ರೈತರ ಹಿತ ಕಾಪಾಡುವುದು ಅಧಿಕಾರಿಗಳ ಕರ್ತವ್ಯ: ಬೈರತಿ ಸುರೇಶ್‌

KannadaprabhaNewsNetwork |  
Published : Nov 22, 2025, 01:15 AM IST
೨೧ಕೆಎಲ್‌ಆರ್-೬ಕೋಲಾರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಯೋಜನೆ (ಕೆಡಿಪಿ)ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಮಾತನಾಡಿದರು. | Kannada Prabha

ಸಾರಾಂಶ

ಅರಣ್ಯ ಇಲಾಖೆಯು ಏಕಪಕ್ಷಿಯ ನಿರ್ಣಯ ಕೈಗೊಂಡು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವುದಾಗಿ ಕಂಡುಬಂದಿದ್ದು, ರೈತರು ಸರ್ಕಾರದ ಮೊರೆ ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಅರಣ್ಯ ಒತ್ತುವರಿ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವುದನ್ನು ಅರಣ್ಯ ಇಲಾಖೆ ತಡೆಯಬೇಕು. ಜೊತೆಗೆ ನೇರವಾಗಿ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿಯಬಾರದು. ಇದಕ್ಕಾಗಿ ರೂಪಿಸಲಾಗಿರುವ ಜಿಲ್ಲಾ ಮಟ್ಟದ ಎಸ್‌ಐಟಿ ಮೂಲಕ ರಾಜ್ಯ ಮಟ್ಟಕ್ಕೆ ಶಿಫಾರಸ್ಸು ಮಾಡಿ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ನಗರ ಯೋಜನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ತಾಕೀತು ಮಾಡಿದರು.ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಯೋಜನೆ (ಕೆಡಿಪಿ)ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಅರಣ್ಯ ಇಲಾಖೆಯು ಏಕಪಕ್ಷಿಯ ನಿರ್ಣಯ ಕೈಗೊಂಡು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವುದಾಗಿ ಕಂಡುಬಂದಿದ್ದು, ರೈತರು ಸರ್ಕಾರದ ಮೊರೆ ಹೋಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಎಸ್‌ಐಟಿ ಮೂಲಕ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಶಾಸಕ ಡಾ. ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಮಣಿಯನಹಳ್ಳಿಯಿಂದ ಕೋಲಾರ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ ಮಾಡುವಾಗ ಬದಿಯಲ್ಲಿ ನೆಡಲಾದ ಗಿಡಗಳಿಂದಾಗಿ ರಸ್ತೆ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಗೆ ತೊಡಕಾಗುತ್ತಿರುವ ಗಿಡಗಳನ್ನು ತಕ್ಷಣವೇ ಯಾವುದೇ ವೆಚ್ಚ ಬಾರದಂತೆ ತೆರವುಗೊಳಿಸಿ ಸ್ಥಳಾಂತರಿಸಲು ಸೂಚನೆ ನೀಡುವಂತೆ ಸಭೆಯಲ್ಲಿ ತಿಳಿಸಿದರು. ಸಚಿವರು ಅದರಂತೆ ಕ್ರಮ ಕೈಗೊಳ್ಳುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ತಾಕೀತು ಮಾಡಿದರು.ಮಾಲೂರು ಶಾಸಕ ನಂಜೇಗೌಡ ಮಾತನಾಡಿ, ರಾಜ್ಯ ಸರ್ಕಾರದಿಂದ ರೈತರ ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ಎಸ್‌ಐಟಿಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ವರದಿ ನೀಡಿ, ಆದರೆ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬೇಡಿ, ಇದು ವರದಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯದ ತೀರ್ಪುನಂತೆ ನಡೆಯಲಾಗುವುದು ಎಂದರು.