ಬಸವಕಲ್ಯಾಣದಲ್ಲಿ ಜ. 7ರಂದು ಸಮಾನತಾ ಸಮಾವೇಶ

KannadaprabhaNewsNetwork |  
Published : Jan 01, 2024, 01:15 AM IST
ಚಿತ್ರ 31ಬಿಡಿಆರ್‌20ಡಾ. ಬೆಲ್ದಾರ್‌ ಶರಣರು | Kannada Prabha

ಸಾರಾಂಶ

ಬಸವಕಲ್ಯಾಣದ ಬಸವ ಮಹಾಮನೆ ಟ್ರಸ್ಟ ವತಿಯಿಂದ ಇದೇ ಜ. 7ರಂದು ಸಮಾನತೆ ಸಮಾವೇಶ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಬಸವಶ್ರೀ ಡಾ. ಬೆಲ್ದಾರ್‌ ಶರಣರು ತಿಳಿಸಿದರು.

ಬೆಲ್ದಾರ್‌ ಶರಣರ ಸಾನ್ನಿಧ್ಯದಲ್ಲಿ ಆಯೋಜನೆಕನ್ನಡಪ್ರಭ ವಾರ್ತೆ, ಬೀದರ್‌ಬಸವಕಲ್ಯಾಣದ ಬಸವ ಮಹಾಮನೆ ಟ್ರಸ್ಟ ವತಿಯಿಂದ ಇದೇ ಜ. 7ರಂದು ಸಮಾನತೆ ಸಮಾವೇಶ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಬಸವಶ್ರೀ ಡಾ. ಬೆಲ್ದಾರ್‌ ಶರಣರು ತಿಳಿಸಿದರು.ಅವರು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರ ಕಚೇರಿಯಲ್ಲಿ ಸಮಾನತಾ ಸಮಾವೇಶದ ಸಿದ್ದತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಧರ್ಮ, ಜಾತಿ, ವರ್ಗ, ಗೋಡೆಗಳನ್ನು ದಾಟಿ ಸಮಾನತೆ ತತ್ವದಿಂದ ನಡೆದು ಸಾಮರಸ್ಯದಿಂದ ಕೂಡಿ ಇದ್ದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ ಹಾಗೂ ಸಮಾಜದಲ್ಲಿ ಶಾಂತಿಯ ತೋಟ ನೆಲೆಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಅರವಿಂದಕುಮಾರ ಅರಳಿ ಮಾತನಾಡಿ, ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ ಸಮಾನತಾ ಸಮಾವೇಶ ಧರ್ಮಾತೀತ, ಜಾತ್ಯತೀತ, ಪಕ್ಷಾತೀತವಾಗಿ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ನಡೆಯಬೇಕೆಂದು ಸಲಹೆ ನೀಡಿದರು. ಹಿರಿಯ ಮುಖಂಡರಾದ ಶ್ರೀಕಾಂತ ಸ್ವಾಮಿ ಮಾತನಾಡಿ, ಸಮಾನತಾ ಸಮಾವೇಶಕ್ಕೆ ಬೆಲ್ದಾರ್‌ ಶರಣರು ನಿರ್ಧರಿಸಿದಂತೆ ಪೂಜ್ಯರು, ಸಚಿವರು, ಗಣ್ಯರನ್ನು ಆಹ್ವಾನಿಸುವ ಬಗ್ಗೆ ಕಾಲಮಿತಿಯಲ್ಲಿ ನಿರ್ಧರಿಸಲು ಸಲಹೆಯಿತ್ತರು. ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ಬೃಹತ್‌ ಪ್ರಮಾಣದಲ್ಲಿ ಹಮ್ಮಿಕೊಂಡಿರುವ ಸಮಾನತಾ ಸಮಾವೇಶ ಕಾರ್ಯಕ್ರಮದ ಯಶಸ್ವಿಗೆ ಬಸವಕಲ್ಯಾಣ ಸೇರಿದಂತೆ ಬೀದರ್‌, ಕಲಬುರಗಿ ಭಾಗದ ಕ್ರಿಯಾಶೀಲ ನಾಯಕರ ಸಾಮಾಜಿಕ ಕಾರ್ಯಕರ್ತರ ಉಪಸಮಿತಿಗಳನ್ನು ರಚಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಅಬ್ದುಲ್‌ ಖದೀರ್‌, ಪ್ರಮುಖರಾದ ವಿನಯ ಮಾಳಗೆ, ಚಂದ್ರಶೇಖರ ಪಾಟೀಲ್‌, ಶಿವಶಂಕರ ಟೋಕರೆ, ಮಹಾಲಿಂಗ, ಕೇದಾರನಾಥ ಪಾಟೀಲ್‌, ರೋಹನ, ಉದಯಕುಮಾರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