ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜ.9ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೆಳಗ್ಗೆಯಿಂದ ಸಂಜೆ 5 ಗಂಟೆಗೆ ನಡೆಯುವ ಜನತಾ ದರ್ಶನ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗತ್ತದೆ. ಅಧಿಕಾರಿಗಳು ಸಮನ್ವತೆಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ತೊಂದರೆ ಇದ್ದರೆ ಅವುಗಳನ್ನು ತಮ್ಮ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೇದಿಕೆ ಪಕ್ಕದಲ್ಲಿ ಕೌಂಟರ್ ಸ್ಥಾಪಿಸಬೇಕು. ಜನರಿಗೆ ಕುಂದು ಕೊರತೆಗಳ ಮಾಹಿತಿಯನ್ನು ಸ್ಥಳದಲ್ಲಿ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳಿಗೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕೆಲಸ ನಿರ್ವಹಿಸಲು ಸೂಚನೆ ನೀಡಿದರು.10-15 ಕೌಂಟರ್ ಸ್ಥಾಪಿಸಬೇಕು. ಅರ್ಜಿ ಕೊಟ್ಟ ಮೇಲೆ ಅವರ ಕಾರ್ಯವನ್ನು ಗುರುತಿಸಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗೃಹಲಕ್ಷ್ಮಿ ನಾಲ್ಕೈದು ಮಾಹಿತಿ ನೀಡಬೇಕೆಂದರು. ಒಂದೊಂದು ಸೆಕ್ಷನ್ ವೈಸ್ ಸ್ಟಾಲ್‍ಗಳನ್ನು ಹಾಕಿ ಒಟ್ಟು 15 ಸಿಸ್ಟಂಗಳನ್ನು ಇಟ್ಟು ಯಾವ ಯಾವ ಇಲಾಖೆಗಳಿಗೆ ಒಂದೊಂದು ಕೆಲಸ ಒಪ್ಪಿಸುವುದು ಗೃಹಲಕ್ಷ್ಮಿ ಪ್ರತಿಯೊಬ್ಬ ವ್ಯಕ್ತಿಗೂ ಸಹ ಸರಕಾರದ ಮೂಲ ಸೌಕರ್ಯಗಳನ್ನು ಒದಗಿಸುವುದೇ ಇದರ ಉದ್ದೇಶವಾಗಿದೆ ಎಂದು ಬಿ. ಫೌಜೀಯಾ ತರನ್ನುಮ್ ಅವರು ಹೇಳಿದರು.
ಪ್ರತಿಯೊಂದು ಜನತಾ ದರ್ಶನ ಮಾಡುವ ಕುಂದುಕೊರತೆಗಳನ್ನು ಬಿಟ್ಟು ಯಾವ ಇಲಾಖೆಗಳಿಗೆ ಎಷ್ಟೆಷ್ಟು ಅರ್ಜಿಗಳು ಬಂದಿವೆ ಮತ್ತು ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅವರು ಮಾಹಿತಿ ಕಲೆ ಹಾಕಿ ಅವರ ಸಮಸ್ಯೆ ಪರಿಹರಿಸಬೇಕೆಂದು. ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಜನರು ಬರಿ ದೂರು ಕೂಡುವುದಿಲ್ಲ ನಾವು ಅವರಿಗೋಸ್ಕರ ಏನು ಮಾಡಬೇಕೆಂದು ತಿಳಿದುಕೊಳ್ಳಬೇಕೆಂದರು.
ಸಭೆಯಲ್ಲಿ ಡಿ.ಸಿ. ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರೂಪಿಂದ್ರ ಕೌರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್, ಡಿ.ಹೆಚ್.ಓ. ಡಾ. ರಾಜಶೇಖರ ಮಾಲಿ, ಜಿ.ಪಂ. ಯೋಜನಾ ನಿರ್ದೇಶಕ ಜಗದೇವಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.