ಕೃಷಿ ಪಂಪ್ ಸೆಟ್‌ಗಳಿಗೆ ರೈತರ ಆಧಾರ್ ಲಿಂಕ್ ಮಾಡಿಸುವುದನ್ನು ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Sep 05, 2024, 12:34 AM IST
12 | Kannada Prabha

ಸಾರಾಂಶ

ರೈತರ ಕೃಷಿ ಪಂಪ್ ಸೆಟ್ ಗಳ ಆರ್.ಆರ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ ಖಾಸಗೀಕರಣ ಮಾಡಿ ಶುಲ್ಕ ವಿಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಹುನ್ನಾರ ನಡೆಸಿವೆ. ಕೃಷಿಗೆ ಮೂಲವಾದ ವಿದ್ಯುತ್ ಹಾಗೂ ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬ ಮತ್ತು ತಂತಿಯನ್ನು ಇಲಾಖೆಯ ವೆಚ್ಚದಿಂದ ನಿರ್ಮಿಸಿ ಇದಕ್ಕೆ ರೈತರ ವಂತಿಕೆಯಾಗಿ 17 ರಿಂದ 23 ಸಾವಿರದವರೆಗೆ ಪಡೆಯಲಾಗುತ್ತಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿ ಪಂಪ್ ಸೆಟ್ ಗಳಿಗೆ ರೈತರ ಆಧಾರ್ ಲಿಂಕ್ ಮಾಡಿಸುವುದನ್ನು ವಿರೋಧಿಸಿ, ಅಕ್ರಮ ಸಕ್ರಮ ಯೋಜನೆ ಮರು ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಮೈಸೂರಿನ ಸೆಸ್ಕ್ ಪ್ರಧಾನ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟಿಸಿದರು.

ರೈತರ ಕೃಷಿ ಪಂಪ್ ಸೆಟ್ ಗಳ ಆರ್.ಆರ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ ಖಾಸಗೀಕರಣ ಮಾಡಿ ಶುಲ್ಕ ವಿಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಹುನ್ನಾರ ನಡೆಸಿವೆ. ಕೃಷಿಗೆ ಮೂಲವಾದ ವಿದ್ಯುತ್ ಹಾಗೂ ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬ ಮತ್ತು ತಂತಿಯನ್ನು ಇಲಾಖೆಯ ವೆಚ್ಚದಿಂದ ನಿರ್ಮಿಸಿ ಇದಕ್ಕೆ ರೈತರ ವಂತಿಕೆಯಾಗಿ 17 ರಿಂದ 23 ಸಾವಿರದವರೆಗೆ ಪಡೆಯಲಾಗುತ್ತಿತ್ತು. ಇದನ್ನು ಕೈ ಬಿಟ್ಟು ರೈತರೇ ನೇರವಾಗಿ ಕೃಷಿ ಪಂಪ್ ಸೆಟ್ ಗಳಿಗೆ ಸಂಪರ್ಕ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡುವ ಪರಿಸ್ಥಿತಿ ತಂದಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಕೃಷಿ ಉತ್ಪನ್ನಗಳಿಗೆ ಕಾನೂನು ಬದ್ಧ ವೈಜ್ಞಾನಿಕ ಬೆಂಬಲ ಬೆಲೆಯನ್ನು ಸರ್ಕಾರಗಳು ನೀಡಿಲ್ಲ. ಹೀಗಾಗಿ ಕೃಷಿಗೆ ನೀಡುವ ವಿದ್ಯುತ್ ಸಂಪರ್ಕವನ್ನು ಈ ರೀತಿ ದುಬಾರಿ ವೆಚ್ಚ ಮಾಡಲು ರೈತರನ್ನು ತಳ್ಳುವುದು ಸರಿಯಲ್ಲ. ರಾಜ್ಯ ಸರ್ಕಾರ ಘೋಷಣೆ ಮಾಡಿರುವಂತೆ ಪ್ರತಿ ಕುಟುಂಬಕ್ಕೆ ಯಾವುದೇ ಷರತ್ತಿಲ್ಲದೆ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ಸೋಲಾರ್ ಪಂಪ್ ಸೆಟ್ ಹಾಕಿಸಿಕೊಂಡಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ನಿಯಮ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ನಗರ ಮತ್ತು ಗ್ರಾಮೀಣ ಎಂಬ ವಿದ್ಯುತ್ ತಾರತಮ್ಯ ನೀತಿ ಕೈ ಬಿಡಬೇಕು. ಕೃಷಿಗೆ ಕೈಗಾರಿಕೆಗಳಿಗೆ ನೀಡುವಂತೆ ಹಗಲು ವೇಳೆ ವಿದ್ಯುತ್ ನೀಡಬೇಕು. ಭೂ ಸುಧಾರಣಾ ಕಾಯ್ದೆಗೆ ತಕ್ಷಣ ತಿದ್ದುಪಡಿ ಮಾಡಬೇಕು. ಜಿಂದಾಲ್ ಕಂಪನಿಗೆ ನೀಡಿರುವ ಸರ್ಕಾರಿ ಭೂಮಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಸೋಲಾರ್ ವಿದ್ಯುತ್ ಅಳವಡಿಕೆಗೂ ಅಕ್ರಮ ಸಕ್ರಮ ಮಾದರಿಯಲ್ಲಿ ಹಣ ಕಟ್ಟಿಸಿಕೊಂಡು ಶೇ.90 ಸಹಾಯಧನ ನೀಡಿ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಟಿಸಿಗಳ ಅಳವಡಿಕೆಗೆ ನಿರ್ಬಂಧ ಹಾಕದೆ ಕೃಷಿಗೆ ಅನುಕೂಲಕವಾಗುವಂತೆ ರೈತರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು. ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ತೋಟದ ಮನೆಗಳಿಗೂ ನಿರಂತರ ಜ್ಯೋತಿ ಯೋಜನೆ ವಿಸ್ತರಸಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪದಾಧಿಕಾರಿಗಳಾದ ಕೆರೆಹುಂಡಿ ರಾಜಣ್ಣ, ಹನುಮಯ್ಯ, ನಾಗರಾಜ್, ಹಾಡ್ಯ ರವಿ, ಮಲಿಯೂರು ಹರ್ಷ, ಮಹೇಂದ್ರ, ಮುದ್ದಳ್ಳಿ ಚಿಕ್ಕಸ್ವಾಮಿ, ಹೊಸಪುರ ಮಾದಪ್ಪ, ಮೂಡ್ನಾಕೂಡು ಸೋಮೇಶ್, ದೇವೇಂದ್ರಕುಮಾರ್, ಶಿವರುದ್ರಪ್ಪ, ಕಸುನಹಳ್ಳಿ ಮಂಜೇಶ್, ಬನ್ನೂರು ಎಂ.ವಿ. ಕೃಷ್ಣಪ್ಪ, ಸುಜ್ಜಲೂರು ಜಯಸ್ವಾಮಿ, ಅರಳಿಕಟ್ಟೆ ಕುಮಾರ್, ಅಂಬಳೆ ಮಹದೇವಸ್ವಾಮಿ, ಊಡಿಗಾಲ ಮಂಜುನಾಥ್, ಕೆರೆಹುಂಡಿ ಶಿವಣ್ಣ, ಮುದ್ದಳ್ಳಿ ಕುಮಾರ್, ರೇವಣ್ಣ, ದೇವಿರಮ್ಮನಳ್ಳಿ ಕುಮಾರ್, ಮಹೇಶ್, ಹಂಡುವಿನಹಳ್ಳಿ ರವಿ, ಬೆಳ್ತೂರು ನಂಜಪ್ಪ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲೀಲಾ ಪಾಟೀಲರಿಗೆ ‘ಸೌಭಾಗ್ಯವತಿ ಸಿಂಧು ಸುಭಾಷ ಮ್ಹಮಾಣೆ ಮಾತೃಶಕ್ತಿ ಪ್ರಶಸ್ತಿ’ ಪ್ರದಾನ
ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ : ಸೂರಜ್‌ ರೇವಣ್ಣಗೆ ಕೋರ್ಟ್‌ ಶಾಕ್‌