ಕಬ್ಬು ಕಟಾವು ಕಾರ್ಮಿಕರಿಗೆ ‘ಕಾರ್ಮಿಕ ಕಾರ್ಡ್‌’ ಬೇಕೆಂಬ ಸರಿ ಇದೆ: ಸಚಿವ ಲಾಡ್‌

KannadaprabhaNewsNetwork | Published : Dec 18, 2024 12:45 AM

ಸಾರಾಂಶ

ಈಗಾಗಲೇ 25 ವಲಯಗಳಿಗೆ ಕಾರ್ಮಿಕರ ಕಾರ್ಡ್‌ ನೀಡಿದ್ದೇವೆ. ಕಾರ್ಮಿಕರ ಕಾರ್ಡ್‌ ಕೊಡುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹಣ ಕೇಳಿದ್ದೇನೆ. ಕಬ್ಬು ಕಟಾವು ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ಬೇಡಿಕೆ ಸರಿ ಇದೆ.

ಕನ್ನಡಪ್ರಭ ವಾರ್ತೆ ಸುವರ್ಣಸೌಧ

ಕಬ್ಬು ಕಟಾವು ಕಾರ್ಮಿಕರಿಗೆ ‘ಕಾರ್ಮಿಕರ ಕಾರ್ಡ್‌’ ನೀಡಬೇಕೆಂಬ ಬೇಡಿಕೆ ಸರಿ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 25 ವಲಯಗಳಿಗೆ ಕಾರ್ಮಿಕರ ಕಾರ್ಡ್‌ ನೀಡಿದ್ದೇವೆ. ಕಾರ್ಮಿಕರ ಕಾರ್ಡ್‌ ಕೊಡುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹಣ ಕೇಳಿದ್ದೇನೆ. ಕಬ್ಬು ಕಟಾವು ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ಬೇಡಿಕೆ ಸರಿ ಇದೆ ಎಂದರು.

ಸುವರ್ಣ ಸೌಧದ ಬಳಿ ಸಾಲು ಪ್ರತಿಭಟನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಮಾಡುವವರಿಗೆ ಗೌರವ ಇದೆ. ಈಗಾಗಲೇ ಪ್ರತಿಭಟನಾ ಸ್ಥಳಗಳಿಗೆ ಸಂಬಂಧಪಟ್ಟ ಸಚಿವರು ಭೇಟಿ ನೀಡುತ್ತಿದ್ದಾರೆ. ಪ್ರಮುಖ ಬೇಡಿಕೆಗಳನ್ನು ಈಡೇರಿಸಲಿದ್ದಾರೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಬಿಜೆಪಿಯವರು ಸ್ಪೀಕರ್‌ಗೆ ಮನವಿ ಮಾಡಬೇಕು. ಸದನದ ಇತಿಹಾಸದಲ್ಲಿ ಚರ್ಚೆಗೆ ಸ್ಪೀಕರ್ ಖಾದರ್‌ ನೀಡಿರುವಷ್ಟು ಸಮಯ ಬೇರೆ ಯಾರೂ ಕೊಟ್ಟಿಲ್ಲ ಎಂದು ಪ್ರಶ್ನೆಯೊಂದಕ್ಕೆ ಲಾಡ್ ಪ್ರತಿಕ್ರಿಯಿಸಿದರು.ಮಳಿಗೆ ತೆರೆದು ಸ್ವಯಂ ರಚಿತ ಪುಸ್ತಕ ಮಾರಾಟ: ಭೀಮರಾಯ ಹೂಗಾರ

ಮಂಡ್ಯ:

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆ ತೆರೆದು ಸ್ವಯಂ ರಚಿತ ಪುಸ್ತಕಗಳ ಮಾರಾಟ ಮಾಡಲಾಗುತ್ತಿದೆ. ಪುಸ್ತಕ ಪ್ರೇಮಿಗಳು ಪುಸ್ತಕ ಖರೀದಿಸಿ ಪ್ರೋತ್ಸಾಹಿಸಬೇಕು ಎಂದು ವಿಜಯಪುರ ಜಿಲ್ಲೆಯ ಲೇಖಕ ಭೀಮರಾಯ ಹೂಗಾರ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಖಕನಾಗಿ ಇದುವರೆಗೂ 50 ಪುಸ್ತಕಗಳ ರಚನೆ ಮಾಡಿದ್ದು, ವಿಜಯಪುರ ಜಿಲ್ಲೆಯಿಂದ ಮಂಡ್ಯ ಜಿಲ್ಲೆಯವರೆಗೂ 600 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಸ್ಕೂಟರ್ ಮೂಲಕ ಪುಸ್ತಕಗಳ ಪ್ರಚಾರ ಮಾಡಿ ಸಮ್ಮೇಳನ ನಡೆಯುವ ಜಿಲ್ಲೆಯನ್ನು ತಲುಪಿದ್ದೇನೆ ಎಂದರು.

ಇಲ್ಲಿಯವರೆಗೆ 50 ಪುಸ್ತಕ ಪ್ರಕಟಿಸಿರುವುದರ ಜೊತೆಗೆ ಒಂದು ಲಕ್ಷ ನುಡಿ ಮುತ್ತುಗಳನ್ನು ಬರೆದಿದ್ದೇನೆ. ಆನ್‌ಲೈನ್ ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಲಕ್ಷಾಂತರ ಪುಸ್ತಕಗಳ ಮಾರಾಟ ಮಾಡಿದ್ದೇನೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಲ್ಕು ಮಳಿಗೆಗಳಲ್ಲಿ ಪುಸ್ತಕ ಮಾರಾಟಕ್ಕೆ ಮುಂದಾಗಿದ್ದೇನೆ. ಪುಸ್ತಕಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್.ಪಿ.ನಾರಾಯಣಸ್ವಾಮಿ ಇದ್ದರು.

Share this article