ಗಡಿ ನಾಡಿನ ವಿದ್ಯಾ ಕಾಶಿ ಎಂದೇ ಪ್ರಖ್ಯಾತಿ ಹೊಂದಿದ ಚವಡಿಹಾಳದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಸತತ 3ನೇ ಬಾರಿಯೂ ಹ್ಯಾಟ್ರಿಕ್ ಸಾಧನೆ ಮಾಡಿದೆ. ಶ್ರೀ ಈ ಸಂಸ್ಥೆಯು ಗಡಿನಾಡಿನ ಸುತ್ತಮುತ್ತಲಿರುವ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಸಂಸ್ಕಾರ ಕೊಡುತ್ತಿದೆ. ಅಲ್ಲದೆ, ಆ ವಿದ್ಯಾರ್ಥಿಗಳಿಗೆ ಬದುಕನ್ನು ರೂಪಿಸುತ್ತಿದೆ.
ಕನ್ನಡಪ್ರಭ ವಾರ್ತೆ ಇಂಡಿ
ಗಡಿ ನಾಡಿನ ವಿದ್ಯಾ ಕಾಶಿ ಎಂದೇ ಪ್ರಖ್ಯಾತಿ ಹೊಂದಿದ ಚವಡಿಹಾಳದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಸತತ 3ನೇ ಬಾರಿಯೂ ಹ್ಯಾಟ್ರಿಕ್ ಸಾಧನೆ ಮಾಡಿದೆ. ಶ್ರೀ ಈ ಸಂಸ್ಥೆಯು ಗಡಿನಾಡಿನ ಸುತ್ತಮುತ್ತಲಿರುವ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಸಂಸ್ಕಾರ ಕೊಡುತ್ತಿದೆ. ಅಲ್ಲದೆ, ಆ ವಿದ್ಯಾರ್ಥಿಗಳಿಗೆ ಬದುಕನ್ನು ರೂಪಿಸುತ್ತಿದೆ.ಚವಡಿಹಾಳ ಶ್ರೀ ಭಾಗ್ಯವಂತಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಪೂ ಕಾಲೇಜು ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಸತತವಾಗಿ 3ನೇ ಬಾರಿಗೆ ಶೇ.100ಕ್ಕೆ ನೂರರಷ್ಟು ಸಾಧನೆ ಮಾಡಿದೆ. 3 ವರ್ಷ ಸತತವಾಗಿ ಕಲಾ, ವಾಣಿಜ್ಯ, ವಿಜ್ಞಾನ 3 ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಈ ಸಂಸ್ಥೆಗೆ ಸೇರಿದೆ.ಕಲಾ ವಿಭಾಗದಲ್ಲಿ ಸರಸ್ವತಿ ನಿಡೋಣಿ ಶೇ.98 ರಷ್ಟು ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ರಂಜಿತಾ ಬಿದರಿ ಶೇ.೯೫.೩೩ ದ್ವಿತೀಯ ಹಾಗೂ ಕಾವೇರಿ ಕೊಡಹೊನ್ನ ಶೇ.೯೫.೧೬ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಲಕ್ಷ್ಮೀ ಚೋರಗಿಮಠ ಶೇ.೯೬.೮೩ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ನಾಗವೇಣಿ ಕೋರೆ ಶೇ.೯೬.೧೬ ದ್ವಿತೀಯ ಸ್ಥಾನ ಹಾಗೂ ಪ್ರಜ್ವಲ ಮಠಪತಿ ಶೇ.೯೩.೧೬ ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ವಿಜ್ಞಾನ ವಿಭಾಗದಲ್ಲಿ ಲಕ್ಷ್ಮೀ ಗೋಡೆನವರ ಶೇ.೯೬.೮೩ ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ, ಪ್ರಿಯಾ ಬಿರಾದಾರ ಶೇ.೯೬.೧೬ ಹಾಗೂ ವಿಜಯ ತೆಗ್ಗಿಹಳ್ಳಿ ಶೇ.೯೬.೧೬ ದ್ವಿತೀಯ ಸ್ಥಾನ, ಪ್ರಜ್ವಲ ಮಾದರ ಶೇ.೯೪.೧೭ ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಸರಸ್ವತಿ ನಿಡೋಣಿ ತಾಲೂಕಿಗೆ ಪ್ರಥಮ, ಜಿಲ್ಲೆಗೆ 7ನೇ ರ್‍ಯಾಂಕ್
