ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರ ಜವಾಬ್ದಾರಿ: ಬಿಇಒ

KannadaprabhaNewsNetwork |  
Published : Nov 14, 2026, 02:30 AM IST
ಪೊಟೋ-ಪಟ್ಟಣದ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಬಿಇಓ ಶಿವರಾಜ ಶಿಮಿಕೇರಿ ಮಾತನಾಡಿದರು.  | Kannada Prabha

ಸಾರಾಂಶ

ಪ್ರತಿಭೆಯನ್ನು ಸೃಷ್ಟಿಸುವುದಕ್ಕಿಂತ ಅದನ್ನು ಗುರುತಿಸಿ, ಬೆಳೆಸುವುದು ಶಿಕ್ಷಕರ ದೊಡ್ಡ ಜವಾಬ್ದಾರಿ.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪ್ರತಿಭೆಯನ್ನು ಸೃಷ್ಟಿಸುವುದಕ್ಕಿಂತ ಅದನ್ನು ಗುರುತಿಸಿ, ಬೆಳೆಸುವುದು ಶಿಕ್ಷಕರ ದೊಡ್ಡ ಜವಾಬ್ದಾರಿ ಎಂದು ಬಿಇಒ ಶಿವರಾಜ ಸಿಮೀಕೇರಿ ಹೇಳಿದರು.

ಗುರುವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ.4ರಲ್ಲಿ ನಡೆದ ಉತ್ತರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ ಗೆಲುವು ಸಾಧಿಸುವುದು ಮುಖ್ಯವಲ್ಲ, ಭಾಗವಹಿಸುವ ಧೈರ್ಯ ಬೆಳೆಸಿಕೊಳ್ಳುವುದು ಮುಖ್ಯ. ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಸಾಧನೆ ಎಂಬುದು ಸಾಧಕನ ಸ್ವತ್ತು. ಪ್ರತಿಯೊಬ್ಬರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಈ ವೇಳೆ ಶಿಕ್ಷಣ ಸಮನ್ವಯಾಧಿಕಾರಿ ಎಸ್.ಕೆ. ಹವಾಲ್ದಾರ ಹಾಗೂ ಪುರಸಭೆ ಮಾಜಿ ಸದಸ್ಯ ಪ್ರವೀಣ ಬಾಳಿಕಾಯಿ ಮಾತನಾಡಿ, ಪ್ರತಿಭೆಗೆ ಬಡವ-ಶ್ರೀಮಂತ ಎಂಬ ಭೇದವಿಲ್ಲ, ಅವಕಾಶ ಸಿಕ್ಕಾಗ ಪ್ರತಿಭೆ ತನ್ನ ಸಾಮರ್ಥ್ಯವನ್ನು ತಾನೇ ಸಾಬೀತುಪಡಿಸುತ್ತದೆ ಎಂದರು.

ಈ ವೇಳೆ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎನ್. ಭರಮಗೌಡ್ರು. ಶಿಕ್ಷಣ ಸಂಯೋಜಕ ಆರ್‌.ಬಿ. ಜೋಶಿ, ಪರಮೇಶ ಕಾಳಶೆಟ್ಟಿ, ಬಿ.ಎಂ. ಯರಗುಪ್ಪಿ, ವಾಸು ದೀಪಾಲಿ, ಎಚ್.ಬಿ. ಪಟ್ಟಣದ, ಮುತ್ತಣ್ಣ ಹುಬ್ಬಳ್ಳಿ, ಗೀತಾ ಹಲ್ಯಾಳ, ಪ್ರಧಾನ ಶಿಕ್ಷಕ ಬಿ.ಎಂ. ಕುಂಬಾರ, ಡಿ.ಎನ್. ದೊಡ್ಡಮನಿ, ಸಿ.ಆರ್.ಪಿ ಶ್ರೀನಿವಾಸ ಮತ್ತೂರ, ಎನ್.ಎ. ಮುಲ್ಲಾ, ಗಿರೀಶ್ ನೇಕಾರ, ಶಿವಾನಂದ ಅಸುಂಡಿ, ಲೋಕೇಶ ಮಠದ, ಎಸ್ ಡಿ ಎಮ್ ಸಿ ಸದಸ್ಯ ಸೋಮು ಉಮಚಗಿ, ನಾಗರಾಜ ಅಗಡಿ, ರವಿ ಸುತಾರ, ಪ್ರದೀಪ ಭೋವಿ , ರೇಣುಕಾ ಗುಡಗೇರಿ, ಶಮಶಾದ್ ನದಾಫ್, ತೇಜಸ್ವಿನಿ ಬೆಳವಗಿ, ಲಕ್ಷ್ಮವ್ವ ಸಂಶಿ ಇದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಚಕ್ರಸಾಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಶಿಕ್ಷಕ ಎಚ್.ಬಿ. ಸಣ್ಣಮನಿ ಸ್ವಾಗತಿಸಿದರು, ಸಿಆರ್ ಪಿ ಉಮೇಶ ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಜೆ.ಡಿ. ಹರಿಕೇರಿ ವಂದಿಸಿದರು, ಬೀಬಿ ಫಾತಿಮಾ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು.

ಈ ವೇಳೆ ವಿ.ವಿ. ಹುಲ್ಯಾಳಕರ, ಕೆ.ಬಿ. ಗೊಜನೂರ, ಪಿ.ಎಸ್. ನರಗುಂದ, ಎಸ್.ಎಲ್. ಪಾಟೀಲ, ಎಸ್.ಬಿ. ಕುರಿಯವರ, ಎಸ್.ಎ. ಮಡ್ಲೂರ, ಮಂಜುನಾಥ ಚಾಕಲಬ್ಬಿ, ರೇಣುಕಾ ಕಪ್ಪತ್ತನವರ, ಎ.ಎನ್. ಮಂಟಗಣಿ, ಗೋಪಾಲ ರಾಜೋಳಿ, ಎನ್.ಎನ್. ಶಿಗ್ಲಿ, ಎಚ್.ಡಿ. ನಿಂಗರೆಡ್ಡಿ ಹಾಗೂ ಶಾಲಾ ಸಿಬ್ಬಂದಿ ವರ್ಗ ವಿವಿಧ ಶಾಲೆಯಿಂದ ಆಗಮಿಸಿದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