ಧಾರ್ಮಿಕ ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ

KannadaprabhaNewsNetwork |  
Published : Feb 25, 2026, 02:15 AM IST
ಸೂಲಿಬೆಲೆ ಹೋಬಳಿ ದೊಡ್ಡಕೋಲಿಗ ಗ್ರಾಮದಲ್ಲಿ ನೂತನವಾಗಿ ಲೋಕಾರ್ಪಣೆಗೊಂಡಿರುವ ವೀರಬ್ರಹ್ಮೇಂದ್ರಸ್ವಾಮಿಯ ವಿಗ್ರಹಸೂಲಿಬೆಲೆ ಹೋಬಳಿ ದೊಡ್ಡಕೋಲಿಗ ಗ್ರಾಮದಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ವೀರಬ್ರಹ್ಮೇಂದ್ರಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಶಿವಸುಜ್ಞಾನತೀರ್ಥ ಸ್ವಾಮೀಜಿ, ವೀರಭದ್ರಸ್ವಾಮೀಜಿ, ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಇತರರು ಇದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಕಾಲಜ್ಞಾನಿ ಪೋತಲೂರು ವೀರಬ್ರಹ್ಮೆಂದ್ರರು ೧೭ನೇ ಶತಮಾನದಲ್ಲಿ ನವಾಬರ ದರ್ಬಾರಿನಲ್ಲಿ ಮೂಡಿಸಿದ ಧಾರ್ಮಿಕ ಸಾಮರಸ್ಯವನ್ನು ಇಂದು ಜನತೆ ಮರೆಯುತ್ತಿದ್ದಾರೆ ಎಂದು ವಿಶ್ವಕರ್ಮ ಜಗದ್ಗುರು ಶ್ರೀ ಸುಜ್ಞಾನಪ್ರಭು ಪೀಠದ ಪೀಠಾಧ್ಯಕ್ಷರಾದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು

ಸೂಲಿಬೆಲೆ: ಕಾಲಜ್ಞಾನಿ ಪೋತಲೂರು ವೀರಬ್ರಹ್ಮೆಂದ್ರರು ೧೭ನೇ ಶತಮಾನದಲ್ಲಿ ನವಾಬರ ದರ್ಬಾರಿನಲ್ಲಿ ಮೂಡಿಸಿದ ಧಾರ್ಮಿಕ ಸಾಮರಸ್ಯವನ್ನು ಇಂದು ಜನತೆ ಮರೆಯುತ್ತಿದ್ದಾರೆ ಎಂದು ವಿಶ್ವಕರ್ಮ ಜಗದ್ಗುರು ಶ್ರೀ ಸುಜ್ಞಾನಪ್ರಭು ಪೀಠದ ಪೀಠಾಧ್ಯಕ್ಷರಾದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

ಹೋಬಳಿಯ ದೊಡ್ಡಕೋಲಿಗ ಗ್ರಾಮದ ಬಸವೇಶ್ವರ ದೇವಸ್ಥಾನ ಅಕ್ಕಯಮ್ಮ ಗುಡ್ಡದ ತಪ್ಪಲಿನಲ್ಲಿ ಜಗದ್ಗುರು ವೀರಬ್ರಹ್ಮೇಂದ್ರ ಸ್ವಾಮಿ ಸಮಿತಿಯಿಂದ ನಿರ್ಮಾಣಗೊಂಡಿದ್ದ ಮಹಾಗಣಪತಿ, ವೀರಬ್ರಹ್ಮೇಂದ್ರಸ್ವಾಮಿ, ಕಾಳಿಕಾಂಭ, ಕಮಟೇಶ್ವರಸ್ವಾಮಿ, ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಡಪ ಜಿಲ್ಲೆಯ ಕಂದಿಮಲ್ಲಯ್ಯಪಲ್ಲಿಯಲ್ಲಿರುವ ವೀರಬ್ರಹ್ಮೇಂದ್ರಸ್ವಾಮಿ ಮಠಾಧೀಶ ಶ್ರೀ ವೀರಭದ್ರಸ್ವಾಮಿ ಮಾತನಾಡಿ, ಮನುಷ್ಯ ಕ್ಷಣಿಕ ಅಸೆ ಆಕರ್ಷಣೆಗಳಿಗೆ ಬಲಿಯಾಗಿ ತನ್ನತನವನ್ನು ಕಳೆದುಕೊಳ್ಳುತ್ತಾ ಅಮೂಲ್ಯ ಮನುಷ್ಯ ಜನ್ಮಕ್ಕೆ ಕೊಳ್ಳಿ ಇಟ್ಟುಕೊಳ್ಳುವ ಪ್ರಸಂಗಗಳು ಸಾಮಾನ್ಯವಾಗುತ್ತಿವೆ ಎಂಬುದನ್ನು ೧೭ನೇ ಶತಮಾನದಲ್ಲಿಯೇ ಕಾಲಜ್ಞಾನಿ ಪೋತಲೂರು ವೀರಭ್ರಹ್ಮೇಂದ್ರರು ಜಗತ್ತಿಗೆ ಸಾರಿದ್ದರು. ಇದನ್ನು ಮನುಷ್ಯ ಆರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿ ಬದುಕುತ್ತಿದ್ದಾನೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ತಮ್ಮೇಗೌಡ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಅಯುಕ್ತ ಮಾಳಿಗಾಚಾರ್, ಪದ್ಮಶ್ರೀ ಪುರಸ್ಕೃತ ಚಂದ್ರಶೇಖರ್, ಗ್ರಾಪಂ ಸದಸ್ಯ ಶಿವಕುಮಾರ್, ಡೇರಿ ಅಧ್ಯಕ್ಷ ರಾಜಣ್ಣ, ವಿಶ್ವಕರ್ಮ ಸಮಾಜದ ಸತ್ಯವತಿ, ಸಮಿತಿಯ ರಾಜಣ್ಣಚಾರ್, ಸುಬ್ರಮಣಿಚಾರ್, ರಾಮಾಚಾರ್, ರವೀಂದ್ರಚಾರ್, ಮಂಜುನಾಥ್, ಸಂಘದ ಪದಾಧಿಕಾರಿಗಳು ಹಾಜರಿದ್ದರು.

(ಫೋಟೋ ಕ್ಯಾಫ್ಞನ್‌)

ಸೂಲಿಬೆಲೆ ಹೋಬಳಿ ದೊಡ್ಡಕೋಲಿಗದಲ್ಲಿ ಲೋಕಾರ್ಪಣೆಗೊಂಡಿರುವ ವೀರಬ್ರಹ್ಮೇಂದ್ರಸ್ವಾಮಿಯ ವಿಗ್ರಹ ವೀರಬ್ರಹ್ಮೇಂದ್ರಸ್ವಾಮಿ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ವೀರಭದ್ರಸ್ವಾಮೀಜಿ, ಮಾಜಿ ಸಂಸದ ಬಚ್ಚೇಗೌಡ, ಬಮೂಲ್ ನಿರ್ದೇಶಕ ಸತೀಶಗೌಡ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪ್ರತಿನಿಧಿಗಳು ಜಡ; ಅಖಂಡ ಬಳ್ಳಾರಿಯ ಪ್ರವಾಸೋದ್ಯಮಕ್ಕೆ ಬರ !
ಗ್ರಾಮ ಸಹಾಯಕರಿಗೂ ನಿವೇಶನ ನೀಡಲು ಮನವಿ