ಬೆಳಗಾವಿಯಲ್ಲಿ ಜೈನ ಹಾಸ್ಟೆಲ್ ಶೀಘ್ರ ಪ್ರಾರಂಭ

KannadaprabhaNewsNetwork |  
Published : Mar 16, 2025, 01:50 AM IST
ಅಥಣಿ ಶಾಸಕ ಲಕ್ಷ್ಮಣ ಸವದಿಯವರನ್ನು ಕಾಗವಾಡ ಹಾಗೂ ಅಥಣಿ ತಾಲೂಕಿನ ಜೈನ ಸಮಾಜದ ಮುಖಂಡರು ಸನ್ಮಾನಿಸಿದರು. | Kannada Prabha

ಸಾರಾಂಶ

ಬರುವ ಶೈಕ್ಷಣಿಕ ವರ್ಷದಿಂದ ಜೈನ ಧರ್ಮದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಪ್ರತ್ಯೇಕ ಜೈನ್ ಹಾಸ್ಟೆಲ್‌ ಪ್ರಾರಂಭಿಸಲಾಗುವುದು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಬರುವ ಶೈಕ್ಷಣಿಕ ವರ್ಷದಿಂದ ಜೈನ ಧರ್ಮದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಪ್ರತ್ಯೇಕ ಜೈನ್ ಹಾಸ್ಟೆಲ್ ಪ್ರಾರಂಭಿಸಲಾಗುವುದು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.

