ಜೈನ ಸಮಾಜ ಜಗತ್ತಿಗೆ ಮಾದರಿ: ಪುಣ್ಯಸಾಗರ ಮುನಿ ಮಹಾರಾಜರು

KannadaprabhaNewsNetwork |  
Published : Mar 20, 2025, 01:18 AM IST
ಪೊಟೋ ಪೈಲ್ ನೇಮ್  ೧೯ಎಸ್‌ಜಿವಿ೩   ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಡೆದ ಭಗವಾನ ಶ್ರೀ ೧೦೦೮ ಆಧಿನಾಥ ತೀರ್ಥಂಕರರ ಜಿನ ಬಿಂಬ ಪಂಚಕಲ್ಯಾಣ ಪ್ರತಿಷ್ಠಾ  ಮಹೋತ್ಸವದ ಕಾರ್ಯಕ್ರಮದಲ್ಲಿ ಪೂಜ್ಯ ಆಚಾರ್ಯ ಶ್ರೀ ೧೦೮ ಪುಣ್ಯ ಸಾಗರ ಮುಣಿ ಮಾತನಾಡಿದರು೧೯ಎಸ್‌ಜಿವಿ೩-೧   ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಡೆದ ಭಗವಾನ ಶ್ರೀ ೧೦೦೮ ಆಧಿನಾಥ ತೀರ್ಥಂಕರರ ಜಿನ ಬಿಂಬ ಪಂಚಕಲ್ಯಾಣ ಪ್ರತಿಷ್ಠಾ  ಮಹೋತ್ಸವದ ಕಾರ್ಯಕ್ರಮದಲ್ಲಿ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ  ಮಾತನಾಡಿದರು | Kannada Prabha

ಸಾರಾಂಶ

ಜೈನ ಸಮಾಜದ ಸಂಖ್ಯೆ ಭಾರತದಲ್ಲಿ ತುಂಬಾ ಕಡಿಮೆ. ಆದರೆ ಧರ್ಮ, ಸಾಂಸ್ಕೃತಿಕ, ಆರ್ಥಿಕ ಮತ್ತು ದಾನ- ಧರ್ಮ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಶಿಗ್ಗಾಂವಿ: ಜೈನ ಧರ್ಮವು ತನ್ನ ವಿಶಿಷ್ಟ ಆಚಾರಗಳು ಮತ್ತು ಸಂಪ್ರದಾಯಗಳಿಗೆ ಪ್ರಸಿದ್ಧವಾಗಿದೆ. ಇದೊಂದು ಪ್ರಾಚೀನ ಭಾರತೀಯ ಧರ್ಮವಾಗಿದ್ದು, ಇದಕ್ಕೆ ಆಶಯವಾದ ಮೂಲಭೂತ ಸಿದ್ಧಾಂತ ಅತ್ಯಂತ ಹಿಂಸಾತ್ಮಕತೆ ತ್ಯಜಿಸುವುದನ್ನು ಹೊಂದಿವೆ ಎಂದು ಪುಣ್ಯಸಾಗರ ಮುನಿ ಮಹಾರಾಜರು ತಿಳಿಸಿದರು.ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಡೆದ ಆದಿನಾಥ ತೀರ್ಥಂಕರರ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿಗೆ ಜೈನ ಸಮಾಜ ಮಾದರಿ ಎಂದರು.ಸೋಂದಾದ ಆಕಳಾಂಕ ಕೇಸರಿ ಅಕಲಂಕ ಪಟ್ಟಾಧಿಕಾರಿ ಪಟ್ಟಾಚಾರ್ಯ ಭಟ್ಟಾರಕರು ಮಾತನಾಡಿ, ಜೈನ ಸಮಾಜದ ಸಂಖ್ಯೆ ಭಾರತದಲ್ಲಿ ತುಂಬಾ ಕಡಿಮೆ. ಆದರೆ ಧರ್ಮ, ಸಾಂಸ್ಕೃತಿಕ, ಆರ್ಥಿಕ ಮತ್ತು ದಾನ- ಧರ್ಮ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಧರ್ಮದ ಆಚಾರ- ವಿಚಾರಗಳಿಂದ ದೇಶದಲ್ಲಿ ಶಾಂತಿ ನೆಲೆವೂರಲು ಕಾರಣವಾಗಿದೆ ಎಂದರು.

ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡ್ಲಿ ಜೈನ ಸಮಾಜದ ಅಧ್ಯಕ್ಷ ಮುರಿಗೆಪ್ಪ ದೇಸಾಯಿ ವಹಿಸಿದ್ದರು. ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಗುಳೇದ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಧ್ಯಕ್ಷ ಹನುಮರಡ್ಡಿ ನಡುವಿನಮನಿ, ಚಂದ್ರಣ್ಣ ನಡುವಿನಮನಿ, ಈಶ್ವರಗೌಡ ಪಾಟೀಲ್, ಯಲ್ಲಪ್ಪ ತಗಡಿನಮನಿ, ಬಾಹುಬಲಿ ಅಕ್ಕಿ, ಬಸವರಾಜ ಲಂಗೂಟಿ, ಅಭಿನಂದನ ಅವರಾದಿ, ಬಸವರಾಜ ಮಾಯಣ್ಣವರ ಸೇರಿದಂತೆ ಹಲವರು ಇದ್ದರು.ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ವಿವಿಧ ಕೌಶಲ್ಯಾಭಿವೃದ್ಧಿ(ತಾಂತ್ರಿಕ ನೈಪುಣ್ಯತೆ) ತರಬೇತಿಗೆ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ಹಾಗೂ ಅರಣ್ಯ ಆಧರಿತ ಆದಿವಾಸಿ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ, ಸಹಾಯಕ ಸೌಂದರ್ಯ ಚಿಕಿತ್ಸೆ, ಡಾಟಾ ಎಂಟ್ರಿ ಆಪರೇಟರ್ ಹಾಗೂ ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡಲಾಗುವುದು. ಆಸಕ್ತ ಅರ್ಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾ. 25ರೊಳಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಬಿ ಬ್ಲಾಕ್, ರೂಂ ನಂ. 25, ದೇವಗಿರಿ- ಹಾವೇರಿ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಬರುವ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಎಸ್ಸಿ ಎಂದೇಳಿ ಮದುವೆ ಬಹಿರಂಗಕ್ಕೆ ಒಪ್ಪದ ಪೇದೆಗೆ ಜಾಮೀನು ನಕಾರ
ಲಿವಿಂಗ್‌ ಟುಗೆದರ್‌ಗೆ ನಟಿಗೆ ಕಿರುಕುಳ : ಚಿತ್ರ ನಿರ್ಮಾಪಕ ಸೆರೆ