ಮಾಯಾವತಿ ಹುಟ್ಟುಹಬ್ಬ ಅಂಗವಾಗಿ ಜನಕಲ್ಯಾಣ ದಿವಸ್‌

KannadaprabhaNewsNetwork |  
Published : Jan 15, 2026, 02:00 AM IST
13ಎಚ್ಎಸ್ಎನ್18 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಪಿ ಮುಖಂಡರು. | Kannada Prabha

ಸಾರಾಂಶ

ಜ.೧೫ ರಂದು ಮಾಯಾವತಿಯವರ ಹುಟ್ಟುಹಬ್ಬವನ್ನು ಎಲ್ಲ ವಲಯ ಮಟ್ಟದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಅದರಂತೆ ಹಾಸನ ವಲಯಕ್ಕೆ ಬರುವ ನಾಲ್ಕು ಜಿಲ್ಲೆಗಳಾದ ಹಾಸನ, ಚಿಕ್ಕಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಮಂಗಳೂರು ಸೇರಿದಂತೆ ಹಾಸನ ವಲಯದ ಎಲ್ಲಾ ಜಿಲ್ಲೆಗಳು ಒಳಗೊಂಡಂತೆ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಚನ್ನರಾಯಪಟ್ಟಣದ ಹಳೆ ಬಾಸ್ ನಿಲ್ದಾಣದ ಎದುರು ಇರುವ ಶ್ರೀ ವಿನಾಯಕ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಆವರಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಬೃಹತ್ ವೇದಿಕೆ ಕಾರ್ಯಕ್ರಮವನ್ನು ಆಚರಿಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ಹುಟ್ಟು ಹಬ್ಬದ ಅಂಗವಾಗಿ ಜನ ಕಲ್ಯಾಣ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಜಿ ಸೋಮಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ತಿಂಗಳು ಜ.೧೫ ರಂದು ಮಾಯಾವತಿಯವರ ಹುಟ್ಟುಹಬ್ಬವನ್ನು ಎಲ್ಲ ವಲಯ ಮಟ್ಟದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಅದರಂತೆ ಹಾಸನ ವಲಯಕ್ಕೆ ಬರುವ ನಾಲ್ಕು ಜಿಲ್ಲೆಗಳಾದ ಹಾಸನ, ಚಿಕ್ಕಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಮಂಗಳೂರು ಸೇರಿದಂತೆ ಹಾಸನ ವಲಯದ ಎಲ್ಲಾ ಜಿಲ್ಲೆಗಳು ಒಳಗೊಂಡಂತೆ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಚನ್ನರಾಯಪಟ್ಟಣದ ಹಳೆ ಬಾಸ್ ನಿಲ್ದಾಣದ ಎದುರು ಇರುವ ಶ್ರೀ ವಿನಾಯಕ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಆವರಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಬೃಹತ್ ವೇದಿಕೆ ಕಾರ್ಯಕ್ರಮವನ್ನು ಆಚರಿಸಲು ತೀರ್ಮಾನಿಸಲಾಗಿದೆ.

