ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ತಾಲೂಕಿನ ಕಚೇರಿಯಲ್ಲಿ ಕಂದಾಯ ಭವನದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವ ಕರ್ಮ ಸಮಾಜದ ವತಿಯಿಂದ ಏರ್ಪಡಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಕೇವಲ ಉಳಿ ಮತ್ತು ಸುತ್ತಿಗೆಯಿಂದ ಅವರು ಮಾಡಿದ ಅದ್ಭುತಗಳು ಜಗತ್ತನ್ನೇ ಬೆರಗುಗೊಳಿಸುತ್ತವೆ. ಅಂತಹ ಮಹಾನ್ ಶಿಲ್ಪಿಯ ಸ್ಮರಣೆ ನಮಗೆ ಸದಾ ಸ್ಫೂರ್ತಿಯಾಗಿರಲಿ ಎಂದರು.ವಿಶ್ವ ಕರ್ಮ ಸಮಾಜದ ಅಧ್ಯಕ್ಷರು ಕಮಲಾನಾಭಚಾರಿ ಮಾತನಾಡಿ, ತಾಲೂಕಿನಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ವಿಶ್ವಕರ್ಮ ಸಮುದಾಯದವರಿದ್ದು, ಕಾರ್ಯಕ್ರಮಕ್ಕೆ ಕಡಿಮೆ ಸಂಖ್ಯೆ ಬಂದಿದ್ದಾರೆ. ನಮ್ಮ ಸಮಾಜದ ಕಾರ್ಯಕ್ರಮವನ್ನು ನಾವುಗಳು ಸಂಘಟಿತರಾಗಿ ಇತರೆ ಸಮಾಜಕ್ಕೆ ಮಾದರಿಯಾಗಿ ರೂಪಿಸಬೇಕು. ಜಕಣಾಚಾರಿಯವರ ಹೆಸರನ್ನು ಕೇಳಿದ ಕೂಡಲೇ ನಮಗೆ ನೆನಪಾಗುವುದು ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಎಂದು ಹೇಳಿದ್ದರು. ವಿಶ್ವಕರ್ಮ ಸಮಾಜದವತಿಯಿಂದ ಗುಬ್ಬಿಯಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ನಿವೃತ್ತ ಸೈನಿಕ ವಿವೇಕಾನಂದ ಚಾರ್ ಮಾತನಾಡಿ, ಜಕಣಾಚಾರಿಯವರು ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿ ಬದುಕಿದ್ದ ಒಬ್ಬ ಅದ್ಭುತ ಶಿಲ್ಪಿ. ಇವರು ತುಮಕೂರು ಜಿಲ್ಲೆಯ ಕೈದಾಳ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದವರು ಎಂದು ಇತಿಹಾಸ ಮತ್ತು ಜನಪದ ಕಥೆಗಳು ಹೇಳುತ್ತವೆ. ಕಲೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಇವರು, ತಮ್ಮ ಶಿಲ್ಪಕಲೆಯ ಮೂಲಕ ಇಂದಿಗೂ ಅಮರರಾಗಿದ್ದಾರೆ ಎಂದು ಜಕಣಚಾರಿ ಹಾಗೂ ಅವರ ಮಗ ಡಂಕಣ ಚಾರಿ ಬಗ್ಗೆ ಉಪನ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ವರುಣ್, ವಿಶ್ವ ಕರ್ಮ ಸಮಾಜದ ಅಧ್ಯಕ್ಷರು ಕಮಲಾನಾಭಚಾರಿ. ಉಪಾಧ್ಯಕ್ಷರು ರಾಜಶೇಖರ್. ಮಾಜಿ ಅಧ್ಯಕ್ಷರು ನಾಗರಾಜ ಚಾರ್. ನಿರ್ದೇಶಕರುಗಳಾದ ನಾಟರಾಜು,. ಮಹೇಶ್ ಕುಮಾರ್. ದಯಾನಂದ್. ಉಮೇಶ್. ನಾಗರಾಜಾಚಾರ್, ಮುಖಂಡರಾಸ ರೇವಣ್ಣಿಸಿದ್ದಪ್ಪ ಚಾರ್ ಶಿವರುದ್ರ ಚಾರ್ ಇತರರಿದ್ದರು.