ಶಿಲ್ಪಕಲೆಗೆ ಜಕಣಾಚಾರಿ ಕೊಟ್ಟ ಕೊಡುಗೆ ಅನನ್ಯ

KannadaprabhaNewsNetwork |  
Published : Nov 22, 2026, 01:15 AM IST
 | Kannada Prabha

ಸಾರಾಂಶ

ನಮ್ಮ ನಾಡಿನ ಶಿಲ್ಪಕಲೆಗೆ ಜಕಣಾಚಾರಿಯವರ ಕೊಡುಗೆ ಅನನ್ಯ. ಒಬ್ಬ ಶಿಲ್ಪಿಯಾಗಿ ಅವರು ಜನಮಾನಸದಲ್ಲಿ, ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ತಮ್ಮ ಹೆಸರನ್ನು ಕೆತ್ತಿದ್ದಾರೆ. ಜಕಣಾಚಾರಿಯವರ ಕೊಡುಗೆ ಸ್ಮರಣೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು

ಕನ್ನಡಪ್ರಭ ವಾರ್ತೆ ತುಮಕೂರು

ನಮ್ಮ ನಾಡಿನ ಶಿಲ್ಪಕಲೆಗೆ ಜಕಣಾಚಾರಿಯವರ ಕೊಡುಗೆ ಅನನ್ಯ. ಒಬ್ಬ ಶಿಲ್ಪಿಯಾಗಿ ಅವರು ಜನಮಾನಸದಲ್ಲಿ, ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ತಮ್ಮ ಹೆಸರನ್ನು ಕೆತ್ತಿದ್ದಾರೆ. ಜಕಣಾಚಾರಿಯವರ ಕೊಡುಗೆ ಸ್ಮರಣೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಕೈದಾಳದ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಲೋಕಕಲ್ಯಾಣಾರ್ಥ ತುಲಸೀ ದಾಮೋದರ ಕಲ್ಯಾಣೋತ್ಸವ ಹಾಗೂ ಲಕ್ಷ್ಮೀ ನಾರಾಯಣ ಮಂತ್ರ ಹೋಮದ ಪೂಜಾ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ಭಾಗವಹಿಸಿ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.

ಸುಮಾರು 40 ವರ್ಷಗಳಿಂದ ತುಮಕೂರಿಗೆ ಬರುತ್ತಿದ್ದೇನೆ ತುಮಕೂರಿನಲ್ಲಿ ಓದಲಿಕ್ಕೆ ಪ್ರಾರಂಭ ಮಾಡೋದಕ್ಕೂ ಒಂದು ವರ್ಷದ ಮುಂಚೆ ಹೈಸ್ಕೂಲ್ ಓದುವಾಗ ನಾಟ್ಯರಾಣಿ ಶಾಂತಲಾ ಅವರ ಚರಿತ್ರೆ ಪುಸ್ತಕದಲ್ಲಿ ಜಕಣಾಚಾರ್ಯರ ವಿಚಾರಗಳು ಬರುತ್ತಿದ್ದವು. ಅದರಿಂದ ಪ್ರಭಾವಿತರಾಗಿ ಶಿವಗಂಗೆ ಬೆಟ್ಟವನ್ನು 13 ಬಾರಿ ಹತ್ತಿದ್ದೆ ಎಂದು ಸ್ವಾಮೀಜಿ ಹೇಳಿದರು.