ಬೆಳಗ್ಗೆ ೧೦ ಗಂಟೆಗೆ ಮಖಾನ್ ಸರ್ಕಲ್‌ನಿಂದ, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ನವೋದಯ ವೃತ್ತ, ಆಸ್ಪತ್ರೆ ವೃತ್ತದ ಮೂಲಕ ಆಂಜನೇಯ ದೇವಸ್ಥಾನ ಆವರಣಕ್ಕೆ ತಲುಪಲಿದೆ ಎಂದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ಬಿ ಎಸ್ ಪಿ ಪಕ್ಷದ ರಾಷ್ಟ್ರೀಯ ಸಂಯೋಜಕರು ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿಗಳಾದ ರಾಜಾರಾಮ್ ರವರು, ರಾಜ್ಯ ಸಂಯೋಜಕರು ಹಾಗೂ ವಕೀಲರಾದ ಗಂಗಾಧರ್ ಬಹುಜನ್, ಬಿಎಸ್ಪಿ ರಾಜ್ಯಾಧ್ಯಕ್ಷರಾದ ಡಾಕ್ಟರ್ ಎಂ ಕೃಷ್ಣಮೂರ್ತಿ, ಬಿಎಸ್ಪಿ ರಾಜ್ಯ ಉಪಾಧ್ಯಕ್ಷರಾದ ಜಾಕಿರ್ ಹುಸೇನ್, ಹಾಸನ ವಲಯ ಉಸ್ತುವಾರಿಗಳಾದ ಕೆ ಟಿ ರಾಧಾಕೃಷ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್ಪಿ ಪಕ್ಷದ ಹಾಸನ ಜಿಲ್ಲಾಧ್ಯಕ್ಷ ಲಕ್ಷ್ಮಣ ಕೀರ್ತಿ ವಹಿಸಿಕೊಳ್ಳಲಿದ್ದಾರೆ. ಹಾಸನ ವಲಯದ ನಾಲ್ಕು ಜಿಲ್ಲೆಗಳ ಜಿಲ್ಲಾ ಸಮಿತಿ, ಅಸೆಂಬ್ಲಿ ಸಮಿತಿ, ತಾಲೂಕು ಸಮಿತಿ, ಎಲ್ಲ ಹಂತದ ಪದಾಧಿಕಾರಿಗಳು ಆಗಮಿಸುತ್ತಿದ್ದಾರೆ. ಹಾಗೆಯೇ ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಲು ಚನ್ನರಾಯಪಟ್ಟಣ ತಾಲೂಕಿನ ಎಲ್ಲಾ ಗ್ರಾಮಗಳ ಬಹುಜನ ಬಂಧುಗಳು ತಮ್ಮ ಕೈಲಾದ ತನು ಮನ ಧನ ಅರ್ಪಿಸುವ ಜೊತೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮಕ್ಕೆ ಬಂದು ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕು ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಕೀರ್ತಿ ಮಾತನಾಡಿ, ೨೦೦೭ರಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಿ ಉತ್ತರ ಪ್ರದೇಶದಲ್ಲಿ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಪರಿಣಾಮಕಾರಿ ಆಡಳಿತ ನೀಡಿರುವ ಮಾಜಿ ಮುಖ್ಯಮಂತ್ರಿ ಬೆಹನ್ ಜೀ ಮಾಯಾವತಿ ಅವರನ್ನು ಬೆಂಬಲಿಸಿ ಎಂದರು.

ಬಿಎಸ್ಪಿ ತಾಲೂಕು ಅಧ್ಯಕ್ಷ ಕುಂದೂರು ರಾಜು ಮಾಸ್ಟರ್ ಮಾತನಾಡಿ, ಮಾಯಾವತಿಯವರ ಆಡಳಿತದ ಅವಧಿಯಲ್ಲಿ ಉತ್ತರ ಪ್ರದೇಶದದಲ್ಲಿ ಜಾರಿಗೆ ತಂದ ಭೂ ಸುಧಾರಣೆಗಳಾದ ಭೂರಹಿತರಿಗೆ ಭೂಮಿ ಹಂಚಿಕೆ, ನೀರಾವರಿ ಸೌಲಭ್ಯಗಳು, ವಸತಿ ರಹಿತರಿಗೆ ವಸತಿ ಯೋಜನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ವಿಶ್ವವಿದ್ಯಾಲಯಗಳ ಸ್ಥಾಪನೆ, ಐಎಎಸ್, ಐಪಿಎಸ್, ಐಎಫ್‌ಎಸ್ ತರಬೇತಿ ಕೇಂದ್ರಗಳ ಸ್ಥಾಪನೆ, ಸರ್ಕಾರಿ ಉದ್ಯೋಗಗಳ ಭರ್ತಿ, ಬ್ಯಾಕ್ಲಾಗ್ ಹುದ್ದೆಗಳ ಭರ್ತಿ, ಪೌರಕಾರ್ಮಿಕರ ಹುದ್ದೆ ಕಾಯಂ, ಎಲ್ಲಾ ಮೇಲ್ಜಾತಿಯ ಬಡವರಿಗೂ ಕೂಡ ಮೀಸಲಾತಿಯಲ್ಲಿ ಪಾಲು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡುವ ಮಹತ್ತರವಾದ ತೀರ್ಮಾನ ಕೈಗೊಂಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಕೀರ್ತಿ, ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಬಿಎಸ್ಪಿ ತಾಲೂಕು ಅಧ್ಯಕ್ಷರಾದ ಕುಂದೂರು ರಾಜು ಮಾಸ್ಟರ್, ಜಿಲ್ಲಾ ಕಾರ್ಯದರ್ಶಿಗಳು ಹಾಗೂ ತಾಲೂಕು ಉಸ್ತುವಾರಿಗಳಾದ ಸಿದ್ಧಲಿಂಗಯ್ಯ, ಬಿಎಸ್ಪಿ ತಾಲೂಕು ಸಂಯೋಜಕರುಗಳಾದ ಸಿ ಎಂ ಶಿವಕುಮಾರ್, ಶಿವಣ್ಣನವರು, ಬಿಎಸ್ಪಿ ತಾಲೂಕು ಕಚೇರಿ ಕಾರ್ಯದರ್ಶಿ ಎ ಟಿ ಸಂತೋ? ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