ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ರಾಜ್ಯ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ನೀಡಬೇಕೆಂದು ಕೊಡವ ಜನಾಂಗದ ಪ್ರಮುಖ ಪ್ರಾತಿನಿಧಿಕ ಸಂಸ್ಥೆ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಒತ್ತಾಯಿಸಿದೆ.
ಮಡಿಕೇರಿ : ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ರಾಜ್ಯ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ನೀಡಬೇಕೆಂದು ಕೊಡವ ಜನಾಂಗದ ಪ್ರಮುಖ ಪ್ರಾತಿನಿಧಿಕ ಸಂಸ್ಥೆ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಒತ್ತಾಯಿಸಿದೆ.ಈ ಬಗ್ಗೆ ಜಂಟಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿರುವ ಸಂಘಟನೆಯ ಪ್ರಮುಖರು ಪಕ್ಷಬೇದ ಮರೆತು ಎಲ್ಲಾ ಧರ್ಮ ಜಾತಿ ಜನಾಂಗಕ್ಕೂ ನ್ಯಾಯಯುತವಾಗಿ ಅವರ ಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ಎ. ಎಸ್. ಪೊನ್ನಣ್ಣ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಕ್ಕೂ ಮೊದಲು ಅವರು ಸರ್ಕಾರದ ಹಲವಾರು ಜವಾಬ್ದಾರಿಯನ್ನು ನಿಭಾಯಿಸಿದ್ದು ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿದರೇ ಉತ್ತಮವಾಗಿ ನಿರ್ವಹಿಸುವ ಎಲ್ಲಾ ಅರ್ಹತೆ ಪೊನ್ನಣ್ಣ ಅವರು ಹೊಂದಿದ್ದಾರೆ. ಪೊನ್ನಣ್ಣ ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಅತಿ ಸೂಕ್ಷ್ಮ ಕೊಡವ ಜನಾಂಗಕ್ಕೆ ಈ ಮೂಲಕ ಸಚಿವ ಸ್ಥಾನ ನೀಡಿದಂತೆ ಹಾಗೂ ಪ್ರಾದೇಶಿಕವಾಗಿಯೂ ಜಿಲ್ಲೆಯನ್ನು ಪರಿಗಣಿಸಿದಂತೆ ಆಗುತ್ತದೆ. ಗುಡ್ಡಗಾಡು, ಅತೀ ಹೆಚ್ಚು ಮಳೆ ಬೀಳುವ, ರಾಜ್ಯದ ವಿಭಿನ್ನ ಪ್ರದೇಶವಾಗಿರುವ ಕೊಡಗಿನ ಹಲವಾರು ಸೂಕ್ಷ್ಮ ಸಮಸ್ಯೆಗಳನ್ನು ನಿರ್ವಹಿಸಲು ಕೊಡಗು ಜಿಲ್ಲೆಗೆ ಸಚಿವ ಸ್ಥಾನವನ್ನು ನೀಡಬೇಕಾಗಿದೆ. ಕೊಡವ ಜನಾಂಗದ ಏಕೈಕ ಶಾಸಕರಾಗಿರುವ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕೊಡಗು ಮತ್ತು ಕೊಡವ ಜನಾಂಗಕ್ಕೂ ಪ್ರಾತಿನಿದ್ಯ ನೀಡಬೇಕಾಗಿದೆ. ಹಲವಾರು ಅವಧಿಯಿಂದ ಕೊಡವ ಜನಾಂಗದ ಶಾಸಕರು ಸಚಿವ ಸ್ಥಾನದಿಂದ ವಂಚಿತವಾಗಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ಶಾಸಕ ಪೊನ್ನಣ್ಣ ಅವರಿಗೆ ಸೂಕ್ತ ಸಚಿವ ಸ್ಥಾನವನ್ನು ನೀಡಬೇಕು ಎಂದು ಜಂಟಿ ಹೇಳಿಕೆಯಲ್ಲಿ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಚೊಟ್ಟೆಕ್''''''''ಮಾಡ ರಾಜೀವ್ ಬೋಪಯ್ಯ, ಸಹ ಸಂಚಾಲಕ ಅಚ್ಚಾಂಡಿರ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಹ ಕಾರ್ಯದರ್ಶಿ ಚೋಕಂಡ ಸೂರಜ್, ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ ಅವರು ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.