ಸಾಧನೆಗೆ ಬಡತನ ಅಡ್ಡಿ ಬಾರದು ಎಂಬುವುದಕ್ಕೆ ಶ್ರೀ ಭಾಗ್ಯವಂತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸರಸ್ವತಿ ನಿಡೋಣಿ ಸಾಕ್ಷಿ. ತಂದೆ-ತಾಯಿ ಕೂಲಿ ಕೆಲಸ ಮಾಡುವ ಬಡ ಕಾರ್ಮಿಕರು. ನಿತ್ಯ 3 ಕಿಮೀ ನಡೆದುಕೊಂಡು ಕಾಲೇಜಿಗೆ ಬಂದು ಪಿಯು ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ, ಜಿಲ್ಲೆಗೆ 7ನೇ ರ್‍ಯಾಂಕ್ ಪಡೆದುಕೊಂಡಿದ್ದಾಳೆ. ಬಡತನದ ಭವಣೆಯಲ್ಲಿದ್ದುಕೊಂಡೇ ತಂದೆ, ತಾಯಿ ಸಹಕಾರದಿಂದ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಯೂ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಛಲ ಬಿಡದೆ ಓದಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ಚವಡಿಹಾಳ ಗ್ರಾಮ ಚಿಕ್ಕ ಗ್ರಾಮವಾದರೂ ಶಿಕ್ಷಣ ನೀಡುವಲ್ಲಿ ಮುಂದೆ ಇದೆ. ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಪ್ರೇರೇಪಿಸುತ್ತಿದೆ. ನಾನು ತಾಲೂಕಿಗೆ ಪ್ರಥಮ ಸ್ಥಾನ ಪಡೆಯಲು ಕಾಲೇಜಿನ ಪರಿಸರ, ಉಪನ್ಯಾಸಕರ ಉತ್ತಮ ಬೋಧನೆ, ತಂದೆ-ತಾಯಿ ಸಹಕಾರ,ಆಡಳಿತ ಮಂಡಳಿ ಸತತ ಪರಿಶ್ರಮವಾಗಿದೆ.-ಸರಸ್ವತಿ ನಿಡೋಣಿ,
ವಿದ್ಯಾರ್ಥಿನಿ, ಕಲಾ ವಿಭಾಗ, ಚವಡಿಗಾಳ.ಗ್ರಾಮೀಣ ಪ್ರದೇಶದಲ್ಲಿ ಕಾಲೇಜು ಇದ್ದರೂ ನಗರ ಪ್ರದೇಶದ ಕಾಲೇಜಿನ ಸೌಲಭ್ಯಗಳು ಇಲ್ಲಿವೆ. ವಿದ್ಯಾರ್ಥಿಗಳಿಗೆ ಸತತವಾಗಿ ಓದುವ ಅಭಿರುಚಿ ಈ ಕಾಲೇಜು ಮೂಡಿಸಿದೆ. ಪಾಠಕ್ಕೆ ತಕ್ಕಂತೆ ಪ್ರಯೋಗಾಲಯ ಇಲ್ಲಿದೆ. ಓದಲು ಯಾವುದೇ ಕೊರತೆ ಇಲ್ಲ. ಶಿಕ್ಷಕರ ಶ್ರಮ ಬಹಳಷ್ಟು ಇದೆ.-ಲಕ್ಷ್ಮೀ ಚೋರಗಿಮಠ,
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ.ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಪಾಠ ಬೋಧನೆಗೆ ಬೇಕಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಉಪನ್ಯಾಸಕರ ಕಠಿಣ ಪರಿಶ್ರಮದಿಂದ ಉಪನ್ಯಾಸಕರ ಮಾರ್ಗದರ್ಶನದಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ.-ಲಕ್ಷ್ಮೀ ಗೋಡೆನವರ,
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ.