ಕನ್ನಡಪ್ರಭ ವಾರ್ತೆ ಜಗಳೂರು
ನೂತನ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಸೇರಿದಂತೆ ಎಲ್ಲ ನಾಯಕರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಪಟ್ಟಣದ ಪ್ರಗತಿಗೆ ಶ್ರಮಿಸುತ್ತೇನೆ. ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ನೂತನ ಅಧ್ಯಕ್ಷ ನವೀನ್ ಆಯ್ಕೆ ಎಲ್ಲರ ಒಮ್ಮತದ ತೀರ್ಮಾನವಾಗಿದೆ. ಪಕ್ಷದಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅವನ್ನೆಲ್ಲಾ ಬದಿಗೊತ್ತಿ ಒಮ್ಮತದಿಂದ ಅವಿರೋಧವಾಗಿ ನವೀನ್ ಅವರನ್ನು ಆಯ್ಕೆ ಮಾಡಿದ್ದೇವೆ. ಎಲ್ಲರ ವಿಶ್ವಾಸ ಗಳಿಸಿ ಜನ ಮೆಚ್ಚುವಂತಹ ಕಾರ್ಯಮಾಡಿ ಎಂದು ಸಲಹೆ ನೀಡಿದರು.ಬಿಜೆಪಿ ಸದಸ್ಯರ ಬಹುಮತ:
ಮಾಜಿ ಶಾಸಕ ಎಚ್.ಪಿ.ರಾಜೇಶ್, ಅವಿರೋಧವಾಗಿ ಆಯ್ಕೆಯಾಗಿರುವ ನವೀನ್, ಲೋಕಮ್ಮ ಅವರಿಗೆ ಅಭಿನಂದನೆ ಸಲ್ಲಿಸಿ, ಎಲ್ಲ 11 ಜನ ಸದಸ್ಯರಿಗೂ ಅಧ್ಯಕ್ಷ, ಉಪಾಧ್ಯಕ್ಷರಾಗುವ ಅರ್ಹತೆಯಿತ್ತು. ವರಿಷ್ಠರ ಸೂಚನೆ ಮೇರೆಗೆ ಒಮ್ಮತದ ತೀರ್ಮಾನದಂತೆ ಆಯ್ಕೆ ಮಾಡಿದ್ದೇವೆ. ಎಲ್ಲರಿಗೂ ಅಧ್ಯಕ್ಷರಾಗುವ ಉತ್ಸಾಹ ಇದ್ದೇ ಇರುತ್ತೆ. ಬಿಜೆಪಿ ಸದಸ್ಯರ ಬಹುಮತವಿದೆ. ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಡೆಂಘೀ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿ. ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಜಶೇಖರ್ ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಡಿ.ವಿ.ನಾಗಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಮಾಜಿ ಪಪಂ ಅಧ್ಯಕ್ಷ ನಾಗರಾಜ್, ಸತೀಶ್ನಾಯ್ಕ್, ಧರ್ಮಾ ನಾಯ್ಕ್, ಲೋಕೇಶ್, ಮಹೇಶ್, ಜೆಡಿಎಸ್ ಮುಖಂಡರಾದ ಮೋಹನ್, ಲುಕ್ಮಾನ್ ಉಲ್ಲಾ ಖಾನ್, ಕೌಸರ್, ಮಂಜಮ್ಮ, ಅಶೋಕ್, ಎ.ಎಂ. ಮರುಳಾರಾಧ್ಯ, ಸುನೀಲ್, ಸದಸ್ಯರಾದ ಎಂಎಲ್ಎ ತಿಪೇಸ್ವಾಮಿ, ದೇವರಾಜ್, ಪಾಪಲಿಂಗಪ್ಪ, ನಿರ್ಮಲಾ ಕುಮಾರಿ, ಸರೋಜಮ್ಮ, ಲೋಕಮ್ಮ, ರೇವಣಸಿದ್ದಪ್ಪ, ಲಲಿತಾ ಶಿವಣ್ಣ ಸೇರಿದಂತೆ ಮತ್ತಿತರರುಇದ್ದರು.