ಕನ್ನಡಪ್ರಭ ವಾರ್ತೆ ದೇವದುರ್ಗ
ಅರಕೇರಾ ಸಮೀಪದ ಆಲ್ಕೋಡ್ ಮೊರಾರ್ಜಿ ವಸತಿ ಶಾಲೆಯಲ್ಲಿ ಗಬ್ಬೂರಿನ ಸಮತಾ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ’ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ವಿದ್ಯಾರ್ಥಿಗಳಿಗೆ ದೇಶ ಕಟ್ಟುವ ಶಕ್ತಿ ಇದೆ. ಭವಿಷ್ಯದ ಪ್ರಜೆಗಳಾಗುವ ನೀವು ವಿದ್ಯಾರ್ಥಿ ಹಂತದಲ್ಲಿಯೇ ಸಂವಿಧಾನದ ಮಹತ್ವ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಜೀವನ ಚರಿತ್ರೆ ಅಧ್ಯಯನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇವದುರ್ಗ ಗ್ರಂಥಾಲಯದ ಗ್ರಂಥಪಾಲಕ ಹನುಮಂತ ಅಂಚೆಸೂಗೂರ ಉಪನ್ಯಾಸ ನೀಡಿದರು. ಸಂಸ್ಥೆ ಕಾಯದರ್ಶಿ ಬಸವರಾಜ ಬ್ಯಾಗವಾಟ, ಸಂಚಾಲಕ ಗುರುನಾಥ ಇಂಗಳದಾಳ ಮಾತನಾಡಿದರು. ಗ್ರಾಪಂ ಸದಸ್ಯ ನಾಗರಾಜ ಭೋವಿ ಸಂವಿಧಾನ ಪೀಠಿಕೆ ಬೋಧಿಸಿದರು. ವಸತಿ ಶಾಲೆ ಪ್ರಾಚಾರ್ಯ ಭೀಮರಾಯ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಹಾಗೂ ಶಾಲಾ ಗ್ರಂಥಾಲಯಕ್ಕೆ ಸಂವಿಧಾನದ ಕುರಿತಾದ ಪ್ರಕಟಗೊಂಡ ಪುಸ್ತಕಗಳನ್ನು ವಿತರಿಸಲಾಯಿತು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಶರಣಬಸವನಾಯಕ, ಮುಖಂಡ ಎಂ.ಕುಪ್ಪಯ್ಯ ಭೋವಿ, ಶಿಕ್ಷಕರಾದ ರುದ್ರಗೌಡ, ವೆಂಕಟೇಶ ದೊರೆ, ರಮೇಶ, ದೀಪಕ, ಮಲ್ಲೇಶ ಪಿ, ಶಾಹೀನಾ, ಪದ್ಮಾ, ಅಮರೇಶ, ಅನ್ನಪೂರ್ಣ, ವಿದ್ಯಾರ್ಥಿ ಪ್ರತಿನಿದಿ ಕಾವೇರಿ ಉಪಸ್ಥಿತರಿದ್ದರು.