ಶಾಸಕರ ಕಚೇರಿಯಲ್ಲಿ ಎಸ್‌ಐಆರ್‌ ಸಹಾಯವಾಣಿ ಕೇಂದ್ರ ಆರಂಭ

KannadaprabhaNewsNetwork |  
Published : Jun 17, 2026, 03:00 AM IST
ಐವನ್‌ ಡಿಸೋಜಾ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಯಿತು | Kannada Prabha

ಸಾರಾಂಶ

ಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಸಹಾಯವಾಣಿ ಕೇಂದ್ರ ಸೋಮವಾರ ಆರಂಭಿಸಲಾಯಿತು.

ಮಂಗಳೂರು: ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಸಹಾಯವಾಣಿ ಕೇಂದ್ರ ಸೋಮವಾರ ಆರಂಭಿಸಲಾಯಿತು.ಮಂಗಳೂರು ದಕ್ಷಿಣ ವಿಧಾನ ಸಭಾ ಕೇತ್ರಕ್ಕೆ ಸಂಬಂಧಿಸಿದ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿತಪ್ಪಿಸಿಕೊಳ್ಳದಂತೆ ಮತ್ತು ಸರಿಯಾದ ದಾಖಲೆಯನ್ನು ಸರಿಯಾದ ಸಮಯದಲ್ಲಿ ನೀಡಿ ಖಾತ್ರಿ ಪಡಿಸಿಕೊಳ್ಳಲು ಸಹಾಯವಾಣಿ ಕೇಂದ್ರ ಪ್ರಾರಂಭವಾಗಿದೆ.

ಸಹಾಯವಾಣಿ ಕೇಂದ್ರದ ಮೊಬೈಲ್‌ ಸಂಖ್ಯೆ: 8217865120 ಆಗಿರುತ್ತದೆ. ಈ ನಂಬರ್‌ಗೆ ಸಂಪರ್ಕಿಸಿದಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಲು ಸಹಾಯ ಮಾಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ತಿಳಿಸಿದ್ದಾರೆ.ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ ಮಾತನಾಡಿ, ಅನೇಕ ಕಡೆಗಳಲ್ಲಿ ಎಸ್‌ಐಆರ್‌ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದ್ದು, ಈ ರೀತಿ ಮಾಹಿತಿಯನ್ನು ನೀಡಿದಲ್ಲಿ ಸಾರ್ವಜನಿಕರ ಗೊಂದಲಗಳು ದೂರವಾಗಲಿದೆ. ಈ ಸಹಾಯಕೇಂದ್ರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಪ್ರಮುಖರಾದ ಭಾಸ್ಕರ್‌ ಮೊಯಿಲಿ, ನವೀನ್‌ ಡಿಸೋಜಾ, ಪದ್ಮನಾಭ ಪಣಿಕ್ಕರ್‌, ಪ್ರಕಾಶ್‌ ಬಿ ಸಾಲ್ಯಾನ್‌, ಸತೀಶ್‌ ಪೆಂಗಲ್‌, ಅಬ್ದುಲ್‌ ಸಲೀಂ, ಚೇತನ್‌ ಕುಮಾರ್‌, ಮನಿಷ್‌ ಬೋಳಾರ್‌, ಬಶೀರ್‌ ಅಹಮಮದ್‌ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಬ್ಯಾಕಸ್ ಶಿಕ್ಷಣದಿಂದ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚಳ: ಸ್ನೇಹಾ ಬಿಲವಡಿ
ವಿಕಸಿತ ಭಾರತದ ಸಂಕಲ್ಪ ಸಾಕಾರಕ್ಕೆ ಎಲ್ಲರ ಸಹಕಾರ ಅಗತ್ಯ