- ಕ್ರೀಡಾ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾಜಿ ಸಚಿವ ರೇಣುಕಾಚಾರ್ಯ - - -
ಕನ್ನಡಪ್ರಭ ವಾರ್ತೆ, ನ್ಯಾಮತಿಕ್ರೀಡಾ ಚಟುವಟಿಕೆಗಳು ವ್ಯಕ್ತಿಯಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸಬಲ್ಲವು. ಸ್ಪರ್ಧೆಗಳಲ್ಲಿ ಗೆಲವು- ಸೋಲು ಸಾಮಾನ್ಯ. ಗೆಲವನ್ನು ಸಂಭ್ರಮಿಸಿದಷ್ಟೇ ಸೋತಾಗಲೂ ತಾಳ್ಮೆಯಿಂದ ಸ್ವೀಕರಿಸಿ, ಮತ್ತೆ ಗೆಲವಿಗಾಗಿ ಕಠಿಣ ಅಭ್ಯಾಸ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವಿಶ್ವವಿದ್ಯಾನಿಲಯ ದಾವಣಗೆರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಮತಿ ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಕ್ರೀಡೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೋತಾಗ ಅವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯವಾಗಿವೆ. ಯಾವುದೇ ಕ್ಷೇತ್ರದಲ್ಲಿ ಕಠಿಣ ಅಭ್ಯಾಸ ಮುಖ್ಯ. ಕಠಿಣ ಅಭ್ಯಾಸದೊಂದಿಗೆ ಸಾಧನೆ ಮೂಲಕ ಗೆಲುವೆಂಬ ಯಶಸ್ಸಿನ ಹಿಂದೆ ಸಾಗಬೇಕು ಎಂದು ಹೇಳಿದರು.
ಕಾಲೇಜಿ ಪ್ರಾಚಾರ್ಯರಾದ ಟಿ.ಸಿ.ಭಾರತಿ ಅಧ್ಯಕ್ಷತೆ ವಹಿಸಿದ್ದರು. ಹೊನ್ನಾಳಿ ಹಿರೇಕಲ್ಮಠ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ನರಗಟ್ಟಿ, ಕ್ರೀಡಾ ಪಟುಗಳಾದ ಪ್ರಿಯಾಂಕ, ಹೇಮಾವತಿ ಮಾತನಾಡಿದರು.ಸಹಾಯಕ ಉಪನ್ಯಾಸಕರಾದ ಎನ್.ಜ್ಯೋತಿ, ಜಿ.ಆರ್. ರಾಜಶೇಖರ್, ಬಿ.ಪಿ. ರಾಘವೇಂದ್ರ, ಸೈಯದ್ ಇಮ್ರಾನ್ ತಾಸೀರ್, ಆರ್.ಸಿದ್ಧಲಿಂಗಸ್ವಾಮಿ, ಎಂ.ಬಿ. ರೇವಣಸಿದ್ದಪ್ಪ, ಸಂಗಪ್ಪ ಔರಸಂಗ, ಎನ್.ದಯಾನಂದ ಮೂರ್ತಿ, ಎಂ.ಎಸ್. ಗಿರೀಶ, ಅಥಿತಿ ಉಪನ್ಯಾಸಕರಾದ ಎಂ.ಬಿ. ಉಮೇಶ್, ಎಚ್.ಕಲಾವತಿ, ಸಿಡಿಸಿ ಸದಸ್ಯರಾದ ನಿತಿನ್ ರೆಡ್ಡಿ, ಸುರೇಶ್, ಯತೀಶ, ಸುರೇಶ್ ಮತ್ತಿತರರಿದ್ದರು.
- - -ಬಾಕ್ಸ್ * ಬಹುಮಾನ ಪಡೆದ ಕಾಲೇಜುಗಳ ವಿವರ ಹ್ಯಾಂಡ್‌ಬಾಲ್- ಹೊನ್ನಾಳಿ ಹಿರೇಕಲ್ಮಠ ಎಸ್‌ಎಂಎಸ್‌ಎಫ್‌ಸಿ (ಪ್ರಥಮ ಸ್ಥಾನ), ದಾವಣಗೆರೆ ಬಿಪಿಎಡ್ (ದ್ವಿತೀಯ), ಶಿವಗಂಗೋತ್ರಿ ಪಿಜಿ (ತೃತೀಯ), ಜಿಎಫ್‌ಸಿ ದಾವಣಗೆರೆ ನಾಲ್ಕನೆ ಸ್ಥಾನ ಪಡೆದಿವೆ.
ಖೋ ಖೋ- ಶಿವಗಂಗೋತ್ರಿ ಪಿಜಿ (ಪ್ರಥಮ), ಜಿಎಫ್‌ಸಿ ಭರಮಸಾಗರ (ದ್ವಿತೀಯ), ಜಿಎಫ್‌ಸಿ ಹೊಳಲ್ಕೆರೆ (ತೃತೀಯ), ಜಿಎಫ್‌ಜಿಸಿ ದಾವಣಗೆರೆ ನಾಲ್ಕನೇ ಸ್ಥಾನ ಪಡೆದಿವೆ.ಬಾಲ್ ಬ್ಯಾಡ್ಮಿಂಟನ್- ಜಿಎಫ್‌ಜಿಸಿ ಭರಮಸಾಗರ (ಪ್ರಥಮ), ಎಸ್ಎಂಎಸ್‌ಎಫ್‌ಸಿ ಹಿರೇಕಲ್ಮಠ ಹೊನ್ನಾಳಿ (ದ್ವಿತೀಯ), ಎವಿಕೆ ದಾವಣಗೆರೆ (ತೃತೀಯ), ಜಿಎಫ್‌ಜಿಸಿ ನ್ಯಾಮತಿ ನಾಲ್ಕನೇ ಸ್ಥಾನ ಪಡೆದಿವೆ.
ಟೆನಿಕಾಯ್ಟ್- ಬಿಪಿಎಡ್ ದಾವಣಗೆರೆ (ಪ್ರಥಮ), ಜಿಎಫ್‌ಜಿಸಿ ನ್ಯಾಮತಿ (ದ್ವಿತೀಯ), ಜಿಎಫ್‌ಜಿಸಿ ದಾವಣಗೆರೆ (ತೃತೀಯ), ಎವಿಕೆ ದಾವಣಗೆರೆ ನಾಲ್ಕನೇ ಸ್ಥಾನ ಪಡೆದಿವೆ.ಕಬಡ್ಡಿ- ಎಸ್‌ಎಂಎಸ್‌ಎಫ್‌ಸಿ ಹಿರೇಕಲ್ಮಠ ಹೊನ್ನಾಳಿ (ಪ್ರಥಮ), ಎವಿಕೆ ದಾವಣಗೆರೆ (ದ್ವಿತೀಯ), ಜಿಎಫ್‌ಜಿಸಿ ನ್ಯಾಮತಿ (ತೃತೀಯ), ಜಿಎಫ್‌ಜಿಸಿ ಹೊನ್ನಾಳಿ ನಾಲ್ಕನೇ ಸ್ಥಾನ ಪಡೆದಿವೆ.
ಥ್ರೋಬಾಲ್- ಜಿಎಫ್‌ಜಿಸಿ ದಾವಣಗೆರೆ (ಪ್ರಥಮ), ಜಿಎಫ್‌ಜಿಸಿ ಹೊಸದುರ್ಗ (ದ್ವಿತೀಯ), ಹೊನ್ನಾಳಿ ಹಿರೇಕಲ್ಮಠ (ತೃತೀಯ), ಬಿಪಿಎಡ್ ದಾವಣಗೆರೆ ನಾಲ್ಕನೇ ಸ್ಥಾನ ಗಳಿಸಿವೆ.ವಾಲಿಬಾಲ್- ಜಿಎಫ್‌ಜಿಸಿ ಹರಿಹರ (ಪ್ರಥಮ), ಜಿಎಫ್‌ಜಿಸಿ ದಾವಣಗೆರೆ (ದ್ವಿತೀಯ), ಎಚ್‌ಬಿಪಿಸಿ ಚಳ್ಳಕೆರೆ (ತೃತೀಯ), ಜಿಎಫ್‌ಜಿಸಿ ಹೊಸದುರ್ಗ ನಾಲ್ಕನೇ ಸ್ಥಾನ ಪಡೆದುಕೊಂಡಿವೆ.
- - - (-ಫೋಟೋ:)