ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಹಿಂದವಾಡಿಯಲ್ಲಿ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬೆಳಗಾವಿ ಗ್ರಾಮೀಣ, ದಕ್ಷಿಣ, ಉತ್ತರ ಮತಕ್ಷೇತ್ರದಿಂದ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಕಾರ್ಯಕರ್ತರಿಗೆ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಲ್ಮೆಟ್ ಏಕೆ ಕೊಡುತ್ತಿದ್ದಾರೆ ಗೊತ್ತಾ?. ಯುದ್ಧ ಸಮೀಪ ಬಂದಿದೆ ಅದಕ್ಕೆ ಕೊಡುತ್ತಿದ್ದಾರೆ. ನಮ್ಮನ್ನು ಕೆಡುವಲು ಯಾರು ಬರಲ್ಲ, ನಮಗ ನಾವೇ ಕೆಡವಿಕೊಳ್ಳುತ್ತಿದ್ದೇವೆ. ಎಲ್ಲಾ ಗೌಡ್ರ ವೇದಿಕೆ ಮೇಲೆ ಬಂದಾರ ಅಂದ ಮೇಲೆ ಈ ಬಾರಿ ಪಕ್ಕಾ ಕಾಂಗ್ರೆಸ್‌ನವರನ್ನು ಕಾರ್ಯಕರ್ತರೇ ಕೆಡವುತ್ತಾರೆ ಎಂದು ತಿಳಿಸಿದರು.
ರಾಮಮಂದಿರ ಆಗುತ್ತಿರುವುದು ಖುಷಿ ಪಡೋದು ಒಂದು ಭಾಗ. ಆದರೆ, ಯಾರ ಸೀಮ್ ಕಾರ್ಡ್‌ಗೆ ವೈರಸ್ ಹತ್ತಿದೆ ಅವರ ವಿರೋಧ ಮಾಡಾತ್ತಾರೆ ಎಂದು ನಾ ಹೋಗೋದಿಲ್ಲ, ನಾ ಹೋಗೋದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಟಾಂಗ್ ಕೊಟ್ಟರು.1990 ರಿಂದ 2000 ತನಕ ಎಲ್ಲ ಬಿಜೆಪಿ ನಾಯಕರು, ವೆಂಕಯ್ಯ ನಾಯ್ಡು ಗೋಮಟೇಶನಲ್ಲಿ ನಡೆದ ಬಿಜೆಪಿ ಸಭೆಗೆ ಬಂದಿದ್ದರು. ಸಂಜಯ ಪಾಟೀಲ ಹೆಲ್ಮೆಟ್ ಕೊಡುತ್ತಿದ್ದಾರೆ. ಅದನ್ನು ತಲೆಗೆ ಹಾಕಿಕೊಂಡು ಓಡಾಡಿ, ಪೊಲೀಸರು ಹಿಡದರೇ ನಿಮ್ಮನ್ನು ಬಿಟ್ಟು ಕಳುಹಿಸುತ್ತಾರೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.
ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ ಮಾತನಾಡಿ, ಬಿಜೆಪಿ ಮತ್ತು ಗೊಮಟೇಶ್ ಶಾಲೆಗೆ ಅವಿನಾಭಾವ ಸಂಭಂದ ಇದೆ. ನರೇಂದ್ರ ಮೋದಿ ಯುಗದ ಕಾಲದಲ್ಲಿ ನಾವು ಬದುಕೋದು ನಮಗೆ ಸಂತೋಷ ಅನಿಸುತ್ತಿದೆ. ನಮ್ಮ ದೇಶದ ನೆಲದಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ಸುದ್ದಿ. ರಾಮಮಂದಿರ ನಿರ್ಮಾಣ ಮಾಡುವುದು ಗಾಂಧೀಜಿ ಅವರ ಕನಸಾಗಿತ್ತು. ಮಹಾತ್ಮ ಗಾಂಧೀಜಿ ಕನಸು ನುಚ್ಚು ನೂರು ಮಾಡಿದವರು ಕಾಂಗ್ರೆಸ್‌ನವರು ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಸಂಸದೆ ಮಂಗಳಾ ಅಂಗಡಿ, ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.ಟಿಪ್ಪು ಜಯಂತಿ ಮಾಡುವವರು ಕಾಂಗ್ರೆಸ್‌ನಲ್ಲಿ ಇದ್ದಾರೆ. ಇದರಿಂದಾಗಿ ರಾಮಮಂದಿರ ಕಟ್ಟಲು 500 ವರ್ಷ ಕಾಯಬೇಕಾಯಿತು. ಅದು ನಮ್ಮ ನರೇಂದ್ರ ಮೋದಿ ಬಂದ ಮೇಲೆ ಇಂತಹ ಕೆಲಸ ಆಗಿದೆ. ನಮ್ಮವರು ನಮ್ಮನ್ನು ಸೋಲಿಸುತ್ತಾರೆ. ಅವರು ಒಬ್ಬ ತಂದೆ-ತಾಯಿಗೆ ಹುಟ್ಟಿರುವುದಿಲ್ಲ. ಸೋಲಿಸುವ ಕೆಲಸ ಮಾಡುವುದು ಬೇಡ. ನಾವೆಲ್ಲರೂ ಕೂಡಿ ಒಟ್ಟಾಗಿ ಕೆಲಸ ಮಾಡೋಣ.