ಎಂಸಿಎಫ್‌ ಹೆಸರು ಮರುಸ್ಥಾಪನೆ: ಐವನ್‌ ಡಿಸೋಜ

KannadaprabhaNewsNetwork |  
Published : Feb 09, 2026, 03:15 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಐವನ್‌ ಡಿಸೋಜ | Kannada Prabha

ಸಾರಾಂಶ

ಮಂಗಳೂರಿನ ಎಂಸಿಎಫ್‌ (ಮಂಗಳೂರು ಕೆಮಿಕಲ್ಸ್ ಆ್ಯಂಡ್‌ ಫರ್ಟಿಲೈಸರ್ಸ್ ಲಿಮಿಟೆಡ್) ಕಾರ್ಖಾನೆಯ ನಾಮಫಲಕದಲ್ಲಿ ಅಳಿಸಿಹಾಕಲಾಗಿದ್ದ ಎಂಸಿಎಫ್‌ ಹೆಸರನ್ನು ಮರು ಸ್ಥಾಪಿಸಲಾಗಿದೆ. ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ

ಮಂಗಳೂರು: ಮಂಗಳೂರಿನ ಎಂಸಿಎಫ್‌ (ಮಂಗಳೂರು ಕೆಮಿಕಲ್ಸ್ ಆ್ಯಂಡ್‌ ಫರ್ಟಿಲೈಸರ್ಸ್ ಲಿಮಿಟೆಡ್) ಕಾರ್ಖಾನೆಯ ನಾಮಫಲಕದಲ್ಲಿ ಅಳಿಸಿಹಾಕಲಾಗಿದ್ದ ಎಂಸಿಎಫ್‌ ಹೆಸರನ್ನು ಮರು ಸ್ಥಾಪಿಸಲಾಗಿದೆ. ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಪಾರಾದೀಪ್ ಫಾಸ್ಫೇಟ್ಸ್‌ ಸಂಸ್ಥೆಯು ಎಂಸಿಎಫ್‌ನ್ನು ವಹಿಸಿಕೊಂಡ ಬಳಿಕ ನಾಮಫಲಕದಲ್ಲಿ ಎಂಸಿಎಫ್‌ ಹೆಸರು ಅಳಿಸಿಹಾಕಿ ಪಾರಾದೀಪ್ ಫಾಸ್ಫೇಟ್ಸ್‌ ಎಂದು ಬರೆಯಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ವಿಷಯ ತಿಳಿಸಿದ ಬಳಿಕ ಇದೀಗ ನಾಮಫಲಕದಲ್ಲಿ ಎಂಸಿಎಫ್‌ ಹೆಸರು ಮರುಸ್ಥಾಪಿಸಲಾಗಿದೆ ಎಂದು ಹೇಳಿದರು.ಹಿಂದೆ ಈ ಕಾರ್ಖಾನೆಯ ಒಡೆತನ ನೋಡಿಕೊಂಡಿದ್ದ ಯಾವ ಕಂಪೆನಿಗಳೂ ಎಂಸಿಎಫ್‌ನ ಹೆಸರು ಬದಲಿಸಿರಲಿಲ್ಲ. ಇನ್ನು ಮುಂದೆಯೂ ಹೆಸರು ಬದಲಾವಣೆ ಆಗಬಾರದು ಎಂದು ಐವನ್‌ ಡಿಸೋಜ ಎಚ್ಚರಿಸಿದರು.ಸಂಸತ್ತಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಸಂಸತ್‌ನಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಮಂತ್ರಿ ಉತ್ತರ ನೀಡುವುದು ಸಂಪ್ರದಾಯ. ಆದರೆ, ಭದ್ರತೆಯ ನೆಪ ಹೇಳಿ ಪ್ರಧಾನಿ ಅವರನ್ನು ಸಂಸತ್‌ಗೆ ಬರಬೇಡಿ ಅಂತ ಸ್ಪೀಕರ್‌ ಹೇಳಿರುವುದು ನಾಚಿಕೆಗೇಡಿನ ಸಂಗತಿ. ಪ್ರಧಾನಿಗೆ ರಕ್ಷಣೆ ಇಲ್ಲ ಅಂತ ಹೇಳುವುದಾದರೆ ಜನಸಾಮಾನ್ಯರಿಗೆ ಎಲ್ಲಿದೆ ರಕ್ಷಣೆ? ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವವರು ಈ ರೀತಿ ವರ್ತಿಸಲಾರರು. ರಾಜ್ಯದಲ್ಲಿ ರಾಜ್ಯಪಾಲರೂ ಜಂಟಿ ಅಧಿವೇಶನದಲ್ಲಿ ಭಾಷಣವನ್ನು ಪೂರ್ತಿಯಾಗಿ ಓದದೆ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿದ್ದಾರೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಐವನ್‌ ಡಿಸೋಜ ಆರೋಪಿಸಿದರು.ರಾಜ್ಯ ವಿಧಾನಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಬಳಸಿದ ಪದಗಳ ಬಗ್ಗೆ ಸ್ಪೀಕರ್ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.ಡಿಕೆಶಿ ಮುಂದಿನ ಮುಖ್ಯಮಂತ್ರಿ ಎಂದು ಕೆಲವು ಶಾಸಕರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದರು. ಈ ವೇಳೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 9 ಮಂದಿಗೆ 5.10 ಲಕ್ಷ ರು. ಚೆಕ್ ವಿತರಿಸಲಾಯಿತು.

ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರೈ ಘಟಕಕ್ಕಾಗಿ ಮಂಡ್ಯದಲ್ಲೇ 100 ಎಕ್ರೆ ಕೊಡಿ: ಎಚ್‌ಡಿಕೆ ಪತ್ರ
ಭರ್ಜರಿ ಯಶಸ್ಸು ಕಂಡ ಕೆಪೆಕ್‌ ವಾಣಿಜ್ಯ ಮೇಳ