ಕಾಗವಾಡ ಹಾಗೂ ಅಥಣಿ ತಾಲೂಕಿನ ಜೈನ ಸಮಾಜದ ವತಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಪ್ರತಿನಿಧಿಯಾಗಿ ನಾನು ಅಧಿವೇಶನದಲ್ಲಿ ಜೈನ ಧರ್ಮದವರಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಮತ್ತು ಅವರ ಮಕ್ಕಳು ಸಸ್ಯಾಹಾರಿಗಳಾಗಿದ್ದು, ಅದರಲ್ಲೂ ಸಾತ್ವಿಕ ಆಹಾರ ಸೇವಿಸುತ್ತಿರುವದರಿಂದ ಅವರಿಗೆ ಜಿಲ್ಲಾ ಮಟ್ಟಕ್ಕೊಂದು ಪ್ರತ್ಯೇಕ ಹಾಸ್ಟೇಲ್ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದೆ. ಇದಕ್ಕೆ ಸ್ಪಂದಿಸಿದ್ದ ಅಲ್ಪಸಂಖ್ಯಾತರ ಸಚಿವ ಜಹಮೀರ್ ಅಹಮ್ಮದಖಾನ್ ಅವರು ನಿಗಮ ಮಂಡಳಿ ಸ್ಥಾಪನೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಕೊಳ್ಳುವುದಾಗಿ ಭರವಸೆ ಕೊಟ್ಟಿದ್ದರು. ಬರುವ ಶೈಕ್ಷಣಿಕ ವರ್ಷದಿಂದ ಬೆಳಗಾವಿಯಲ್ಲಿ ಪ್ರತ್ಯೇಕ ಜೈನ ಹಾಸ್ಟೇಲ್ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದು, ಸೋಮವಾರ ಇಲ್ಲವೇ ಮಂಗಳವಾರ ಆದೇಶ ಪ್ರತಿ ಬರಲಿದೆ ಎಂದು ತಿಳಿಸಿದರು.ಜೈನ ಸಮುದಾಯದವರು ಸಾತ್ವಿಕ ಸಸ್ಯಾಹಾರಿ ಸೇವನೆ ಮಾಡುವ ಪರಂಪರೆ ಮತ್ತು ಧಾರ್ಮಿಕ ಆಚರಣೆಯನ್ನು ಹೊಂದಿದ್ದಾರೆ. ಎಂದು ಸದನದಲ್ಲಿ ಲಕ್ಷ್ಮಣ ಸವದಿಯವರು ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಾಗ ಹಾಸ್ಟೇಲನ್ನು ಪ್ರಾರಂಭಿಸುವುದಕ್ಕೆ ಅನುಮತಿ ನೀಡಿದ್ದು, ನಿಗಮ ಮಂಡಳಿಯನ್ನು ಶೀಘ್ರ ಪ್ರಾರಂಭಿಸುವ ಆಸಕ್ತಿ ಹೊಂದಿದ್ದಾರೆ ಎಂದರು.ಜೈನ ಸಮಾಜದ ಮುಖಂಡರಾದ ಶೀತಲಗೌಡ ಪಾಟೀಲ, ಅರುಣಕುಮಾರ ಯಲಗುದ್ರಿ, ಅಭಯಕುಮಾರ ಅಕಿವಾಟೆ, ರಾಜು ನಾಡಗೌಡ್ರ, ಅಮರ ದುರ್ಗಣ್ಣವರ,ಕೆ.ಎ.ವನಜೋಳ, ಎಸ್.ಎಂ.ಲಠ್ಠೆ, ವಿಜಯ ಅಕಿವಾಟೆ, ಮುತ್ತಣ್ಣ ಕಾತ್ರಾಳೆ, ಜಯಪಾಲ ಯಂಡೊಳ್ಳಿ, ಬಾಬಾಸಾಬ ನಾಂದ್ರೆ ಅಶೋಕ ಪಡನಾಡ, ರಾಜೇಂದ್ರ ಕರ್ಪೂರಶೆಟ್ಟಿ, ವೃಷಭ ಪಾಟೀಲ, ಸುನೀಲ ಪಡನಾಡ, ಸಂಜಯ ಕುಚನೂರೆ, ಶಾಂತಿನಾಥ ನಂದೇಶ್ವರ, ಗಜಾನನ ಯರಂಡೋಲಿ, ಸಂದೀಪ ಮಗದುಮ್, ಶಾಂತಿಸಾಗರ ಪಾಟೀಲ, ದೀಪಕ ಪಾಟೀಲ, ಲಗಮನ್ನ ತುಪಳೆ, ಯಶವಂತ ಪಾಟೀಲ, ಚಮನರಾವ್ ಪಾಟೀಲ, ಸುಭಾಷ ಪಾಟೀಲ,ಸಂತೋಷ ಪಾಟೀಲ, ಪ್ರಕಾಶ ಚಿನಗಿ, ದುಂಡಪ್ಪ ಅಸ್ಕಿ, ಸಂಜಯ ಕುಸನಾಳೆ,ಸೇರಿದಂತೆ ಅನೇಕರು ಶಾಸಕ ಲಕ್ಷ್ಮಣ ಸವದಿಯವರನ್ನು ಸನ್ಮಾನಿಸಿದರು.ರಾಜಕೀಯವಾಗಿ ನಾನು ಎತ್ತರಕ್ಕೆ ಬೆಳೆಯುವ ಸಂದರ್ಭದಲ್ಲಿ ತಮ್ಮ ಸಮಾಜದವರೇ ನನಗೆ ಪ್ರತಿಸ್ಪರ್ಧಿಯಾಗಿರುವಂತಹ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತು ಯಾವುದೇ ಕೊರತೆಯಾಗದ ಹಾಗೆ ಬಹಳಷ್ಟು ಮತಗಳನ್ನು ಕೊಟ್ಟಿರುವುದು ನನಗೆ ಅರಿವಿದೆ. ಜೈನ ಸಮಾಜದ ಋಣ ನನ್ನ ಮೇಲೆ ಬಹಳಷ್ಟಿದೆ. ನಿಮೆಲ್ಲರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಕೆಲಸ ಮಾಡುತ್ತೇನೆ.

-ಲಕ್ಷ್ಮಣ ಸವದಿ, ಅಥಣಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''