ರೈತ ಹೋರಾಟಬೆಂಬಲಿಸಿ ಮೋಹನ ಕೇಶ ಮುಂಡನ!

KannadaprabhaNewsNetwork |  
Published : Nov 02, 2026, 04:15 AM IST
01ವದ,ವ,ಷಞ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಗಳಖೋಡಕಬ್ಬು ಬೆಳೆಗೆ ಯೋಗ್ಯ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಶನಿವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೇಕರಿ ವ್ಯಾಪಾರಸ್ಥ ಹಾಗೂ ಕೆಆರ್‌ಎಸ್ ಪಕ್ಷದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಲಮಾಣಿ ಭಾಗವಹಿಸಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮುಗಳಖೋಡ

ಕಬ್ಬು ಬೆಳೆಗೆ ಯೋಗ್ಯ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಶನಿವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೇಕರಿ ವ್ಯಾಪಾರಸ್ಥ ಹಾಗೂ ಕೆಆರ್‌ಎಸ್ ಪಕ್ಷದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಲಮಾಣಿ ಭಾಗವಹಿಸಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ಸಂಜೆ ವೇಳೆಯೊಳಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಹೋರಾಟಕ್ಕೆ ಸ್ಪಂದಿಸದಿದ್ದರೆ, ಆ ಎರಡೂ ಸರ್ಕಾರಗಳು ನಮ್ಮ ಪಾಲಿಗೆ ಸತ್ತಂತೆ. ಹೀಗಾಗಿ ನಾನು ಕೇಶ ಮುಂಡನ ಮಾಡಿಸಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.

ಇಡೀ ದಿನ ಹೋರಾಟ ಮುಂದುವರಿದರೂ ರಾತ್ರಿ ವೇಳೆಯವರೆಗೂ ಸರ್ಕಾರಗಳಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ, ಸರ್ಕಾರಗಳು ನೀಡಿದ ಭರವಸೆಯ ಮಾತಿಗೆ ತಪ್ಪಿವೆ. ಆದರೆ, ನಾನು ನೀಡಿದ ಮಾತಿಗೆ ತಪ್ಪುವುದಿಲ್ಲ. ಆ ಸರ್ಕಾರಗಳು ನಮ್ಮ ಪಾಲಿಗೆ ಸತ್ತಂತೆಯೇ ಎಂದು ಹೇಳಿ, ತಮ್ಮ ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಇದೇ ವೇಳೆ ಭಜನಾ ಮಂಡಳಿಯವರು ಹಾಗೂ ಡೊಳ್ಳಿನ ಗಾಯನ ಸಂಘದವರು ರೈತಪರ ಗೀತೆಗಳನ್ನು ಹಾಡುವ ಮೂಲಕ ಪ್ರತಿಭಟನೆಗೆ ವಿಶೇಷ ಮೆರುಗು ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ವೇಳೆ ಪಟ್ಟಣದ ಪುರಸಭೆ ಸದಸ್ಯರು, ಮುಖಂಡರು, ಹಿರಿಯರು, ಗ್ರಾಮಸ್ಥರು, ರೈತರು, ಶಿಕ್ಷಕರು, ವೈದ್ಯರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಪಂ, ತಾಪಂ ಎಲೆಕ್ಷನ್‌ಗೆ ಎಸ್‌ಐಆರ್‌ ಮತಪಟ್ಟಿ ಇಲ್ಲ? - ಹಳೆ ಪಟ್ಟಿ ಬಳಕೆ: ಖಂಡ್ರೆ
ಹಾಲು, ಮೊಸರು ಆಯ್ತು, ಇದೀಗ ಬಸ್‌ ದರ ಏರಿಕೆ - ನ.5ರಿಂದಲೇ ಹೊಸ ದರ