ಜಮಖಂಡಿಯಲ್ಲಿ ಗಮನ ಸೆಳೆದ ಜಂಬೂ ಸವಾರಿ

KannadaprabhaNewsNetwork |  
Published : Nov 02, 2026, 04:15 AM IST
 ಜಮಖಂಡಿ: ನಗರದಲ್ಲಿ ರವಿವಾರ ಕನ್ನಡ ಸಂಘದ ಬೃಹತ್ ಮೆರವಣಿಗೆಯಲ್ಲಿ ಜಂಬೂಸವಾರಿ, ಕುದರೆಗಳ ಪ್ರದರ್ಶನ, ಕುಂಭಮೇಳ ಮತ್ತು ವಿವಿಧ ವಾಧ್ಯಮೇಳಗಳು ಗಮನ ಸೆಳೆಯಿತು. | Kannada Prabha

ಸಾರಾಂಶ

ಜಮಖಂಡಿ ನಗರದ ಹೊಕ್ಕಳಭಾವಿ ಮೈದಾನದಲ್ಲಿ ಭಾನುವಾರ ಕನ್ನಡ ಸಂಘ ಮತ್ತು ತಾಲೂಕಾಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ 71ನೇ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಸಂಘದ ಅಧ್ಯಕ್ಷ ರಾಹುಲ್‌ ಕಲೂತಿ ಮತ್ತು ಶಾಸಕ ಜಗದೀಶ ಗುಡಗುಂಟಿ ಜಂಟಿಯಾಗಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಹೊಕ್ಕಳಭಾವಿ ಮೈದಾನದಲ್ಲಿ ಭಾನುವಾರ ಕನ್ನಡ ಸಂಘ ಮತ್ತು ತಾಲೂಕಾಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ 71ನೇ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಸಂಘದ ಅಧ್ಯಕ್ಷ ರಾಹುಲ್‌ ಕಲೂತಿ ಮತ್ತು ಶಾಸಕ ಜಗದೀಶ ಗುಡಗುಂಟಿ ಜಂಟಿಯಾಗಿ ಚಾಲನೆ ನೀಡಿದರು.

ಸ್ಥಳೀಯ ಕನ್ನಡ ಸಂಘ 80 ದಶಕಗಳನ್ನು ಪೂರೈಸಿರುವ ಹಿನ್ನೆಲೆ ವಿಶೇಷವಾಗಿ ಆಯೋಜಿಸಿದ್ದ ಬೃಹತ್ ಮೆರವಣಿಗೆಯಲ್ಲಿ ಜಂಬೂ ಸವಾರಿ, ಕುದರೆಗಳ ಪ್ರದರ್ಶನ, ಕುಂಭಮೇಳ ಮತ್ತು ವಿವಿಧ ವಾಧ್ಯಮೇಳಗಳು ಕನ್ನಡಾಭಿಮಾನಿಗಳ ಗಮನ ಸೆಳೆಯಿತು. ಬೃಹತ್‌ ಮೆರವಣಿಗೆಯಲ್ಲಿ 11 ಜೋಡೆತ್ತಿನ ಬಂಡಿಗಳು, 7 ಕುದುರೆ ಚಕ್ಕಡಿಗಳು, ನಾಲ್ಕು ಒಂಟೆಗಳು, ಅಲಂಕೃತ ನಾಲ್ಕು ಕುದುರೆಗಳು, ಹುಲಿ ಕುಣಿತ, ಜಗ್ಗಲಿಗೆ ವಾದ್ಯ, ಚಂಡೇ ವಾದ್ಯ, ಬ್ಯಾಂಜೋ, ಕರಡಿಮೇಳ, ಕನ್ನಡಿ ಬಾಸಿಂಗ, ಜಾಂಝ ಪತಾಕ, ಡೊಳ್ಳಿನ ವಾದ್ಯ, ಕುಂಭಮೇಳ, ಕುದುರೆ ಕುಣಿತ, ಗೊಂಬೆ ಕುಣಿತ, ಸಂಬಾಳ, ಕಣಿವಾದ್ಯ, ಚಿನ್ನ ಕೋಲು, ನಾಡಿನ ವೈಭವ ಸಾರುವ 15 ಸ್ತಬ್ಧ ಚಿತ್ರಗಳು ಜೊತೆಗೆ ಕರ್ನಾಟಕ ವಿವಿಧ ಜಿಲ್ಲೆಗಳಿಂದ ಕಲಾತಂಡಗಳು, ಕೇರಳ ಮಾದರಿ ಕಲಾತಂಡಗಳು ಮತ್ತು ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಯಲ್ಲಿ ಪಾಲ್ಗೊಂಡಿದ್ದವು. ಮಹಿಳೆಯರ ಕುಂಭ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ನಗರದ ಹೊಕ್ಕಳಭಾವಿ ಮೈದಾನದಿಂದ ಆರಂಭಗೊಂಡ ಕನ್ನಡ ಸಂಘದ ಬೃಹತ್ ಮೆರವಣಿಗೆ ಓಲೆಮಠ, ಬಾಕ್ಸೆಗಲ್ಲಿ ಹನುಮಾನ ಚೌಕ, ಥೇಟರ ರಸ್ತೆ, ಡಾ.ರಾಜಕುಮಾರ ರಸ್ತೆ, ಎ.ಜಿ.ದೇಸಾಯಿ ವೃತ್ತ ಸಹಿತ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಪರಶುರಾಮ ಉದ್ಯಾನವನದಲ್ಲಿ ಸಮಾರೋಪಗೊಂಡಿತು.

ಕರ್ನಾಟಕ ಶಿಲ್ಪಕಲಾ ವೈಭವ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ವಾಯುವ್ಯ ಸಾರಿಗೆ ಜಮಖಂಡಿ ಘಟಕ ಪ್ರಥಮ ಸ್ಥಾನ ಪಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದ್ವಿತೀಯ ಸ್ಥಾನ ಪಡೆಯಿತು.ಮೆರವಣಿಯಲ್ಲಿ ಹರ್ಷಾನಂದ ಶ್ರೀಗಳು, ಮುತ್ತಿನಕಂತಿ ಶ್ರೀಗಳು, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಅನಿಲ ಬಡಗೇರ, ತಾಪಂ ಅಧಿಕಾರಿ ಮಲ್ಲಿಕಾರ್ಜುನ ಬಡಗೇರ, ಮಾಮೂನ ಪಾರ್ಥನಳ್ಳಿ, ಅನ್ವರ ಮೊಮಿನ, ಅರುಣಕುಮಾರ ಶಹಾ, ಸುಶೀಲಕುಮಾರ ಬೆಳಗಲಿ, ಡಾ.ರಂಗನಾಥ ಸೋನವಾಲ್ಕರ, ದೇವಲ ದೇಸಾಯಿ, ಏಗಪ್ಪ ಸವದಿ, ಪಿ.ಜಿ. ಅಜ್ಜಣ್ಣವರ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಸಂಘದ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು, ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸೇರಿದಂತೆ ಸಾವಿರಾರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳೇ ಎಚ್ಚರ, ಕರ್ತವ್ಯ ಲೋಪ ಕಂಡರೆ ಲೋಕಾಯುಕ್ತ ಕೇಸ್‌
ಎಲ್ಲ ಕ್ಷೇತ್ರದಲ್ಲಿ ಎಐ ಮಹತ್ವದ ಬದಲಾವಣೆ