ನೆಲಮಂಗಲ: ನಗರದ ಪವಾಡ ಶ್ರೀಬಸವಣ್ಣ ದೇವರಮಠದ ಆವರಣದಲ್ಲಿ ಶ್ರೀ ಜಗನ್ನಾಥಸ್ವಾಮಿಯ ರಥಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಮಧ್ಯಾಹ್ನದ ನಂತರ ಶ್ರೀ ಕ್ಷೇತ್ರಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ಶ್ರೀ ಜಗನ್ನಾಥ ಸ್ವಾಮಿಯ ಮೂರ್ತಿಗಳನ್ನು ವಿವಿಧ ಬಗೆಯ ಹೂ ಮತ್ತು ತಳಿರು ತೋರಣಗಳಿಂದ ಸಿಂಗರಿಸಿದ್ದ ರಥದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿ ಭಕ್ತರ ಜಯಘೋಷ ಮತ್ತು ಭಜನೆಯ ಮೂಲಕ ಆರಂಭಿಸಿದ ರಥಯಾತ್ರೆಯನ್ನು ಯುವಕರು, ಮಹಿಳೆಯರು, ಮಾತೆಯರು ಮತ್ತು ಮಕ್ಕಳು ಶ್ರೀಸ್ವಾಮಿಯ ರಥವನ್ನು ಜಯಘೋಷಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಎಳೆದು ಪುನೀತರಾದರು.ನಗರಸಭೆ ಸದಸ್ಯೆ ಪೂರ್ಣಿಮಾ, ನೆಲಮಂಗಲ ಇಸ್ಕಾನ್ ಮುಖ್ಯಸ್ಥರಾದ ಅರುಣ್ ಕುಮಾರ್, ನಾಗರಾಜ್ ಪ್ರಭು, ಗಂಗರಾಜ್ ಪ್ರಭು, ಅಸೀಮಶ್ಯಾಮ್ ಪ್ರಭು, ಗಂಗಾಜೀವನ್ ಕೃಷ್ಣಪ್ರಭು, ನಾಗೇಂದ್ರನಿತಾಯ್ ಪ್ರಭು, ಪೂಜಾ, ನಳಿನಾ, ಲಕ್ಷ್ಮಮ್ಮ ಮಾತಾಜಿ ಮತ್ತಿತರರಿದ್ದರು.
ಪೊಟೊ-14 ಕೆ ಎನ್ ಎಲ್ ಎಮ್ 1-ನೆಲಮಂಗಲ ಇಸ್ಕಾನ್ ವತಿಯಿಂದ ಪವಾಡ ಶ್ರೀಬಸವಣ್ಣ ದೇವರಮಠದ ಆವರಣದಲ್ಲಿ ಶ್ರೀ ಜಗನ್ನಾಥಸ್ವಾಮಿ ರಥಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.