ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿರೇಬಾಗೇವಾಡಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಅಡಿವೇಶ್ ಇಟಗಿ ಅವರ ಹುಟ್ಟುಹಬ್ಬದ ನಿಮಿತ್ತ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಎಲ್ಲ ವರ್ಗದವರನ್ನೂ ವಿಶ್ವಾಸದಿಂದ ಸೇರಿಸಿಕೊಂಡು ಸಮಾನತೆಯೊಂದಿಗೆ ಮುನ್ನಡೆಯುವುದೇ ನನ್ನ ಗುರಿ. ನನ್ನ ಬೆಳಗಾವಿ ಗ್ರಾಮೀಣ ಕ್ಷೇತ್ರವು ರಾಜ್ಯದ ಮುಂಚೂಣಿಯಲ್ಲಿ ಕಂಗೊಳಿಸುವಂತೆ ಮಾಡುವುದೇ ನನ್ನ ಸಂಕಲ್ಪ. ನಾನು ನುಡಿದಂತೆ ನಡೆಯುವ ಬದ್ಧತೆ ಹೊಂದಿದ್ದು, ಮಾಡುವುದನ್ನು ಮಾತ್ರವೇ ಹೇಳುತ್ತೇನೆ ಮತ್ತು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸುತ್ತೇನೆ. ಆದರೆ, ಎಲ್ಲರನ್ನು ಕರೆಸಿ ಸನ್ಮಾನ ಮಾಡಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ನಾಯಕರಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು ತಾವು ಬೆಳೆದರೇ ಸಾಕಾಗುವುದಿಲ್ಲ ಎಂದು ಸಮಾಜದಲ್ಲಿ ಮುಖಂಡರನ್ನು ಗುರುತಿಸಿ ನಾಯಕತ್ವ ಜವಾಬ್ದಾರಿ ಕೊಡುತ್ತಿದ್ದಾರೆ. ಒಬ್ಬ ನಿಜವಾದ ನಾಯಕ ಜಗತ್ತಿಗೆ ತೊರಿಸಬೇಕಾದರೇ ತಮ್ಮ ನಾಯಕತ್ವದ ಅಡಿಯಲ್ಲಿ ಮುಖಂಡರು ಬೆಳೆಸಬೇಕಾಗಿದೆ. ಈ ಕೇಲಸವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಲಕ್ಷ್ಮೀ ಅಕ್ಕಾ ಹೆಬ್ಬಾಳಕರ ಅವರು ಎಲ್ಲಿಯವರೆಗೆ ಶಾಸಕರಾಗಿ ಇರುತ್ತೇನೆ ಎನ್ನುತ್ತಾರೆ ಅಲ್ಲಿಯವರೆಗೆ ಅವರಿಗೆ ಅವಕಾಶ ಕೋಡೋಣ. ಗ್ರಾಮೀಣ ಮತಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದೆ, ಅನುದಾನ ತಂದಿದ್ದಾರೆ, ರಸ್ತೆ ಕೆಲಸ ಮಾಡಬೇಕೆಂದರೇ ಕೆಲಸ ಮಾಡಲಿಕೆ ಸ್ಥಳವೇ ಇಲ್ಲ? ಈಗಾಗಲೇ ಎಲ್ಲ ಗ್ರಾಮದಲ್ಲಿ ಸಿಸಿ ರಸ್ತೆಗಳು ಆಗಿವೆ ಎಂದರು.ರಾಜ್ಯ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಅಡಿವೇಶ ಇಟಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುವಾಗಲೇ ಸ್ಥಾನ-ಮಾನ ನೀಡುವ ಆಶ್ವಾಸೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೀಡಿದ್ದರು. ಈಗ ಅದು ಸಹಕಾರ ಆಗಿದೆ. ನನ್ನ ಹುಟ್ಟು ಹಬ್ಬದ ದಿನ ಅವರಿಗೆ ಗೊತ್ತಿತ್ತೊ ಇಲ್ವೋ ಗೊತ್ತಿಲ್ಲ. ಆದರೆ, ನನಗೆ ಒಂದು ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ. ಹಾಗಾಗಿ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಭರವಸೆ ನೀಡಿದರು.
ಕೋಟ್...
-ಲಕ್ಷ್ಮೀ ಹೆಬ್ಬಾಳಕರ, ಸಚಿವೆ.----------
-ಚನ್ನರಾಜ ಹಟ್ಟಿಹೊಳಿ. ಎಂಎಲ್ಸಿ.
-ಅಡಿವೇಶ ಇಟಗಿ, ರಾಜ್ಯ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷರು.--------