ಪ್ರತಿಭೆ ಗುರುತಿಸುವುದು ಶಿಕ್ಷಕರ ಕರ್ತವ್ಯ

KannadaprabhaNewsNetwork | Published : Aug 7, 2024 1:09 AM

ಸಾರಾಂಶ

ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪಠ್ಯೇತರ ಚಟುವಟಿಕೆ ಅವಶ್ಯಕ. ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಗುರುತಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಶ್ರೀವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ನಿರ್ದೇಶಕ ಜೆ.ಎಸ್. ಮಮದಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪಠ್ಯೇತರ ಚಟುವಟಿಕೆ ಅವಶ್ಯಕ. ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಗುರುತಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಶ್ರೀವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ನಿರ್ದೇಶಕ ಜೆ.ಎಸ್. ಮಮದಾಪೂರ ಹೇಳಿದರು.

ಅವರು ಇಲ್ಲಿನ ಬಸವ ಮಂಟಪದಲ್ಲಿ ಜರುಗಿದ ಎಸ್.ಬಿ.ಚನ್ನಪ್ಪಗೌಡರ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆತ್ಮವಿಶ್ವಾಸ ದೃಢ ಸಂಕಲ್ಪವನ್ನು ಹೊಂದಿದ್ದರೆ ಮಾತ್ರ ಅವರ ಬದುಕು ಸುಂದರವಾಗಬಲ್ಲದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೊಸೂರ ನೂತನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಜಯಶ್ರೀ ಗಣಾಚಾರಿ ಮಾತನಾಡಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ವ ಪಾತ್ರ ವಹಿಸುತ್ತದೆ ಎಂದರು.

ವೀ.ಪು.ವಿ.ವ.ಸಂಸ್ಥೆಯ ನಿರ್ದೇಶಕ ಪಂಪಣ್ಣಾ ಕಾಚಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ದಾನಿಗಳು ನೀಡಿದ ಠೇವಣಿ ಲಾಭಾಂಶದಿಂದ ಬಂದ ನಗದು ಹಣವನ್ನು ನಿರ್ದೇಶಕ ಆರ್.ಎಸ್. ಬ್ಯಾಳಿ ವಿತರಿಸಿದರು.

ತಾ.ಪಂ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮದ ವ್ಯವಸ್ಥಾಪಕ ಮುತ್ತು ಓಲೇಕಾರ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಮ್.ಎಸ್.ಹಿರೇಹಾಳ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಜಯಶ್ರೀ ಗಣಾಚಾರಿ ಇವರು ತಮ್ಮ ಅಜ್ಜನವರಾದ ನೀಲಕಂಠಗಣಾಚಾರಿ ಸ್ವಾತಂತ್ರ್ಯ ಹೋರಾಟಗಾರರು ಇವರ ಸ್ಮರಣಾರ್ಥ ₹10,000 ಠೇವಣಿ ಮೇಲಿನ ಬಡ್ಡಿ ಹಣವನ್ನು ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯ ಹಿಂದಿ ವಿಷಯದಲ್ಲಿ ಪ್ರಥಮ ಬಂದವರಿಗೆ ನಗದು ಬಹುಮಾನ ನೀಡುವುದಾಗಿ ವಾಗ್ದಾನ ಮಾಡಿದರು.

ಮುಖ್ಯಾಧ್ಯಾಪಕ ಪಿ.ಎ. ಹಿರೇಮಠ ಸ್ವಾಗತಿಸಿದರು. ಎಸ್.ಬಿ. ಶಿವಶಿಂಪಿ ಪರಿಚಯಿಸಿದರು. ಎನ್.ಬಿ.ಶೀಲವಂತ ನಿರೂಪಿಸಿದರು. ಎಸ್.ಬಿ. ಬಡಿಗೇರ ಬಹುಮಾನ ವಿತರಣೆ ನೆಡೆಸಿಕೊಟ್ಟರು. ಜೆ.ಎಮ್. ಮಿಟ್ಟಲಕೋಡ ವಂದಿಸಿದರು .ಸಮಾರಂಭದಲ್ಲಿ ಶಾ.ಸು.ಸಮಿತಿ ಸದಸ್ಯೆ ಅನಸೂಯಾ ಹೊಸಮನಿ, ನಿರ್ಮಲಾ ಮಟ್ಟಿ, ಎಸ್.ಜಿ. ಮೇಟಿ ಉಪಸ್ಥಿತರಿದ್ದರು.

Share this article