ಕನ್ನಡಪ್ರಭ ವಾರ್ತೆ, ಬೀರೂರು: ಕನ್ನಡ ಭಾಷೆಗೆ ಭವ್ಯ ಇತಿಹಾಸವಿದ್ದು, ಕನ್ನಡ ಸುಮದರ ಲಿಪಿ ಹೊಂದಿದೆ. ನೆಲ, ಜಲ, ಭಾಷೆಗಾಗಿ ಕನ್ನಡ ನಾಡು ಒಂದಾಗಿದ್ದು ಅದರ ಗೌರವ ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ಪುರಸಭಾಧ್ಯಕ್ಷೆ ವನಿತಾಮಧು ಹೇಳಿದರು.
ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್ ಮಾತನಾಡಿ, ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣಗಳ ನಡುವೆ ಕನ್ನಡ ಭಾಷೆ ನಲುಗುತ್ತಿದೆ. ಆದರೆ ಕನ್ನಡ ಭಾಷೆ ಉಳಿಸುವಲ್ಲಿ ಕನ್ನಡ ನಾಡು ನುಡಿ ನೆಲ, ಜಲ. ಪರಂಪರೆ ಉಳಿವಿಗೆ ಗ್ರಾಮೀಣ ಭಾಗದ ಯುವಜನರು ಹೆಚ್ಚು ಆಸಕ್ತಿ ಹೊಂದುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಜನರು ಅಲ್ಲಿನ ನೆಲ-ಜಲಕ್ಕಾಗಿ ಹೋರಾಟ ಮಾಡಿದರೆ, ಕನ್ನಡಿಗರ ಕರುನಾಡಲ್ಲಿ ಭಾಷೆ ಉಳಿವಿಗೆ ನಾವು ಹೋರಾಟ ಮಾಡುವ ಸ್ಥಿತಿ ಇದೆ. ಕನ್ನಡವನ್ನು ಗೌರವಿಸುವ ಜೊತೆ ಭಾಷೆ ಬಳಸಿ ಬೆಳೆಸಲು ಸಾಧ್ಯ ಎಂದರು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಕನ್ನಡದ ಕಾಳಜಿ ನವೆಂಬರ್ ಗೆ ಸೀಮಿತವಾಗದೆ ಜೀವನದ ಆದರ್ಶವಾಗಬೇಕು. ಮಕ್ಕಳಲ್ಲಿ ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸಬೇಕು. ಕನ್ನಡಿಗರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಮಾತೃಭಾಷೆ ಕಲಿಸಿದಾಗ ಕನ್ನಡ ಉಳಿಸಲು ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಹರಿಪ್ರಸಾದ್ ನಿವೃತ್ತ ಯೊಧರು, ಪೌರಕಾರ್ಮಿಕರು, ಗಣ್ಯರನ್ನು ಸನ್ಮಾನಿಸಿದರು.ಪುರಸಭೆ ಸದಸ್ಯರಾದ ಸಹನ ವೆಂಕಟೇಶ್, ಜ್ಯೋತಿ ಸಂತೋಷ್ ಕುಮಾರ್, ಜ್ಯೋತಿ ವೆಂಣಕಟೇಶ್, ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಮತ್ತಿತರರು ಇದ್ದರು.
1 ಬೀರೂರು 2ಬೀರೂರಿನ ಪುರಸಭಾ ಕಚೇರಿ ಮುಂಭಾಗದಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುರಸಭಾಧ್ಯಕ್ಷೆ ವನಿತಾಮಧು ಕನ್ನಡ ಬಾವುಟದ ಧ್ವಜಾರೋಹಣ ನೆರವೇರಿಸಿದರು. ಮುಖ್ಯಾಧಿಕಾರಿ ಜಿ.ಪ್ರಕಾಶ್, ನಾಗರಾಜ್, ಬಿ.ಆರ್.ಮೋಹನ್ ಕುಮಾರ್, ವೈ.ಎಂ.ಲಕ್ಷö್ಮಣ್ ಇತರರು ಇದ್ದರು