ಕನ್ನಡಪ್ರಭವಾರ್ತೆ ತಿಪಟೂರು
ನಗರದ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹತ್ತಾರು ಹಳ್ಳಿಗಳ ಜೀವನಾಡಿ ಹಾಲುಕುರ್ಕೆ ಕೆರೆಗೆ ನೀರು ಹರಿಸುವ ನಿಟ್ಟಿನಲ್ಲಿ ಶಾಸಕರು ಅವರದ್ದೇ ಸರ್ಕಾರದೊಂದಿಗೆ ಮಾತುಕತೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ತಪ್ಪಿದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಹಾಲ್ಕುರಿಕೆ ನಂಜುಂಡಪ್ಪ ಅವರ ನೇತೃತ್ವದಲ್ಲಿ ಇದೇ ತಿಂಗಳು ೨೩ನೇ ತಾರೀಖಿನಂದು ಮಠಾಧೀಶರ ನೇತೃತ್ವದಲ್ಲಿ ಅಪಾರ ಸಂಖ್ಯೆಯ ರೈತರು ಹಾಗೂ ಹೋರಾಟಗಾರರು ಗ್ರಾಮದಿಂದ ತಿಪಟೂರು ಎಸಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಲಿದ್ದಾರೆ ಎಂದು ತಿಳಿಸಿದರು.ಈ ಬಾರಿ ತಾಲೂಕಿನ ಬರದ ಹೋಬಳಿ ಎಂದೇ ಹೆಸರಾಗಿರುವ ಕಸಬಾ ಹಾಗೂ ಹೊನ್ನವಳ್ಳಿ ಹೋಬಳಿಯ ಯಾವುದೇ ಪ್ರಮುಖ ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸದಿರುವುದು ಶಾಸಕರು ಈ ತಾಲೂಕಿನ ಜನರಿಗೆ, ರೈತರಿಗೆ ಮಾಡಿರುವ ಬಹುದೊಡ್ಡ ದ್ರೋಹವಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಹತ್ತಾರು ಕಾಂಗ್ರೆಸ್ ಮುಖಂಡರು ಜೆಡಿಎಸ್ ಮುಖಂಡರಾದ ಶಾಂತಕುಮಾರ್ ನೇತೃತ್ವದ ಹೋರಾಟ ಮನೋಭಾವ ಒಪ್ಪಿ ಜೆಡಿಎಸ್ ಪಕ್ಷ ಸೇರಿದರು. ಈ ಸಂದರ್ಭದಲ್ಲಿ ಪ್ರಮುಖವಾಗಿ ಎಪಿಎಂಸಿ ಮಾಜಿ ನಿರ್ದೇಶಕ ಬೋರ್‌ವೆಲ್ ಮಧುಸೂದನ್, ದಕ್ಷಿಣಮೂರ್ತಿ, ಬಸವರಾಜು, ರಂಗಪ್ಪ, ಉಮೇಶ್, ರವಿ, ಕಿರಣ್, ಸುರೇಶ್, ಹರ್ಷವರ್ಧನ್ ಜೆಡಿಎಸ್ ಸೇರ್ಪಡೆಗೊಂಡರು.