ಕಾಂಗ್ರೆಸ್‌ ನಾಯಕರು ಲಜ್ಜೆಗೆಟ್ಟಿದ್ದಾರೆ : ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ

KannadaprabhaNewsNetwork |  
Published : Apr 08, 2025, 12:35 AM ISTUpdated : Apr 08, 2025, 01:11 PM IST
7 | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದವರು ಲಜ್ಜೆಗೆಟ್ಟಿದ್ದಾರೆ. ರಾಹುಲ್‌ಗಾಂಧಿ, ಪ್ರಿಯಾಂಕ ವಾದ್ರಾ ಓಲೈಕೆಗಾಗಿ ರಾತ್ರಿ ವೇಳೆ ಬಂಡಿಪುರದಲ್ಲಿ ವಾಹನ ಸಂಚಾರಕ್ಕೆ ಒಪ್ಪಿದ್ದಾರೆ, ಮುಸ್ಲಿಮರ ಓಲೈಕೆಗೂ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

 ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದವರು ಲಜ್ಜೆಗೆಟ್ಟಿದ್ದಾರೆ. ರಾಹುಲ್‌ಗಾಂಧಿ, ಪ್ರಿಯಾಂಕ ವಾದ್ರಾ ಓಲೈಕೆಗಾಗಿ ರಾತ್ರಿ ವೇಳೆ ಬಂಡಿಪುರದಲ್ಲಿ ವಾಹನ ಸಂಚಾರಕ್ಕೆ ಒಪ್ಪಿದ್ದಾರೆ, ಮುಸ್ಲಿಮರ ಓಲೈಕೆಗೂ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. 

ನಗರದಲ್ಲಿ ಸೋಮವಾರ ಆರಂಭವಾದ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿದ ಬಳಿಕ ಪುರಭವನ ಎದುರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಟ್ಟು 48 ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ ಎಂದರು. 

ಇತಿಹಾಸದಲ್ಲಿ ಇದೊಂದು ದಾಖಲೆ. ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದವರು ಲಜ್ಜೆಗೆಟ್ಟವರಿದ್ದಾರೆ. ಏಕೆಂದರೆ ಪಕ್ಷದ ವರಿಷ್ಠರಾದ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕ ವಾದ್ರ ಅವರನ್ನು ಕೇರಳದ ಜನ ಗೆಲ್ಲಿಸಿದರು ಎಂಬ ಕಾರಣಕ್ಕೆ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಅಲ್ಲದೆ ಆನೆ ತುಳಿದು ಕೇರಳದ ವ್ಯಕ್ತಿ ಮೃತಪಟ್ಟಿರುವುದಕ್ಕೆ 25 ಲಕ್ಷ ಪರಿಹಾರ ನೀಡಿದ್ದಾರೆ. ರಾಜ್ಯದ ವ್ಯಕ್ತಿ ಮೃತಪಟ್ಟಾಗ ಕೇವಲ 5 ಲಕ್ಷ ಪರಿಹಾರ ನೀಡಿದ್ದಾರೆ. 

ಇದು ಯಾವ ನೀತಿ ಎಂದು ಅವರು ಪ್ರಶ್ನಿಸಿದರು.ರಾಜ್ಯ ಸರ್ಕಾರವು ಎಲ್ಲಾ ಮಾದರಿಯ ತೆರಿಗೆಯನ್ನು ಹೆಚ್ಚಳಗೊಳಿಸಿದೆ. ಗ್ಯಾರಂಟಿ ಯೋಜನೆಗಳನ್ನು ನೀಡಲು ಇಷ್ಟೊಂದು ಸಾಹಸ ಮಾಡುತ್ತಿದ್ದಾರೆ. ಇತ್ತೀಚೆಗೆ ರೇವಂತ್‌ರೆಡ್ಡಿ ನನ್ನನ್ನು ಭೇಟಿಯಾಗಿದ್ದರು. ಆಗ ಏನೇನೋ ಹೇಳಿಕೆ ಕೊಡುತ್ತಿದ್ದೀರ ಎಂದು ಕೇಳಿದೆ. ಅದಕ್ಕೆ ಅವರು ಗ್ಯಾರಂಟಿ ಕೊಡುವುದು ಕಷ್ಟವಾಗಿದೆ ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಹಣೆ ಬರಹ. ಒಂದು ಕಡೆ ವಾಲ್ಮೀಕಿ ಹಗರಣ, ಮತ್ತೊಂದು ಕಡೆ ಅಧಿಕಾರಿಗಳ ಆತ್ಮಹತ್ಯೆ ಆಗುತ್ತಿದೆ. ಶಾಸಕರ ವಿರುದ್ಧ ಮಾತನಾಡಿದರೆ ಎಫ್‌.ಐ.ಆರ್‌ದಾಖಲಿಸುತ್ತಾರೆ

. ಶಾಸಕರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡರೂ ಎಫ್‌.ಐಆರ್‌ಹಾಕುತ್ತಿಲ್ಲ. ಇದೆಂತ ವಿಪರ್ಯಾಸ ಎಂದು ಅವರು ಪ್ರಶ್ನಿಸಿದರು.ಗೃಹಲಕ್ಷ್ಮೀ ಯೋಜನೆಗೆ ಹಣ ಕೊಟ್ಟಿಲ್ಲ ಎಂದರೆ ಅದೇನೂ ಸಂಬಳವೇ ಎನ್ನುತ್ತಾರೆ ಸಿದ್ದರಾಮಯ್ಯ. ಮರಣ ಪ್ರಮಾಣ ಪತ್ರ ಶುಲ್ಕ ಸೇರಿದಂತೆ 48 ವಸ್ತುಗಳ ಬೆಲೆ ಹೆಚ್ಚಿಸಲಾಗಿದೆ.

 ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಮೂರು ತಿಂಗಳಾದರೂ ಆದೇಶಿಸಿಲ್ಲ. ತ್ರಿವಳಿ ತಲಾಕ್‌, ಆರ್ಚಿಕಲ್‌370 ರದ್ದುಪಡಿಸಿದರೆ ರಕ್ತಕೋಕುಳಿ ಹರಿಯುತ್ತದೆ ಎಂದಿದ್ದರು. ಏನಾಯಿತು? ನಿಮ್ಮ ತಾತ, ಮುತ್ತಜ್ಜ ಬಂದರೂ ವಕ್ಫ್‌ಕಾಯ್ದೆ ಜಾರಿ ತರುವುದನ್ನು ತಡೆಯಲು ಆಗದು ಎಂದರು.ಸರ್ಕಾರ ಜನರ ತಲೆಬೋಳಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿದ್ದರೂ ಬೆಲೆ ಗ್ರಾಹಕರಿಗೆ ತಟ್ಟುವುದಿಲ್ಲ. ಏಕೆಂದರೆ ಆ ಹಣವನ್ನು ಆಯಿಲ್ ಕಾರ್ಪೊರೇಷನ್ ಕಂಪೆನಿಗಳು ಬರಿಸುತ್ತವೆ. ಹಾಗಾಗಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. 

ಹಣ ಬೇಕಾದರೆ ಸಿಎಂ,ಡಿಸಿಎಂ,ಕೆಪಿಸಿಸಿ‌ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡುವ ಗುಮ್ಮನನ್ನು ಬಿಟ್ಟು ಒಬ್ಬರನ್ನು ಕಳುಹಿಸುತ್ತಿದ್ದಾರೆ ಎಂದು ಟೀಕಿಸಿದರು. ಮೋದಿ ಹೊಗಳಿಕೆರಾತ್ರಿ 2 ಗಂಟೆವರೆಗೂ ರಾಜ್ಯಸಭೆಯಲ್ಲಿ ವಕ್ಫ್‌ಕಾಯ್ದೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಜಾರಿಗೊಳಿಸಲಾಗಿದೆ. ಇದೊಂದು ಐತಿಹಾಸಿಕ ನಿರ್ಣಯ ಎಂದಾಗ ಸಾರ್ವಜನಿಕರು ಮೋದಿ ಮೋದಿ ಎಂದು ಕೂಗಿದರು. ಈ ವೇಳೆ ಪ್ರಹ್ಲಾದ್‌ಜೋಶಿ ಅವರು ಸಭೀಕರನ್ನು ಹುರಿದುಂಬಿಸಿದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’