ಮುಂಡಗೋಡ: ದುಷ್ಕರ್ಮಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಪಟ್ಟಣದ ಎನ್ಎಂಡಿ ಗ್ರೂಪ್ ಮಾಲೀಕ ಜಮೀರ್‌ಅಹ್ಮದ ದರ್ಗಾವಾಲೆ ಸುರಕ್ಷಿತವಾಗಿದ್ದಾರೆ. ಕಾರಿನಲ್ಲಿ ಕರೆದೊಯ್ದ ಅಪಹರಣಕಾರರು ಹುಬ್ಬಳ್ಳಿಯ ಗದಗ ರಸ್ತೆಯ ರಿಂಗ್ ರೋಡ್‌ನಲ್ಲಿ ಬಿಟ್ಟು ಹೋಗಿದ್ದು, ಬಳಿಕ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಗುರುವಾರ ರಾತ್ರಿ ಪಟ್ಟಣದ ತಾಲೂಕು ಕ್ರೀಡಾಂಗಣದಿಂದ ಜಮೀರಹ್ಮದ ದರ್ಗಾವಾಲೆ ತಮ್ಮ ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ತೆರಳುವಾಗ ಸುಮಾರು ೮ ಗಂಟೆ ವೇಳೆಗೆ ಶಾಸಕರ ಮಾದರಿ ಶಾಲೆ ಬಳಿ ರೌಡಿಗಳ ತಂಡ, ಹಿಂದಿನಿಂದ ಸ್ಕೂಟಿಗೆ ಡಿಕ್ಕಿ ಹೊಡೆ ಜಮೀರ್ ಅಹ್ಮದ್ ದರ್ಗಾವಾಲೆಗೆ ಚಾಕುವಿನಿಂದ ಇರಿದಿದ್ದರು. ನಂತರ ಅವರು ತಾವು ತಂದಿದ್ದ ವಾಹನದಲ್ಲಿ ಎತ್ತಾಕೊಂಡು ಪರಾರಿಯಾಗಿದ್ದರು. ವಿಷಯ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು ೫ ತಂಡಗಳನ್ನು ರಚಿಸಿ ಪರಾರಿಯಾದ ಆಗುಂತಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಅಪಹರಣಕಾರರು ರಾತ್ರಿ ಸುಮಾರು ೧೧ ಗಂಟೆಗೆ ಹುಬ್ಬಳ್ಳಿಯ ಗದಗ ರಿಂಗ್ ರಸ್ತೆಯಲ್ಲಿಯೇ ಜಮೀರ್ ಅಹ್ಮದ್ ದರ್ಗಾವಾಲೆ ಅವರನ್ನು ಬಿಟ್ಟುಹೋಗಿದ್ದಾರೆ.
ಹಣಕ್ಕಾಗಿ ನಡೆದ ಅಪಹರಣ
ಕಾರವಾರ: ಮುಂಡಗೋಡ ನಿವಾಸಿ ಜಮೀರ್ ಅಹಮದ್ ದರ್ಗಾವಾಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ನಗರದಲ್ಲಿ ಪ್ರತಿಕ್ರಿಯೆ ನೀಡಿ, ಇದು ಹಣಕ್ಕಾಗಿ ನಡೆದ ಅಪಹರಣವಾಗಿದೆ ಎಂದಿದ್ದಾರೆ.ಅಪಹರಣ ಮಾಡಿದವರ ಹುಡುಕಾಟ ಮುಂದುವರಿದಿದೆ. ಗುರುವಾರ ರಾತ್ರಿ ಬೈಕ್ ನಲ್ಲಿ ಹೊಗುತ್ತಿರುವಾಗ ಹಿಂದಿನಿಂದ ಕಾರಿನಿಂದ ಗುದ್ದಿದ್ದಾರೆ. ಕಾರು ಗುದ್ದುತ್ತಿದ್ದಂತೆ ಬೈಕ್ ಸವಾರ ಜಮೀರ್ ದರ್ಗಾವಾಲೆ ಬೈಕಿನಿಂದ ಕೆಳಕ್ಕೆ ಉರುಳಿದ್ದು. ಕೂಡಲೆ ಜಮೀರ್ ಹಾಗೂ ಆತನ ಜತೆ ಇದ್ದವನ ಮೇಲೆ ಹಲ್ಲೆ ಮಾಡಲಾಗಿದೆ.ಹಲ್ಲೆ ಮಾಡಿ ಜಮೀರ್ ದರ್ಗಾವಾಲೆ ಎಂಬಾತನನ್ನು ಕಾರಿನಲ್ಲಿ ಹಾಕಿ ಒಯ್ಯಲಾಗಿತ್ತು. ಪ್ರಕರಣ ದಾಖಲಿಸಿ ಮುಂಡಗೋಡ ಪೊಲೀಸ್ ತಂಡ ತನಿಖೆ ಕೈಗೊಂಡಿದೆ. ಅಪಹರಣ ಮಾಡಿದವರು ಜಮೀರ್ ಕುಟುಂಬಸ್ಥರಿಗೆ ಕರೆ ಮಾಡಿ ₹35 ಲಕ್ಷ ಡಿಮ್ಯಾಂಡ್ ಕೂಡ ಮಾಡಿದ್ದು, ಹಣ ಕೊಡದಿದ್ದರೆ ಜಮೀರ್ ಅವರನ್ನು ಸಾಯಿಸುವುದಾಗಿ ಬೆದರಿಸಿದ್ದರು. ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಹಾವೇರಿ ಬಳಿಯ ಟೋಲ್ ಗೇಟ್‌ನಲ್ಲಿ ಜಮೀರ್ ಅವರನ್ನು ಅಪಹರಣಕಾರರು ಬಿಟ್ಟು ಹೋಗಿದ್ದಾರೆ. ಅವರ ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ತಿಳಿದುಬರಲಿದೆ ಎಂದರು.