ಡಿಸಿಎಫ್ ಸರೀನಾ ಸಿಕ್ಕಲಿಗರ್ ಮಾತನಾಡಿ, ರಾಜ್ಯ ಸರಕಾರ ಎಸ್‌ಐಟಿ ತಂಡವನ್ನು ಮಾಡಲಾಗಿದ್ದು, ಅರಣ್ಯ ಒತ್ತುವರಿಯ ವರದಿಯನ್ನು ಗುರ್ತಿಸಿ ನೀಡಲಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು.ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಡಿಸಿ ಹಾಗೂ ಡಿಸಿಎಫ್ ಸಭೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಅಂತಿಮ ವರದಿಯನ್ನು ಎಸ್‌ಐಟಿಗೆ ಸಲ್ಲಿಸುವ ಕರ್ತವ್ಯವಾಗಬೇಕು, 1980ರಲ್ಲಿ ಮಂಜೂರಾಗಿರುವುದು ಕಾನೂನು ಬಾಹಿರವಾಗಿದೆ ಎಂದರು.ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ಡಿಸಿಎಫ್ ಹಾಗೂ ನಾನು ಸಭೆಯನ್ನು ನಡೆಸಿದ್ದು, ಜಿಲ್ಲಾ ಮಟ್ಟದ ಅರಣ್ಯ ಹಾಗೂ ಕಂದಾಯ ಇಲಾಖೆ ಕಡತಗಳ ಪರಿಶೀಲನೆಯಲ್ಲಿ ದಾಖಲೆಗಳನ್ನು ಒಳಗೊಂಡತೆ ಆಗಿದೆ ಎಂದರು.ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೋಲಾರದ ಆರ್‌ಎಫ್‌ಒ ಶಿವಕುಮಾರ್ ವ್ಯಾಪಾರಿ ಮುನಿಸ್ವಾಮಿರಿಂದ ಸುಮಾರು 35 ಸಾವಿರ ರು.ಗಳನ್ನು ಲಂಚದ ರೂಪದಲ್ಲಿ ಮೊಬೈಲ್‌ನ ಪೋನ್‌ಪೇ ಮೂಲಕ ಹಣವನ್ನು ಪಡೆದಿದ್ದು, ಈ ಕೂಡಲೇ ಅಮಾನತುಗೊಳಿಸಬೇಕು ಎಂದಾಗ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಅವರು, ಸಿಸಿಎಫ್ ಅವರಿಗೆ ಪತ್ರ ಬರೆದು ತನಿಖೆ ನಡೆಸಿ ಭ್ರಷ್ಟಾಚಾರ ಕಂಡು ಬಂದರೆ, ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಶಾಸಕ ಕೊತ್ತೂರು ಮಂಜುನಾಥ್, ಜಿಲ್ಲೆಯ ಜನಪ್ರತಿನಿಧಿಗಳು ದಿಕ್ಕು ತಪ್ಪಿಸುವ ಕೆಲಸ ಅಧಿಕಾರಿಗಳಿಂದ ಆಗುವುದು ಬೇಡ, ಇಲಾಖೆಯಲ್ಲಿ ಕಳ್ಳರು ನಿಮ್ಮ ಕಡೆ ಇದ್ದಾರೆ. ಇನ್ನೂ ಜಿಲ್ಲೆಯಲ್ಲಿ ಎಷ್ಟು ಕಡೆ ಗಿಡಗಳನ್ನೂ ಹಾಕಿರುವ ಜಿಪಿಎಸ್ ಮಾಹಿತಿ ನೀಡಲು, ನಾನೇ ಆರ್‌ಟಿಐ ಅರ್ಜಿಯ ಮೂಲಕ ಮಾಹಿತಿ ಪಡೆಯಲಾಗುತ್ತದೆ ಎಂದರು.ಸಚಿವ ಭೈರತಿ ಸುರೇಶ್‌ ಮಾತನಾಡಿ, ಅರಣ್ಯ ಇಲಾಖೆಯಿಂದ ಕಳೆದ ಅ. 10/2005ರ ಸುತ್ತೋಲೆಯಲ್ಲಿ ಸೂಕ್ತ ಶಿಫಾರಸ್ಸು ಮಾಡಲಾಗಿದೆ. 3 ಎಕರೆ ಯೊಳಗಿನ ಅರಣ್ಯ ಇಲಾಖೆ ಜಮೀನನ್ನೂ ರೈತರು ಒಕ್ಕಲೆಬ್ಬಿಸಬೇಡಿ, ಒಂದು ವೇಳೆಯಲ್ಲಿ ತೆರವು ಮಾಡಿರುವ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ನಿಖಿಲ್, ಕೆ.ಜಿ.ಎಫ್ ಎಸ್‌ಪಿ ಶಿವಾಂಶು ರಜಪೂತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗಾರ್ ಇದ್ದರು.

PREV

Recommended Stories

ಮಠ-ಮಾನ್ಯಗಳು ಗ್ರಾಮ ಸೇವೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕು: ಎಚ್‌.ಕೆ. ಪಾಟೀಲ್
ದೊಡ್ಡ ಕನಸುಗಳ ಈಡೇರಿಕೆಗೆ ಶಿಕ್ಷಣ ಬೇಕು: ಪ್ರೊ.ಡಿ.ಎಸ್.ಗುರು