕೆ ಸೇವೆ ಮಾಡುತ್ತೇನೆ ಎಂದು ಕೆಲವರು ಹೇಳುತ್ತಿದ್ದರು. ಅಂತಹ ಮಾತುಗಳಿಗೆ ಯಾವುದಕ್ಕೂ ನಾನು ಜಗ್ಗುವಂಥವನಲ್ಲ. ನನ್ನದೇ ಆದ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿರುವ ರಾಜಕಾರಣಿ ನಾನು ಎಂದು ವಿಜಯಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.ತಾಲೂಕಿನ ಮರಡಿ ಗ್ರಾಮದಲ್ಲಿ ಬಸವೇಶ್ವರ ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣಪತಿ ಮಂಟಪಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಅನಂತರ ನಡೆದ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಆರ್.ಸಿ.ಬಿ.ಯ ಕ್ರಿಕೆಟ್ ತಂಡ ಗೆಲುವು ಸಾಧಿಸಿದಾಗ ವಿಜಯೋತ್ಸವ ಮಾಡುವುದು ಬೇಡ ಎಂದು ಪೊಲೀಸ್ ಆಧಿಕಾರಿಗಳು ಪರಿಪರಿಯಾಗಿ ಮನವಿ ಮಾಡಿದ್ದರು. ಆದರೂ, ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳು ಹಠಮಾಡಿ ವಿಜಯೋತ್ಸವ ನಡೆಸಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳದೇ, 11 ಜನ ಅಮಾಯಕ ಯುವಕರು ಬಲಿ ಪಡೆದರು. ಇದಕ್ಕೆ ನಿಷ್ಠಾವಂತ ಪೊಲೀಸ್ ಆಧಿಕಾರಿಗಳ ತಲೆದಂಡ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಹಿಂದುತ್ವದ ಪರವಾದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಕೂಗು ಹೆಚ್ಚಾಗಿದ್ದು, ನಾನು ಅಧಿಕಾರಕ್ಕೆ ಬಂದರೆ ನನ್ನ ಪ್ರಮಾಣ ವಚನ ಸಂದರ್ಭದಲ್ಲಿ ವಿಧಾನಸೌದ ಮುಂದೆ ಜೆಸಿಬಿ ಯಂತ್ರವನ್ನು ನಿಲ್ಲಿಸಿಕೊಂಡು ಪ್ರಮಾಣ ವಚನ ಸ್ವೀಕರಿಸುತ್ತೇನೆ. ರಾಜ್ಯದಲ್ಲಿ ಮುಸ್ಲಿಮರು 50 ಪರ್ಸೆಂಟ್ ದಾಟಿದರೆ ಹಿಂದೂಗಳಿಗೆ ಭವಿಷ್ಯವಿಲ್ಲ. ಅದನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಹಿಂದೂಗಳು ಒಗ್ಗಟ್ಟಾಗಿ ಮತಗಳನ್ನು ನೀಡಬೇಕು ಎಂದರು.
- - -
ಚನ್ನಗಿರಿ ತಾಲೂಕಿನಲ್ಲಿ ಜೆ.ಎಚ್.ಪಟೇಲ್‌ರಂತಹ ಮೇಧಾವಿ ರಾಜಕಾರಣಿ ಜನಿಸಿರುವುದು ಈ ತಾಲೂಕಿನ ಸೌಭಾಗ್ಯವಾಗಿದೆ. ನಡೆದಾಡುವ ಗ್ರಂಥದಂತೆ ಇದ್ದಂತವರಾಗಿದ್ದರು. ಅವರು ರಾಜಕಾರಣದಲ್ಲಿ ಮೇರುವ್ಯಕ್ತಿತ್ವವನ್ನು ಹೊಂದಿದರು. ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಸಂಸತ್ ಸದಸ್ಯನಾಗಿದ್ದೆ. ಅಂಥವರ ಒಡನಾಟದಲ್ಲಿ ನಾನು ರಾಜಕಾರಣ ಮಾಡಿದ್ದು ನನ್ನ ಸೌಭಾಗ್ಯ.
- - -
ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ನಡೆದ ಗಣೇಶೋತ್ಸವ ಸಮಾರಂಭವನ್ನು ವಿಜಯಪುರ ಕ್ಷೇತ್ರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಉದ್ಘಾಟಿಸಿದರು.