ನವಲಗುಂದ: ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಡಾ.ಬಾಬು ಜಗಜೀವನರಾಂ ಹೊಂದಿದ್ದರು ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಬಾಬು ಜಗಜೀವನರಾಂ ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಬಾಬು ಜಗಜೀವನರಾಂ ಅವರು ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದವರು ಎಂದು ತಿಳಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಜರುಗಿತು.ಅಣ್ಣಿಗೇರಿ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಹೊಸಮನಿ, ಮುಖ್ಯಾಧಿಕಾರಿ ಎಸ್.ಪಿ. ಪೂಜಾರ, ಸಂಜೀವಕುಮಾರ ಗುಡಿಮನಿ, ಬಿ.ಎಸ್. ಪಾಟೀಲ, ಎಂ.ಜೆ.ಶಿಂದೆ, ಶ್ರೀನಿವಾಸ ಅಮಾತ್ತೆನ್ನವರ, ಸಿದ್ದು ಭೋರಕ್ಕನವರ, ಮುಖಂಡರಾದ ದ್ಯಾಮಣ್ಣ ಹೋನಕುದರಿ, ರಾಜು ದೊಡಮನಿ, ಶಿವು ಪೂಜಾರ, ನಂದಿನಿ ಹಾದಿಮನಿ, ನಿಂಗಪ್ಪ ಕೆಳಗೇರಿ, ದಿಲೀಪ ರತ್ನಾಕರ, ರಾಜು ನಡುವಿನಮನಿ, ಯಕ್ಕೆರಪ್ಪ ನಾಗಣ್ಣವರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.