ಕನ್ನಡ ಪ್ರಭ ವಾರ್ತೆ ಮುಧೋಳ
ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ನಗರದ ಅಂಗಡಿಗಳಿಗೆ ತೆರಳಿ ಸಿಹಿ ಹಂಚಿದರು. ಶ್ರೀರಾಮ ಜೈ ರಾಮ, ಶ್ರೀರಾಮ ಜೈ ರಾಮ ಎಂದು ಘೋಷಣೆ ಕೂಗೂತ್ತಾ ಶ್ರೀರಾಮನನ್ನು ಸ್ಮರಿಸಿದರು. ಸಂದರ್ಭದಲ್ಲಿ ಶ್ರೀರಾಮ ಭಕ್ತರಾದ ಸೋನಾಪ್ಪಿ ಕುಲಕರ್ಣಿ, ರಾಜು ಯಡಹಳ್ಳಿ, ಸಂತೋಷ ಘೋರ್ಪಡೆ ಸೇರಿದಂತೆ ಇತರರು ಇದ್ದರು.
ಮುಧೋಳ ನಗರದಾದ್ಯಂತ ಕೇಸರಿ ವರ್ಣದ ಬ್ಯಾನರ್, ಬಟ್ಟಿಂಗ್ಸ್ ಹಾಕಲಾಗಿತ್ತು. ಶ್ರೀರಾಮನ ಭಾವಚಿತ್ರವನ್ನು ನಗರದ ಸರ್ಕಲ್ ನಲ್ಲಿ ಕೂಡ್ರಿಸಲಾಗಿತ್ತು, ಮಕ್ಕಳಿಗೆ ಶ್ರೀರಾಮನ ಉಡುಗೆ ತೊಡಗಿಸಿ ಭಕ್ತಿ ಪ್ರದರ್ಶಿಸಿದರು. ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ವಿಧಿ-ವಿಧಾನ ಆಚರಣೆಯ ನೇರ ಪ್ರಸಾರವನ್ನು ಮುಧೋಳ ಮಹಾಜನತೆಯು ಟಿ.ವಿ ಮತ್ತು ಮೊಬೈಲ್ ಗಳ ಮೂಲಕ ವೀಕ್ಷಿಸಿ, ಸಂಭ್ರಮಿಸಿದರು.