- ಬಿಜೆಪಿ ನಾರಿಶಕ್ತಿ ಬಳಗದಿಂದ ಲಕ್ಕವಳ್ಳಿ ಕದಳಿ ರಂಗನಾಥಸ್ವಾಮಿ ದೇವಸ್ಥಾನದ ಸುತ್ತ ಸ್ವಚ್ಚತಾ ಕಾರ್ಯಕ್ರಮ
ಪ್ರವಾಸಿ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ತರೀಕೆರೆ ತಾಲೂಕು ಪಂಚಾಯಿತಿ ನಿವೃತ್ತ
ಕಾರ್ಯ ನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ ಹೇಳಿದ್ದಾರೆ.ಬಿಜೆಪಿ ನಾರಿ ಶಕ್ತಿ ಬಳಗದಿಂದ ಏರ್ಪಡಿಸಿದ್ದ ತಾಲೂಕಿನ ಲಕ್ಕವಳ್ಳಿ ಗ್ರಾಪಂ ವ್ಯಾಪ್ತಿಯ ಕದಳಿ ರಂಗನಾಥಸ್ವಾಮಿ ದೇವಸ್ಥಾನ ಸುತ್ತ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ದಿನ ಸಮಾಜ ಸೇವೆಯಲ್ಲಿ ತೊಡಗಿರುವಂತ ಸುಧಾ ಮತ್ತು ಶ್ರೀನಿವಾಸರವರ ಹುಟ್ಟು ಹಬ್ಬದ ಪ್ರಯುಕ್ತ ಲಕ್ಕವಳ್ಳಿ ಗ್ರಾಪಂ ವ್ಯಾಪ್ತಿಯ ಕದಳಿ ರಂಗನಾಥ ಸ್ವಾಮಿ ದೇವಸ್ಥಾನ ಪ್ರವಾಸಿ ಸ್ಥಳವಾಗಿರುವುದರಿಂದ ಇದರ ಸುತ್ತ ಮುತ್ತ ಅದರ ಎದುರುಗಡೆ ಸ್ವಚ್ಛತಾ ಕಾರ್ಯಕ್ರಮವನ್ನು ಬಿಜೆಪಿ ನಾರಿ ಶಕ್ತಿ ಬಳಗ ಹಮ್ಮಿಕೊಂಡಿರುವುದು ಒಂದು ವಿಶೇಷ. ಪ್ರತಿಯೊಬ್ಬರ ಹುಟ್ಟು ಹಬ್ಬದಂದು ಒಂದೊಂದು ಕಾರ್ಯಕ್ರಮ ಹಮ್ಮಿಕೊಂಡು ಸಮಾಜಸೇವೆ ಮಾಡುತ್ತ ಬಂದಿರುವುದು ಬಹಳ ವಿಶೇಷ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಮಾತನಾಡಿ ಈ ದಿನ ನಮ್ಮ ಬಿಜೆಪಿ ನಾರಿ ಶಕ್ತಿ ಬಳಗದ ಸದಸ್ಯರಾದ ಸುಧಾ ಶ್ರೀನಿವಾಸ್ ಹುಟ್ಟುಹಬ್ಬವನ್ನು ಕದಳಿ ರಂಗನಾಥ ಸ್ವಾಮಿ ದೇವಸ್ಥಾನದ ಆವರಣ ಸ್ವಚ್ಛತೆ ಮಾಡುವ ಮೂಲಕ ಆಚರಿಸುತ್ತಿ ರುವುದು ವಿಶೇಷ. ಪ್ರವಾಸಿಗರಿಗೆ ಈ ಬಗ್ಗೆ ಮಾಹಿತಿ ನೀಡಿ ಮುಂದೆ ಬರುವ ಎಲ್ಲಾ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡು ವುದು ಬಹಳ ಪ್ರಮುಖ ಅಂಶ ಎಂದು ಹೇಳಿದರು.
ನಾರಿ ಶಕ್ತಿ ಬಳಗದ ಸದಸ್ಯರಾದ ಅರುಂಧತಿ ಮಾತನಾಡುತ್ತ ಈ ದಿನ ಹುಟ್ಟು ಹಬ್ಬದ ಪ್ರಯುಕ್ತ ಕದಳಿ ರಂಗನಾಥ ಸ್ವಾಮಿ ದೇವಸ್ಥಾನದ ಆವರಣ ಮತ್ತು ಅದರ ಸುತ್ತಲ ಪರಿಸರವನ್ನ ಸ್ವಚ್ಛಗೊಳಿಸಿರುವುದು ಸಂತೋಷಕರ ವಿಷಯ. ಹಾಗೆಯೇ ಪ್ರವಾಸಿ ಸ್ಥಳಕ್ಕೆ ಬರುವ ಜನರು ಸ್ವಚ್ಛತೆ ಕಾಪಾಡಬೇಕು. ಈ ದಿನ ನಮ್ಮ ನಾರಿ ಶಕ್ತಿ ಬಳಗದಿಂದ ಪ್ರತಿಯೊಬ್ಬರ ಹುಟ್ಟು ಹಬ್ಬದಂದು ಒಂದೊಂದು ಕಾರ್ಯಕ್ರಮ ಹಮ್ಮಿಕೊಳ್ಳು ತ್ತಿರುವುದು ಉತ್ತಮ ಎಂದರು.
ಅಜ್ಜಂಪುರ ತಾಲೂಕಿನ ಮಾಜಿ ತಾಪಂ ಮಾಜಿ ಅಧ್ಯಕ್ಷೆ ಪ್ರತಿಮಾ ಸೋಮಶೇಖರ್ ಮಾತನಾಡಿ, ನಮ್ಮ ನಾರಿಶಕ್ತಿ ಬಳಗದಿಂದ ಹುಟ್ಟುಹಬ್ಬ ದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಪ್ರವಾಸಿ ಸ್ಥಳವಾದ ಕದಳಿ ರಂಗನಾಥ ಸ್ವಾಮಿ ದೇಗುಲದ ಮುಂದೆ ನಾವೆಲ್ಲರೂ ಸೇರಿ ಸ್ವಚ್ಛ ಮಾಡಿರುವುದು ಮಾದರಿ ಕೆಲಸ ಎಂದು ತಿಳಿಸಿದರು.
ಬಿ.ಜೆ.ಪಿ.ನಾರಿಶಕ್ತಿ ವತಿಯಿಂದ ಸಮೀಪದ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಳಿ ರಂಗನಾಥ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.