ಕೈದಾಳವನ್ನು ಭೇಟಿ ಮಾಡಬೇಕು, ಕೈದಾಳಕ್ಕೆ ಬರಬೇಕು ಅಂತ ತುಂಬಾ ಆಸೆ ಇಟ್ಟುಕೊಂಡಿದ್ದೆ. ಇವತ್ತು ಚೆನ್ನಕೇಶವ ಸ್ವಾಮಿ, ಗಂಗಾಧರೇಶ್ವರ ಸ್ವಾಮಿ ಸುರೇಶ್ ಗೌಡರ ಮುಖಾಂತರ ಪ್ರೇರೇಪಣೆ ಕೊಟ್ಟು ಕರೆಸಿಕೊಂಡಿದ್ದಾರೆ. ಅಮರ ಶಿಲ್ಪಿಯವರು ತಮ್ಮ ಕೆಲಸದಿಂದ ಅವರು ಅಮರರಾಗಿದ್ದಾರೆ. ಅಂತಹ ಹೆಸರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮ ತುಳಸಿ ಹಬ್ಬದ ಮುಖಾಂತರ ನಡೆಯುತ್ತಿರುವುದು ಸಂತೋಷ. ಉತ್ಸಾಹ ಇದ್ದರೆ ಮತ್ತಷ್ಟು ಉತ್ಸವಗಳು ಜಾಸ್ತಿಯಾಗುತ್ತವೆ. ಮಾನಸಿಕವಾಗಿ ವ್ಯಕ್ತಿ ಸದೃಢನಾಗಿದ್ದರೆ, ಪ್ರಬಲನಾಗುತ್ತಾನೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಶಾಸಕ ಬಿ.ಸುರೇಶ್‌ಗೌಡರು ಮಾತನಾಡಿ, ಈ ದೇವಸ್ಥಾನಕ್ಕೆ ಸೇರಿದ 18 ಎಕರೆ ಜಮೀನು ಇಂದಿಗೂ ಈ ಊರಿನಲ್ಲಿ ಉಳಿದುಕೊಂಡಿದೆ ಅಂದರೆ, ಅದು ಭಗವಂತನ ಕೃಪೆ. ಅದರ ಜೊತೆಗೆ ಈ ಊರಿನ ಗ್ರಾಮಸ್ಥರು ಮಾಡಿದ ಹೋರಾಟದ ಫಲ. ಆ ಹೋರಾಟದ ಮುಂಚೂಣಿಯಲ್ಲಿ ಇದ್ದವರು ತಿಮ್ಮೇಗೌಡರು. ಅವರು ಸ್ಮರಣೀಯರು ಎಂದರು.

ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈದಾಳದಲ್ಲಿ, ಎಲ್ಲಾ ಸಮಾಜದವರು, ಎಲ್ಲಾ ಪಕ್ಷದವರು ಒಟ್ಟಾಗಿ ಸೇರಿ ಈ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಮಾದರಿ. ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಎಲ್ಲರ ಸಹಕಾರದಿಂದ ಚೆನ್ನಾಗಿ ನಡೆಯಲಿ ಎಂದು ತಿಳಿಸಿದರು.

ಮುಖಂಡ ವೈ.ಎಚ್. ಹುಚ್ಚಯ್ಯ ಶಾರದಾ ನರಸಿಂಹಮೂರ್ತಿ, ಗುಳೂರು ಶಿವಕುಮಾರ್, ಜೆ.ಎನ್. ಗೌಡರು, ಕೆಂಪರಾಜಯ್ಯ, ಉಮೇಶ್ ಗೌಡ, ರಾಮಸ್ವಾಮಿ ಗೌಡ, ಸತ್ಯನಾರಾಯಣ ಗೌಡ, ಚೆಲುವಣ್ಣ, ತಾರದೇವಿ, ರಾಜಶೇಖರ್, ಶಂಕರಣ್ಣ, ಆರ್.ಕೆ. ರವಿ, ವಿಜಯ್ ಕುಮಾರ್, ಲಕ್ಷ್ಮಯ್ಯ, ಮಂಜಣ್ಣ, ಹೊಳಕಲ್ ಅಂಜಿನಪ್ಪ, ನರಸಿಂಹಮೂರ್ತಿ, ಮಾಸ್ತಿ ಗೌಡ, ವೆಂಕಟೇಶ್, ತಿಮ್ಮೇಗೌಡ, ಗಂಗಾಧರಪ್ಪ, ಶಿವರಾಜ್, ಬೆಳ್ಳಿ ಲೋಕೇಶ್, ಶೇಷಕುಮಾರ್, ಹೆತ್ತೇನಹಳ್ಳಿ ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಜಲಿ ಕೊಲೆ ಪ್ರಕರಣ: ಗಿರೀಶ್ ಅಪರಾಧಿ; 25ಕ್ಕೆ ಶಿಕ್ಷೆ ಪ್ರಕಟ
ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಜೀವನ ನಡೆಸಿ