ಮಕ್ಕಳನ್ನು ಉತ್ತಮ ನಾಗರಿಕರಾಗಿಸುವುದು ನಮ್ಮ ಜವಾಬ್ದಾರಿ: ಪಿ.ಜೆ.ಆಂಟೋನಿ

KannadaprabhaNewsNetwork |  
Published : Nov 17, 2025, 01:02 AM IST
ನರಸಿಂಹರಾಜಪುರ ಪಟ್ಟಣದ ಎಲ್.ಎಫ್ ಚರ್ಚ್ ನ ಸಭಾಂಗಣದಲ್ಲಿ  ಸೋಂಟ್ ಜೋಸೆಫ್ ಸ್ಕೂಲಿನ ಆಶ್ರಯದಲ್ಲಿ ನಡೆದ ಅಂತರಾಷ್ಟೀಯ ತರಬೇತಿದಾರರಿಂದ ಮಕ್ಕಲಿಗೆ ಹಾಗೂ ಪೋಷಕರಿಗಾಗಿ ಏರ್ಪಡಿಸಿದ್ದ  ಪ್ರೇರಣಾ ತರಬೇತಿ ಕಾರ್ಯಕ್ರಮವನ್ನು  ದೀಪ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಫಾ.ಟಿನು ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಮಕ್ಕಳೇ ಈ ದೇಶದ ಸಂಪತ್ತಾಗಿದ್ದು ಅವರನ್ನು ದೇಶದ ಉತ್ತಮ ನಾಗರಿಕರನ್ನಾಗಿ ಮಾಡುವುದು ಎಲ್ಲರ ಜವಬ್ದಾರಿ ಯಾಗಿದೆ ಎಂದು ದೀಪ್ತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.

- ಸೆಂಟ್ ಜೋಸೆಫ್ ಸ್ಕೂಲಿನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪ್ರೇರಣಾ ತರಬೇತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಕ್ಕಳೇ ಈ ದೇಶದ ಸಂಪತ್ತಾಗಿದ್ದು ಅವರನ್ನು ದೇಶದ ಉತ್ತಮ ನಾಗರಿಕರನ್ನಾಗಿ ಮಾಡುವುದು ಎಲ್ಲರ ಜವಬ್ದಾರಿ ಯಾಗಿದೆ ಎಂದು ದೀಪ್ತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.

ಶುಕ್ರವಾರ ಎಲ್.ಎಫ್.ಚರ್ಚ್ ಹಾಲ್ ನಲ್ಲಿ ಸೇಂಟ್ ಜೋಸೆಫ್ ಶಾಲೆಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರೇರಣಾ ತರಬೇತಿ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನೆಹರೂ ಅವರಿಗೆ ಮಕ್ಕಳ ಬಗ್ಗೆ ಬಹಳ ಪ್ರೀತಿ ಇತ್ತು. ಮಕ್ಕಳು ನಮ್ಮ ದೇಶದ ಆಸ್ತಿಯಾಗಬೇಕು ಎಂಬ ಕನಸು ಕಂಡಿದ್ದರು. ಭವಿಷ್ಯದ ಪ್ರಜೆಗಳನ್ನು ಶಾಲಾ ಹಂತದಲ್ಲೇ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಎಂಬುದು ನೆಹರೂ ಆಶಯವಾಗಿತ್ತು. ಆದ್ದರಿಂದ ನೆಹರೂ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು.

ದೀಪ್ತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಫಾ.ಟಿನು ಉದ್ಘಾಟಿಸಿ ಮಾತನಾಡಿ, ಕಳೆದ 9 ವರ್ಷದ ಹಿಂದೆ ಎಲ್.ಕೆ.ಜಿ.ಯಿಂದ ಪ್ರಾರಂಭ ವಾದ ಸೆಂಟ್ ಜೋಸೆಫ್ ಪಬ್ಲಿಕ್ ಸ್ಕೂಲ್ ನಲ್ಲಿ ಈ ವರ್ಷ ಎಸ್. ಎಸ್.ಎಲ್.ಸಿ. ಪ್ರಾರಂಭವಾಗಿದೆ. ಮಕ್ಕಳು ಇಂದಿನ ತರಬೇತಿ ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಉತ್ತಮ ಅಂಕ ಪಡೆಯಬೇಕು. ಸಮಾಜ ಸದೃಢವಾಗಬೇಕಾದರೆ ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ, ನೈತಿಕತೆ ಹಾಗೂ ಸಂಸ್ಕಾರ ಕಲಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸೇಂಟ್ ಜೋಸೆಫ್ ಶಾಲೆಯನ್ನ ಇನ್ನಷ್ಟು ಅಭಿವೃದ್ಧಿ ಪಥದತ್ತ ನಡೆಸಿಕೊಂಡು ಹೋಗುತ್ತೇವೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ದೀಪ್ತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಇ.ಸಿ.ಜೋಯಿ, ಶಾಲೆ ಪ್ರಾಂಶುಪಾಲ ಕೆ.ಮೋಹನ್, ದೀಪ್ತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಫಾ. ಅಮುಲ್, ದೀಪ್ತಿ ಶಿಕ್ಷಣ ಸಂಸ್ಥೆ ಪಿಟಿಒ ಅಧ್ಯಕ್ಷ ಎಲ್ದೋ, ಎಲ್.ಎಫ್ ಚರ್ಚಿನ ಟ್ರಸ್ಟಿ ಕೆ.ಓ. ಥೋಮಸ್ ಇದ್ದರು.

ನಂತರ ಮೈಸೂರಿನ ಅಂತರಾಷ್ಟ್ರೀಯ ತರಬೇತಿದಾರ ಆರ್ ಸತೀಶ್ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ಎದುರಿಸುವುದು ಹೇಗೆ, ಮಕ್ಕಳ ಮಾನಸಿಕ ಬೆಳವಣಿಗೆ, ಏಕಾಗ್ರತೆ, ಶಿಕ್ಷಣ ಕಲಿಯುತ್ತಿರುವ ಮಕ್ಕಳ ಕಾರ್ಯ ವೈಖರಿ ಹೇಗಿರಬೇಕು. ಮನುಷ್ಯರಿಗೆ ನಗುವಿನಿಂದ ಎಷ್ಟು ಉಪಯೋಗ ಎಂಬ ಬಗ್ಗೆ ತರಬೇತಿ ನೀಡಿದರು. ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಿನ್ಸಿ ಸ್ವಾಗತಿಸಿದರು.ಅನಿತ ಕಾರ್ಯಕ್ರಮ ನಿರೂಪಿಸಿದರು. ಅವಿನಾಶ್ ವಂದಿಸಿದರು.

PREV

Recommended Stories

ಶಿವಮೊಗ್ಗದಲ್ಲಿ ಮುಂದುವರಿದ ಕಾಡಾನೆ ಉಪಟಳ
ಭೀಮ್‌ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಅಕ್ರಮ: ರಾಘವೇಂದ್ರ ನಾಯ್ಕ