ಧಾರವಾಡ:
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ, ಸಂಸ್ಕೃತಿಯ ಕಾರ್ಯ ಮಾಡಬೇಕಾದ ಪರಿಷತ್ತಿನಲ್ಲಿ ಎರಡು ಅವಧಿ ಕಾಲ ಅದರಲ್ಲೂ ಮಹೇಶ ಜೋಶಿ ಅವರ ಅವಧಿಯಲ್ಲಿ ರಾಜಕೀಯ ಹಸ್ತಕ್ಷೇಪವಾಗಿದೆ. ಕನ್ನಡ ವಿರೋಧಿ ಹಾಗೂ ಸರ್ವಾಧಿಕಾರ ಆಡಳಿತ ನಡೆದಿದೆ. ಹೀಗಾಗಿ ಸಮಾನ ಮನಸ್ಕರು ಸೇರಿ ಅವರ ವಿರುದ್ಧ ದೂರು ನೀಡುವ ಮೂಲಕ ಪರಿಷತ್‌ಗೆ ಸದ್ಯ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಅವರ ಮೇಲೆ ನ್ಯಾಯಾಲಯಕ್ಕೆ ನೀಡಿದ 17 ದೂರುಗಳ ಪೈಕಿ 16 ಸಾಬೀತಾಗಿದ್ದು ₹ 8 ಕೋಟಿ ಭ್ರಷ್ಟಾಚಾರವೂ ಸಹ ಸಾಬೀತಾಗಿದೆ. ಸಾಹಿತ್ಯ ಪರಿಷತ್ತಿನಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಸಮಾನ ಮನಸ್ಕರು ಸೇರಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬೆಂಬಲಿಸಲು ಸಿದ್ಧರಾಮಯ್ಯ ಅವರು ಮನವಿ ಮಾಡಿದರು. ಜತೆಗೆ ಯಾವತ್ತೂ ಕಸಾಪದಲ್ಲಿ ರಾಜಕೀಯ ನುಸುಳಬಾರದು ಎಂದು ಪ್ರತಿಪಾದಿಸಿದರು.
ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಮಾತನಾಡಿ, ಗುರು ಗೋವಿಂದ ಭಟ್‌ರ ಮರಿಮೊಮ್ಮಗ ನಾನು, ಚಂದನ ಟಿವಿಯ ಮಧುರ ಮಧುರವೀ ಮಂಜುಳ ಗಾನ ರೂವಾರಿ ನಾನೇ ಎಂದು ಹೇಳಿಕೊಂಡು ಕಸಾಪ ಚುನಾವಣೆಯಲ್ಲಿ ರಾಜಕೀಯ ಮೂಲಕ ಬಂದ ಮಹೇಶ ಜೋಶಿ ಇಡೀ ಕಸಾಪ ವಾತಾವರಣ ಹಾಳು ಮಾಡಿದ್ದಾರೆ. ಸರ್ವಾಧಿಕಾರ, ಆಡಳಿತ ದುರ್ಬಳಕೆ, ಭ್ರಷ್ಟಾಚಾರ ಮಾಡಿದ್ದಾರೆ. ಇದೀಗ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಕಸಾಪಕ್ಕೆ ಸ್ಪರ್ಧಿಸುವ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಎರಡು ಅವಧಿಗೆ ಅಧಿಕಾರಿ ಶಾಹಿ ವರ್ಗ ಬಂದ ಕಸಾಪ ಹಾಳು ಮಾಡಿದ್ದು ಮತ್ತೊಬ್ಬ ಅಧಿಕಾರಿ ಬೇಡ. ಈ ಹಿನ್ನೆಲೆಯಲ್ಲಿ ಕನ್ನಡಕ್ಕಾಗಿ ಶ್ರಮಿಸಿದ ಸಾಹಿತಿ, ಪತ್ರಕರ್ತ ಜಾಣಗೆರೆ ಅವರನ್ನು ಈ ಬಾರಿ ಗೆಲ್ಲಿಸಲು ರಾಜ್ಯಾದ್ಯಂತ ಪ್ರವಾಸದ ಮೂಲಕ ಕನ್ನಡದ ಮನಸ್ಸುಗಳಿಗೆ ಮನವಿ ಮಾಡುತ್ತಿದ್ದೇವೆ ಎಂದರು.ಭರವಸೆಗಳಿವೆ:
ಸುದ್ದಿಗೋಷ್ಠಿಯಲ್ಲಿ ಆರ್.ಜಿ. ಹಳ್ಳಿ ನಾಗರಾಜ್, ಸಿ.ಎಂ. ಚನ್ನಬಸಪ್ಪ, ಶಶಿಧರ ತೋಡಕರ, ಬಸು ಸೂಳಿಬಾವಿ ಇದ್ದರು.