ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪುರಸಭೆಯ ಎಲ್ಲ ಮೂಲಗಳಿಂದ ₹24,40,90,350 ಆದಾಯ ನಿರೀಕ್ಷೆ, ₹೨೪,೩೪, ೫೨,೬೦೦ ಖರ್ಚುದ ಅಂದಾಜಿದ್ದು, ೬,೩೭,೭೫೦ ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ, ಬಜೆಟ್‌ನಲ್ಲಿ ಕೆರೆ ಅಭಿವೃದ್ಧಿ, ತಿನಿಸು ಕಟ್ಟೆ ಮಾರುಕಟ್ಟೆಗೆ ಪುನಃ ಟೆಂಡರ್ ಕರೆದು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಒತ್ತಾಯಿಸಿದರು. ಬಾಡಿಗೆ ಮತ್ತು ಠೇವಣಿ ಕಡಿಮೆ ಮಾಡಲು ಅವಕಾಶ ಇದ್ದರೆ ಕಡಿಮೆ ಮಾಡಲು ಒತ್ತಾಯಿಸಿದರು. ಪುರಸಭೆ ಪರವಾನಗಿ ಇಲ್ಲದೆ ಬ್ಯಾನರ್ ಅಳವಡಿಸಬಾರದು ಎಂದು ಸಲಹೆ ನೀಡಿದರು.ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ ಮಾತನಾಡಿ, ಜಂಗಮ ಸಮುದಾಯ ಭವನಕ್ಕೆ ಅನುದಾನ ನೀಡಲು ಒತ್ತಾಯಿಸಿ, ಪುರಸಭೆಯಲ್ಲಿ ನಿರ್ಧಾರವಾಗುವ ನಿಯಮಗಳನ್ನು ಸೂಚನಾ ಫಲಕದಲ್ಲಿ ಅಳವಡಿಸಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿ ಎಂದರು.
ಪುರಸಭೆ ಸದಸ್ಯ ಚನ್ನಬಸು ಯರಗಟ್ಟಿ ಮಾತನಾಡಿ, ಪಟ್ಟಣದ ಕೆರೆ ಹತ್ತಿರವಿರುವ ಜಾಗೆಯಲ್ಲಿ ಸುಂದರವಾದ ಗಾರ್ಡನ್ ಮಾಡಲು ಒತ್ತಾಯಿಸಿದರು. ಪಟ್ಟಣದ ಯಾವ ಜಾಗದಲ್ಲಾದರೂ ಒಂದು ಸ್ವಿಮ್ಮಿಂಗ್ ಫೂಲ್ ಮಾಡಬೇಕು ಎಂದು ಆಗ್ರಹಿಸಿದರು.
ಸದಸ್ಯೆ ಸವಿತಾ ಹುರಕಡ್ಲಿ, ತಮ್ಮ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದಿರುವುದು ತುಂಬಾ ಬೇಸರ ತರಿಸಿದೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿರುವ ಉದ್ಯಾನವನಗಳಲ್ಲಿ ಆರು ಸಂಪೂರ್ಣ ಅಭಿವೃದ್ಧಿ ಹೊಂದಿದ್ದು, ಅವುಗಳ ನಿರ್ವಹಣೆಗೆ ಮಹಿಳಾ ಸಂಘಗಳಿಗೆ ಟೆಂಡರ್ ಕರೆಯಲಾಗಿದೆ. ಅರ್ಹ ಸಂಘಗಳಿಗೆ ವಾರ್ಷಿಕ ನಿರ್ವಹಣೆ ವೆಚ್ಚವಾಗಿ ಪುರಸಭೆ ₹೨.೫೦ ಲಕ್ಷ ಕೊಡಲಿದೆ ಎಂದು ಹೇಳಿದರು.
ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರಮನ್ ಅಬ್ದುಲ್‌ರಜಾಕ್ ಭಾಗವಾನ, ಬಲವಂತಗೌಡ ಪಾಟೀಲ, ಮುಸ್ತಾಕ್ ಚಿಕ್ಕೋಡಿ, ಸಜನಸಾಬ ಪೆಂಡಾರಿ, ರಾಜು ಗೌಡಪ್ಪಗೋಳ, ಬಸಪ್ಪ ಬುರುಡ, ಚಾಂದನಿ ನಾಯಕ, ಸ್ನೇಹಲ್ ಅಂಗಡಿ, ಲಕ್ಷ್ಮಿ ಮುದ್ದಾಪುರ, ಸವಿತಾ ಕೋಳಿಗುಡ್ಡ, ಸರಸ್ವತಿ ರಾಮೋಜಿ, ಭಾವನಾ ಪಾಟೀಲ, ಸುಜಾತಾ ಮಾಂಗ, ಗೋದಾವರಿ ಬಾಟ, ನಾಮನಿರ್ದೇಶೀತ ಸದಸ್ಯರಾದ ವಿನೋದ ಸಿಂಪಿ, ಅಪ್ಪಾಸಾಬ ನಾಲಬಂಧ, ಅನಂತನಾಗ ಬಂಡಿ, ಬಸು ಕರೆಹೊನ್ನ ಸೇರಿದಂತೆ ಪುರಸಭೆ ಅಧಿಕಾರಿಗಳಾದ ಎಸ್.ಎಸ್. ಪಾಟೀಲ, ಸಿ.ಎಸ್. ಮಠಪತಿ, ಪಿ.ವೈ.ಸೊನ್ನದ, ಎಂ.ಎಂ. ಮುಗಳಕೋಡ, ಎಸ್.ಎಂ. ಕಲಬುರ್ಗಿ, ರಾಜೇಶ್ವರಿ ಸೊರಗಾಂವಿ, ಸಿಪಾಯಿ ರಾಮು ಮಾಂಗ , ಮಹಾಲಿಂಗ ಮಾಂಗ ಉಪಸ್ಥಿತರಿದ್ದರು.ಸಾರ್ವಜನಿಕರ ಹಿತ ಮತ್ತು ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಇತರ ವಿಷಯಗಳನ್ನು ಸದಸ್ಯರು ತಿಳಿಸಿದರೆ ಸೇರಿಸಿಕೊಳ್ಳಲಾಗುವುದು. ಪಟ್ಟಣದ ಅಭಿವೃದ್ಧಿಯೇ ನಮ್ಮೆಲ್ಲರ ಗುರಿ.