ರಂಗಭೂಮಿ ಕಲೆ ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ: ಕೆರೆಹಳ್ಳಿ ಬಿ.ದೊರೆಸ್ವಾಮಿ

ಕಲೆ ಎಲ್ಲರನ್ನೂ ಕೈ ಬಿಸಿ ಕರಿಯುತ್ತದೆ, ಆದರೆ ಕೆಲವರನ್ನ ಮಾತ್ರ ಆಯ್ಕೆ ಮಾಡುತ್ತದೆ. ಈ ಕಲೆ ಅಳವಡಿಸಿಕೊಂಡರೆ ಯಾವುದೇ ದುಶ್ಚಟಕ್ಕೆ ಬಲಿಯಾಗದೆ, ಒಳ್ಳೆಯ ಮಾರ್ಗದಲ್ಲಿ ನಡೆಯಬಹುದು, ಆದ್ದರಿಂದ ಈ ಶಿಬಿರವನ್ನು ಮಕ್ಕಳು ಈಗ ಬೇಸಿಗೆ ರಜೆಯಲ್ಲಿ ಇರುವುದರಿಂದ ರಂಗಭೂಮಿ ಕಲೆ, ಹಾಡುಗಾರಿಕೆ, ಅಭಿನಯ, ವಾಕ್ ಚಾತುರ್ಯ ಹಾಗೂ ಶ್ರದ್ಧೆ ಆಸಕ್ತಿ ಹೇಗಿರಬೇಕು ಎಂಬುದರ ಅರಿವು ಮಕ್ಕಳಿಗೆ ಮೂಡಿಸಿ ಮುಂದಿನ ಪೀಳಿಗೆಗೆ ರಂಗಭೂಮಿ ಕಲೆ ಉಳಿಸಬೇಕು, ಬೆಳೆಸಬೇಕು.

KannadaprabhaNewsNetwork | Published : Apr 27, 2024 7:50 PM IST

ಕನ್ನಡಪ್ರಭ ವಾರ್ತೆ ಮೈಸೂರು

ರಂಗಭೂಮಿ ಕಲೆ ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ರಂಗಭೂಮಿ ಕಲಾವಿದ ಕೆರೆಹಳ್ಳಿ ಬಿ. ದೊರೆಸ್ವಾಮಿ ಹೇಳಿದರು.

ನಗರದ ಆಲನಹಳ್ಳಿ ಬಡಾವಣೆಯ ವಿನಾಯಕನ ದೇವಸ್ಥಾನದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಎನ್.ಆರ್. ವಲಯದ ವತಿಯಿಂದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.

ಕಲೆ ಎಲ್ಲರನ್ನೂ ಕೈ ಬಿಸಿ ಕರಿಯುತ್ತದೆ, ಆದರೆ ಕೆಲವರನ್ನ ಮಾತ್ರ ಆಯ್ಕೆ ಮಾಡುತ್ತದೆ. ಈ ಕಲೆ ಅಳವಡಿಸಿಕೊಂಡರೆ ಯಾವುದೇ ದುಶ್ಚಟಕ್ಕೆ ಬಲಿಯಾಗದೆ, ಒಳ್ಳೆಯ ಮಾರ್ಗದಲ್ಲಿ ನಡೆಯಬಹುದು, ಆದ್ದರಿಂದ ಈ ಶಿಬಿರವನ್ನು ಮಕ್ಕಳು ಈಗ ಬೇಸಿಗೆ ರಜೆಯಲ್ಲಿ ಇರುವುದರಿಂದ ರಂಗಭೂಮಿ ಕಲೆ, ಹಾಡುಗಾರಿಕೆ, ಅಭಿನಯ, ವಾಕ್ ಚಾತುರ್ಯ ಹಾಗೂ ಶ್ರದ್ಧೆ ಆಸಕ್ತಿ ಹೇಗಿರಬೇಕು ಎಂಬುದರ ಅರಿವು ಮಕ್ಕಳಿಗೆ ಮೂಡಿಸಿ ಮುಂದಿನ ಪೀಳಿಗೆಗೆ ರಂಗಭೂಮಿ ಕಲೆ ಉಳಿಸಬೇಕು, ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಈ ಶಿಬಿರ ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು

ರಂಗಭೂಮಿ ನಿರ್ದೇಶಕ ಬೀರಿಹುಂಡಿ ಗೋವಿಂದರಾಜು ಮಾತನಾಡಿ, ಇವತ್ತಿನ ಕಾಲದಲ್ಲಿ ಚಲನಚಿತ್ರಕ್ಕೂ ಸಹ ಯುವ ಸಮೂಹ ವೀಕ್ಷಿಣೆ ಮಾಡುವುದು ಗಣನೀಯವಾಗಿದೆ, ಅದರಲ್ಲೂ ರಂಗಭೂಮಿ ಕಲೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ದೊರೆಸ್ವಾಮಿ ಅವರು ಮಕ್ಕಳಿಗೆ ಇದರ ಬಗ್ಗೆ ಹಾಗೂ ಅನೇಕ ದಿಗ್ಗಜ ಚಲನಚಿತ್ರ ನಟರು ರಂಗಭೂಮಿ ಕಲೆಯಿಂದ ಪಾದರ್ಪಣೆ ಮಾಡಿರುವುದರ ಬಗ್ಗೆ ಅರಿವು ಮೂಡಿಸಿ ಹಾಗೂ ಹಾಡುಗಳನ್ನು ಮಕ್ಕಳೊಂದಿಗೆ ಹಾಡಿ ಮಕ್ಕಳಿಗೂ ಸಹ ಅಭ್ಯಾಸ ಮಾಡಸಲಾಯಿತು.

ಸಕಹಳ್ಳಿ ಮಹದೇವಸ್ವಾಮಿ, ಹೊಸಕೋಟೆ ನಂದೀಶ್, ಕೆರೆಹಳ್ಳಿ ಲೋಹಿತ್, ಬಾಗಳಿ ಮಹೇಶ್, ಹೊಸಕೋಟೆ ಪ್ರಭುಸ್ವಾಮಿ, ಹೊಸಕೋಟೆ ಸುಂದ್ರಪ್ಪ, ರಂಗಭೂಮಿ ಕಲಾವಿದರು ಭಾಗವಹಿಸಿ, ಪೌರಾಣಿಕ ನಾಟಕಗಳ ಮಹತ್ವವನ್ನು ತಿಳಿಸಿ ಮತ್ತು ಅನೇಕ ರಂಗಗೀತೆಗಳನ್ನು ಹಾಡಿ ಶಿಬಿರಾರ್ಥಿಗಳನ್ನು ಮನರಂಜಿಸಿತು.

ವೀರಶೈವ ಸಮಾನ ಮನಸ್ಕರ ಸ್ನೇಹ ಬಳಗ ಕುದೇರು ಮಠದಿಂದ ರಂಗಭೂಮಿ ಮಹತ್ವ, ಹಾಡುಗಾರಿಕೆ, ಅಭಿನಯ, ವಿಷಯ ಕುರಿತು, ನಿವೃತ್ತ ಡಿವೈಎಸ್ಪಿ ಶಿವಬಸಪ್ಪ, ಕೆರೆಹಳ್ಳಿ ದೊರೆಸ್ವಾಮಿ ಸಾರಥ್ಯದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.

ಹಿರಿಯ ಯೋಗ ಬಂಧು ವಿಲ್, ರಾಜಣ್ಣ, ಸಂತೋಷ್, ಹನುಮಂತ್ ಇದ್ದರು.

Share this article