ಸಮಾಜದಲ್ಲಿ ಬದಲಾವಣೆ ಬರಲು ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಇದು ಸಾಧ್ಯವಾಗಲು ನೀತಿ ಪಾಠಗಳು ಮತ್ತೆ ಶಿಕ್ಷಣ ವ್ಯವಸ್ಥೆಯ ಭಾಗವಾಗಬೇಕು. ಶಾಲಾ ಚಟುವಟಿಕೆಗಳಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿಶ್ವವಿದ್ಯಾಲಯಗಳಲ್ಲಿ ಕೌಶಲ ಆಧರಿತ ಶಿಕ್ಷಣಕ್ಕೆ ಒತ್ತು ಸಿಗಬೇಕು. ಇಂದಿನ ಉದ್ಯೋಗಿಗಳ ಪೈಕಿ ಶೇ. 92ರಷ್ಟು ಮಂದಿಯ ಓದಿಗೂ-ಕೆಲಸಕ್ಕೂ ಸಂಬಂಧವೇ ಇಲ್ಲ ಎಂದು ಸದ್ಗುರುಗಳು ವಿವರಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಬೇಗ ಅರ್ಥವಾಗುತ್ತದೆ. ಅವರ ವರ್ತನೆಯು ನಿರಂತರ ಮಾನವ ವಿಕಸನದ ಒಂದು ಭಾಗ. ಅವರ ವರ್ತನೆ ಸಹಜವಾಗಿದೆ. ಅವರು ಬದಲಾಗಲು ಸಾಧ್ಯವಿಲ್ಲ. ಶಿಕ್ಷಕರು ಮತ್ತು ಪೋಷಕರು ಇದನ್ನು ಅರ್ಥಮಾಡಿಕೊಂಡು ಬದಲಾಗಬೇಕಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ "ದಿವ್ಯ ಸಂಜೆ " ಸಂವಾದ ಕಾರ್ಯಕ್ರಮದಲ್ಲಿ ''''''''ವಿಜಯ ಕರ್ನಾಟಕ'''''''' ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ''''''''ಈ ಮಕ್ಕಳಿಗೆ ಭಯ ಇಲ್ಲ. 15 ನಿಮಿಷಗಳಿಗಿಂತಲೂ ಹೆಚ್ಚಿನ ಏಕಾಗ್ರತೆ ಅವರಲ್ಲಿ ನಿಲ್ಲುವುದು ಕಷ್ಟ. ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಮನಸ್ಸು ಅರ್ಥ ಮಾಡಿಕೊಂಡು ನಾವು ಸಮಾಧಾನದಿಂದ ಉತ್ತರಿಸಿದರೆ ಬದಲಾವಣೆ ಖಂಡಿತ ಸಾಧ್ಯವಿದೆ'''''''' ಎಂದು ಸದ್ಗುರುಗಳು ವಿಶ್ಲೇಷಿಸಿದರು.
''''''''ಮಕ್ಕಳನ್ನು ಬೆಳೆಸಲು ಪೋಷಕರು ಹೆಚ್ಚು ಗಮನಕೊಡುತ್ತಿಲ್ಲ ಎನ್ನುವುದು ವಿಷಾದಕರ ಸತ್ಯ. ಶಿಕ್ಷಕರೂ ಅಷ್ಟೇ, ಕೇವಲ ತರಗತಿಯ ಪಾಠದಿಂದ ಕಲಿಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ನನ್ನ ಪ್ರಕಾರ ಬದಲಾಗಬೇಕಿರುವುದು ಮಕ್ಕಳಲ್ಲ; ಪೋಷಕರು ಮತ್ತು ಶಿಕ್ಷಕರು'''''''' ಎಂದು ಅವರು ಅಭಿಪ್ರಾಯಪಟ್ಟರು.
''''''''ಸಮಾಜದಲ್ಲಿ ಬದಲಾವಣೆ ಬರಲು ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಇದು ಸಾಧ್ಯವಾಗಲು ನೀತಿ ಪಾಠಗಳು ಮತ್ತೆ ಶಿಕ್ಷಣ ವ್ಯವಸ್ಥೆಯ ಭಾಗವಾಗಬೇಕು. ಶಾಲಾ ಚಟುವಟಿಕೆಗಳಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿಶ್ವವಿದ್ಯಾಲಯಗಳಲ್ಲಿ ಕೌಶಲ ಆಧರಿತ ಶಿಕ್ಷಣಕ್ಕೆ ಒತ್ತು ಸಿಗಬೇಕು. ಇಂದಿನ ಉದ್ಯೋಗಿಗಳ ಪೈಕಿ ಶೇ. 92ರಷ್ಟು ಮಂದಿಯ ಓದಿಗೂ-ಕೆಲಸಕ್ಕೂ ಸಂಬಂಧವೇ ಇಲ್ಲ'''''''' ಎಂದು ಸದ್ಗುರುಗಳು ವಿವರಿಸಿದರು.
ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಕಥನ ಹಂಚಿಕೊಂಡ ಶ್ರೀ ಸತ್ಯ ಸಾಯಿ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಯೂ ಆಗಿರುವ ಅರಸೀಕೆರೆ ತಾಲ್ಲೂಕಿನ ಮೋಹನ್‌ಕುಮಾರ್ ಕೆ.ಎಂ., ಅತ್ಯಂತ ಬಡಕುಟುಂಬದಿಂದ ಬಂದವನು ನಾನು. ಉನ್ನತ ಶಿಕ್ಷಣವು ನನ್ನ ಪಾಲಿಗೆ ಕನಸಷ್ಟೇ ಅಗಿತ್ತು. ಆದರೆ ಇಂದು ಸಂಸ್ಥೆಯು ನನಗೆ ಸರ್ವವನ್ನೂ ಕೊಟ್ಟಿದೆ. ನಿಸ್ವಾರ್ಥ ಸೇವೆ, ದೇಶಭಕ್ತಿ ಮತ್ತು ಸಮಾಜಸೇವೆಯ ಮನೋಭಾವ ರೂಪಿಸಿದೆ. ಅದಕ್ಕೂ ಮಿಗಿಲಾಗಿ ಒಬ್ಬ ನಾಯಕನನ್ನಾಗಿ ಬೆಳೆಸುತ್ತಿದೆ ಎಂದು ವಿವರಿಸಿದರು. ಪ್ರಸ್ತುತ ಅವರು ಸಂಸ್ಥೆಯ ಕಲಬುರ್ಗಿ ಕ್ಯಾಂಪಸ್‌ನಲ್ಲಿ ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಬೇಲೂರು ಶಾಸಕ ಎಚ್.ಕೆ.ಸುರೇಶ್, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಆಲೂರು, ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತಾರಾನಾಥ್, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ ಉಪಸ್ಥಿತರಿದ್ದರು. ಟಿ.ಸಿ.ಪ್ರವೀಣ್ ಕುಮಾರ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.