6, 7 ರಂದು ಉಪ್ಪಿನಂಗಡಿಯಲ್ಲಿ ಹಲಸು ಹಬ್ಬ

KannadaprabhaNewsNetwork | Published : Jul 3, 2024 12:16 AM

ಸಾರಾಂಶ

ಕಾರ್ಯಕ್ರಮದಲ್ಲಿ ಆದರ್ಶ ದಂಪತಿ ಸ್ಪರ್ಧೆ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕೃಷಿ ಮಾಹಿತಿ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು, `ನಮ್ಮ ಆಹಾರ ಬಳಕೆಯಲ್ಲಿ ಸಿರಿ ಧಾನ್ಯದ ಮಹತ್ವ ಮೊದಲಾದ ವಿಚಾರದಲ್ಲಿ ಗೋಷ್ಠಿಗಳು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ ಘಟಕ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಜು. 6 ಮತ್ತು 7ರಂದು ಎರಡು ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 8 ರ ವರೆಗೆ ಹಲಸು ಹಬ್ಬ ನಡೆಯಲಿದೆ ಎಂದು ಜೇಸಿಐ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಬಿ. ತಿಳಿಸಿದರು.ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 6 ರಂದು ಬೆಳಗ್ಗೆ 8ಕ್ಕೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ ಮಳಿಗೆಗಳಿಗೆ ಚಾಲನೆ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಸಂಸದರು, ಶಾಸಕರು, ಹಾಗೂ ಹಲವಾರು ಗಣ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆದರ್ಶ ದಂಪತಿ ಸ್ಪರ್ಧೆ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕೃಷಿ ಮಾಹಿತಿ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು, `ನಮ್ಮ ಆಹಾರ ಬಳಕೆಯಲ್ಲಿ ಸಿರಿ ಧಾನ್ಯದ ಮಹತ್ವ ಮೊದಲಾದ ವಿಚಾರದಲ್ಲಿ ಗೋಷ್ಠಿಗಳು ನಡೆಯಲಿದೆ. ಉಪ್ಪಿನಂಗಡಿಯಲ್ಲಿ ಎರಡನೇ ಬಾರಿಗೆ ಹಲಸು ಹಬ್ಬ ನಡೆಯುತ್ತಿದ್ದು, ಇದರಲ್ಲಿ ಹಲಸಿನ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ಕೊಡುವ ಮಳಿಗೆಗಳು, ಹಲಸಿನ ಉತ್ಪನ್ನಗಳ ಮಾರಾಟ ಮಳಿಗೆಗಳು, ವಿವಿಧ ತಳಿಯ ಹಲಸು ಸೇರಿದಂತೆ ಇತರ ಹಣ್ಣುಗಳು, ನರ್ಸರಿಗಳ ಮಾರಾಟ ಮಳಿಗೆಗಳು ಭಾಗವಹಿಸಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಯೋಜಕ ಸಂಸ್ಥೆಯಾದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ. ವಿ. ಪ್ರಸಾದ, ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಲವೀನಾ ಪಿಂಟೋ, ಜೇಸಿ ಕೆ.ಪಿ. ಕುಲಾಲ್, ಪ್ರವೀಣ್ ಆಳ್ವ ಉಪಸ್ಥಿತರಿದ್ದರು.

Share this article